ಪಾನಿಪುರಿ ಕಿಟ್ಟಿ ಮೇಲೂ ಬಿತ್ತು ಕೇಸ್: ಕಿಟ್ಟಿಗೂ ಎದುರಾಯ್ತು ಸಂಕಷ್ಟ
Recommended Video

ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ಮತ್ತು ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದುನಿಯಾ ವಿಜಯ್, ಪ್ರಸಾದ್ ಸೇರಿದಂತೆ ನಾಲ್ಕು ಜನ ಬಂಧನವಾಗಿದ್ದು, ಕೇಂದ್ರ ಕಾರಗೃಹದಲ್ಲಿದ್ದಾರೆ.
ಪಾನಿಪುರಿ ಕಿಟ್ಟಿ ಅವರ ಅಣ್ಣನ ಮಗ ಮಾರುತಿ ಗೌಡ ಅವರ ಸೂಚನೆಯಿಂತೆ ಕಿಟ್ಟಿ ದೂರು ದಾಖಲಿಸಿದ್ದರು. ಆದ್ರೀಗ, ಕಿಟ್ಟಿ ಮೇಲೂ ಕೇಸ್ ಬಿದ್ದಿದೆ.
ಕಿಟ್ಟಿ ವಿರುದ್ಧದ ದೂರಿನ ಅನ್ವಯ ಎಫ್.ಐ.ಆರ್ ಕೂಡ ದಾಖಲಾಗಿದ್ದು, ಬಹುಶಃ ಕಿಟ್ಟಿಗೂ ಸಂಕಷ್ಟ ಎದುರಾಗಲಿದೆ. ಅಷ್ಟಕ್ಕೂ, ಪಾನಿಪೂರಿ ಕಿಟ್ಟಿ ದೂರು ನೀಡಿದ್ದು ಯಾರು.? ಯಾವ ಕಾರಣಕ್ಕಾಗಿ ದೂರು ನೀಡಲಾಗಿದೆ.? ಏನಿದೆ ಎಫ್.ಐ.ಆರ್ ಪ್ರತಿಯಲ್ಲಿ ಎಂದು ಮುಂದೆ ಓದಿ.....

ದುನಿಯಾ ವಿಜಿ ನೀಡಿದ ದೂರು
ಪಾನಿಪುರಿ ಕಿಟ್ಟಿ ಅವರು ವಿಜಿ ವಿರುದ್ಧ ದೂರು ನೀಡಿದ ಮೇಲೆ, ಈಗ ವಿಜಿ ಕಡೆಯಿಂದ ಕಿಟ್ಟಿ ಮೇಲೂ ಕೇಸ್ ದಾಖಲಾಗಿದೆ. ಕೊಲೆ ಬೆದರಿಕೆ, ಜೀವ ಬೆದರಿಕೆ ಹಾಗೂ ಹಲ್ಲೆ ಮಾಡಿದ್ದಾರೆ, ನನ್ನ ಮಗನಿಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ವಿಜಿ ದೂರು ನೀಡಿದ್ದಾರೆ.

ಏನಿದೆ ದೂರಿನಲ್ಲಿ.?
''ಕಾನೂನಿನ ಬೆಲೆ ಕೊಟ್ಟು, ಪೊಲೀಸರ ಮಾತಿಗೆ ಗೌರವ ಕೊಟ್ಟು ಮಾರುತಿ ಎಂಬುವವರನ್ನ ಠಾಣೆಯ ಬಳಿ ಕರೆದುಕೊಂಡು ಬಂದಾಗ, ನನ್ನನ್ನು ಅಡ್ಡಗಟ್ಟಿ ಪಾನಿಪುರಿ ಕಿಟ್ಟಿ ಮತ್ತು ಸಹೋದರರು ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ. ಠಾಣೆ ಬಳಿ ಬಂದಾಗ ನನಗೆ ಡಿಚ್ಚಿ ಹೊಡೆದಿದ್ದಾನೆ''

ಕೊಲೆ ಪ್ರಯತ್ನ ಮಾಡಲಾಗಿದೆ
''ಪಾನಿಪುರಿ ಕಿಟ್ಟಿ ಮತ್ತು ಸಹಚರರು ಚಾಕುವಿನಿಂದ ಚುಚ್ಚಲು ಬಂದಿದ್ದರು. ಮಾರುತಿ ಬಂದು ಹೆದರಿಸಿದ್ದಾನೆ. ನನ್ನ ಮಗನಿಗೆ ಕೂಡ ಎದುರಿಸಿದ್ದಾನೆ. ಪಾನಿಪುರಿ ಕಿಟ್ಟಿ ಕೂಡ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ. ಕಾರು ಜಖಂ ಮಾಡಿದ್ದಾರೆ. ಅಪರಿಚತ ವ್ಯಕ್ತಿಯೊಬ್ಬ ಕೊಲ್ಲಲು ಮುಂದೆ ಬಂದಿದ್ದ. ದಯವಿಟ್ಟು ನನಗೆ ರಕ್ಷಣೆ ಕೊಡಿ ಮತ್ತು ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ'' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಾನೂನಾತ್ಮಕವಾಗಿ ಹೋರಾಟ
ವಿಜಿ ಅವರ ದೂರಿನ ಹಿನ್ನೆಲೆ ಕಿಟ್ಟಿ ಅವರನ್ನ ಕರೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ನಂತರ ಪೊಲೀಸರು ಏನು ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಕಿಟ್ಟಿ ಈ ದೂರು ಸಂಪೂರ್ಣ ಸುಳ್ಳು, ನಾನು ಕಾನೂನಾತ್ಮಕವಾಗಿ ಹೋರಾಟ ಮಾಡ್ತೀನಿ ಎಂದರು.


Click it and Unblock the Notifications











