»   » ಮಾನವೀಯತೆ ಮೆರೆದ ದುನಿಯಾ ವಿಜಯ್ 'RX ಸೂರಿ' ಚಿತ್ರತಂಡ

ಮಾನವೀಯತೆ ಮೆರೆದ ದುನಿಯಾ ವಿಜಯ್ 'RX ಸೂರಿ' ಚಿತ್ರತಂಡ

Posted By:
Subscribe to Filmibeat Kannada

ಕ್ಯಾನ್ಸರ್ ನಿಂದ ತಮ್ಮ ಬದುಕಿನ ಕೊನೆಯ ಕ್ಷಣಗಳನ್ನು ಎಣಿಸುತ್ತಿರುವ ದುನಿಯಾ ವಿಜಯ್ ಅಪ್ಪಟ ಅಭಿಮಾನಿ ಆಂಟೋನಿ ರಾಜ್ ಆಸೆ ಈಡೇರಿದೆ. ದುನಿಯಾ ವಿಜಯ್ ಅಭಿನಯದ 'RX ಸೂರಿ' ಚಿತ್ರವನ್ನ ವೀಕ್ಷಿಸಿ ಆಂಟೋನಿ ರಾಜ್ ಖುಷಿ ಪಟ್ಟಿದ್ದಾರೆ.

ಕೊನೆಯುಸಿರೆಳೆಯುವ ಮುನ್ನ ದುನಿಯಾ ವಿಜಯ್ ಅಭಿನಯದ 'RX ಸೂರಿ' ಚಿತ್ರವನ್ನ ನೋಡಬೇಕೆಂಬ ಹಂಬಲ ಆಂಟೋನಿಗಿತ್ತು. ಆಂಟೋನಿ ಇಚ್ಛೆಯಂತೆ 'RX ಸೂರಿ' ಚಿತ್ರತಂಡ ಕಳೆದ ಶುಕ್ರವಾರ ಸ್ಪೆಷಲ್ ಶೋ ಆಯೋಜಿಸಿ ಮಾನವೀಯತೆ ಮೆರೆದಿದೆ.


antony

ಯಲಹಂಕ ಆಸ್ಪತ್ರೆಯಿಂದ ವಿಶೇಷ ವಾಹನದಲ್ಲಿ ವೈದ್ಯರು ಮತ್ತು ಇಬ್ಬರು ನರ್ಸ್‌ಗಳ ಜೊತೆ ಆಂಟೋನಿ ಅವರನ್ನ ರೇಣುಕಾಂಬಾ ಪ್ರಿವ್ಯೂ ಸ್ಟುಡಿಯೋಗೆ ಕರೆತರಲಾಯ್ತು. [ಅಭಿಮಾನಿಯ ಅಂತಿಮ ಇಚ್ಛೆ ಪೂರ್ಣಗೊಳಿಸಿದ ವಿಜಿ]


ಹೆತ್ತವರ ಸಮ್ಮುಖದಲ್ಲಿ 'RX ಸೂರಿ' ಸಿನಿಮಾ ವೀಕ್ಷಿಸಿದ ಆಂಟೋನಿ ಲವಲವಿಕೆಯಿಂದ ಮಾತನಾಡೋಕೆ ಶುರುಮಾಡಿದರು. '''RX ಸೂರಿ' ಸಿನಿಮಾದಲ್ಲಿ ದುನಿಯಾ ವಿಜಯ್ ಪ್ರತಿ ಫ್ರೇಮ್ ನಲ್ಲಿಯೂ ಅದ್ಭುತವಾಗಿ ನಟಿಸಿದ್ದಾರೆ. ವಿಜಯ್ ಅವರ ದೃಢ ಸಂಕಲ್ಪ ಶಕ್ತಿಯನ್ನು ನಾನೂ ಅಳವಡಿಸಿಕೊಳ್ಳಲು ಪ್ರಯತ್ನಿಸಿದ್ದೇನೆ'' ಅಂತ ಆಂಟೋನಿ ಹೇಳಿದರು.


antony

2012 ರಿಂದಲೂ ಕ್ಯಾನ್ಸರ್ ನಿಂದ ಬಳಲುತ್ತಿರುವ ತಮ್ಮ ಮಗ ಆಂಟೋನಿ ಮಾಧ್ಯಮಗಳೊಂದಿಗೆ ಮಾತನಾಡಿದ್ದನ್ನು ಕಂಡು ಅವರ ತಾಯಿ ಕಣ್ಣೀರಿಟ್ಟರು.


ಸಾವಿನ ಸಮ್ಮುಖದಲ್ಲಿ ಅಭಿಮಾನ ಮೆರೆದ ಆಂಟೋನಿ ಬಗ್ಗೆ ದುನಿಯಾ ವಿಜಯ್ ಭಾವಕರಾದರು.

English summary
Kannada Actor Duniya Vijay's hardcore fan Antony Raj has fulfilled his last desire. Antony Raj has watched Kannada Movie 'RX Soori' recently. Antony Raj is suffering from Cancer and is in his last stages of life.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada