»   » 'ಫಿಲ್ಮಿಬೀಟ್ ಕನ್ನಡ' ಫಲಶೃತಿ : ಅಭಿಮಾನಿಯ ನೆರವಿಗೆ ಮುಂದಾದ ವಿಜಿ

'ಫಿಲ್ಮಿಬೀಟ್ ಕನ್ನಡ' ಫಲಶೃತಿ : ಅಭಿಮಾನಿಯ ನೆರವಿಗೆ ಮುಂದಾದ ವಿಜಿ

Posted By:
Subscribe to Filmibeat Kannada

ಯಾದಗಿರಿ ಜಿಲ್ಲೆಯ ದುನಿಯಾ ವಿಜಯ್ ಅಭಿಮಾನಿಯೊಬ್ಬ ಕಾಲು ಕಳೆದುಕೊಂಡ ವಿಷಯವನ್ನು ಇಂದು ಬೆಳ್ಳಗೆ ನಿಮ್ಮ 'ಒನ್ ಇಂಡಿಯಾ ಕನ್ನಡ' ಮತ್ತು 'ಫಿಲ್ಮಿಬೀಟ್ ಕನ್ನಡ' ವರದಿ ಮಾಡಿತ್ತು. ಇದೀಗ ಈ ವರದಿಗೆ ಸ್ವತಃ ನಟ ದುನಿಯಾ ವಿಜಯ್ ಪ್ರತಿಕ್ರಿಯೆ ನೀಡಿದ್ದಾರೆ.

ಹುಚ್ಚು ಅಭಿಮಾನದಿಂದ ಕಾಲು ಕಳೆದುಕೊಂಡ ದುನಿಯಾ ವಿಜಯ್ ಅಭಿಮಾನಿ!

'ಫಿಲ್ಮಿಬೀಟ್ ಕನ್ನಡ' ವರದಿಗಾರರೊಂದಿಗೆ ಮಾತನಾಡಿದ ದುನಿಯಾ ವಿಜಯ್, ಕಾಲು ಕಳೆದುಕೊಂಡ ಅಭಿಮಾನಿಗೆ ನೆರವು ನೀಡಲು ಮುಂದಾಗಿದ್ದಾರೆ. ಸದ್ಯ ಆ ಅಭಿಮಾನಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದು, ಆತನ ಚಿಕಿತ್ಸೆಗೆ ನೆರವಾಗುವುದಾಗಿ ವಿಜಿ ಹೇಳಿದ್ದಾರೆ.

Duniya vijay decided to help his die hard fan

ಅಂದಹಾಗೆ, ನಟ ದುನಿಯಾ ವಿಜಯ್ ಮೇಲೆ ಹುಚ್ಚು ಅಭಿಮಾನ ಹೊಂದಿದ್ದ ಯಾದಗಿರಿಯ ಹುಲಗಪ್ಪನಿಗೆ ಆತನ ಸ್ನೇಹಿತರು ''ದುನಿಯಾ ವಿಜಯ್​​ ಅಭಿಮಾನಿಯಾದ ನೀನು ಅವರಂತೆಯೇ ಸ್ಟಂಟ್​ ಮಾಡು'' ಎಂದು ಚಾಲೆಂಜ್ ಮಾಡಿದ್ದರು. ಬಳಿಕ ದುನಿಯಾ ವಿಜಯ್ ಅವರ ದೊಡ್ಡ ಅಭಿಮಾನಿ ಎಂದು ಸಾಬೀತು ಮಾಡುವುದಕ್ಕೆ ಹೋಗಿ ಈ ಯುವಕ 15 ಅಡಿ ಎತ್ತರದ ಗೋಡೆ ಮೇಲಿಂದ ಹಾರಿ ತನ್ನ ಕಾಲುಗಳನ್ನು ಕಳೆದುಕೊಂಡಿದ್ದ.

ಎರಡು ಕಾಲಿನ ಪಾದದ ಮೂಳೆಗಳು ತಪ್ಪಿದ್ದ ಹುಲಿಗಪ್ಪ ಚಿಕಿತ್ಸೆಗಾಗಿ ಹಣಕಾಸಿನ ನೆರವು ಮಾಡಿ ಎಂದು ನಟ ದುನಿಯಾ ವಿಜಯ್​​ ಬಳಿ ಮನವಿ ಮಾಡಿದ್ದರು. ಅಭಿಮಾನಿಯ ಮನವಿಗೆ ಈಗ ನಟ ದುನಿಯಾ ವಿಜಯ್ ಸ್ಪಂದಿಸಿದ್ದಾರೆ.

English summary
Actor Duniya Vijay decided to help his die hard fan Hulagappa.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada