ಚಿತ್ರರಂಗದಲ್ಲಿ ಇದೇ ಮೊದಲು: 'ಸಲಗ' ಶಾಸನ ರಚಿಸಿದ ವಿಜಿ ಅಭಿಮಾನಿ

ದುನಿಯಾ ವಿಜಯ್ ನಟಿಸಿ, ನಿರ್ದೇಶಿಸುತ್ತಿರುವ ಸಲಗ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಗೆ ಸಜ್ಜಾಗಿದೆ. ಒಳ್ಳೆಯ ಸಮಯಕ್ಕಾಗಿ ಕಾಯುತ್ತಿರುವ ಸಲಗ ಹೊಸ ವರ್ಷದ ಆರಂಭದಲ್ಲಿ ಪ್ರೇಕ್ಷಕರೆದುರು ಬರಲಿದೆ ಎಂದು ಹೇಳಲಾಗುತ್ತಿದೆ.

ಸಲಗ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆಯಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಕ್ರೇಜ್ ಅಷ್ಟೇ ದೊಡ್ಡದಿದೆ. ದುನಿಯಾ ವಿಜಯ್ ನಿರ್ದೇಶನ ಹಾಗೂ ಡಾಲಿ-ವಿಜಿ ಕಾಂಬಿನೇಷನ್ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಇದೀಗ, ದುನಿಯಾ ವಿಜಯ್ ಅವರ ಅಭಿಮಾನಿ ಅಪರೂಪದ ಅಭಿಮಾನ ಮೆರದಿದ್ದಾರೆ. ಚಿತ್ರರಂಗದಲ್ಲಿ ಈ ಹಿಂದೆ ಇಂತಹ ಅಭಿಮಾನ ನಿಜಕ್ಕೂ ಕಂಡಿರಲಿಲ್ಲ, ಮುಂದೆ ಕಾಣಬಹುದಾ ಎಂದು ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ.

Duniya Vijay Fan Created Salaga Movie Title Like Ancient rock inscription and gifted to Team

ಹೌದು, ವಿಜಿ ಅವರ ಅಭಿಮಾನಿ ವೀರಾಚಾರಿ ಎಂಬುವವರು ಸಲಗ ಚಿತ್ರದ ಶಿಲಾ ಶಾಸನ ರಚಿಸಿದ್ದಾರೆ. ಸಲಗ ಸಿನಿಮಾ ಶತದಿನ ಆಚರಿಸಲಿದೆ ಎಂದು ಭವಿಷ್ಯ ನುಡಿದು ಶಾಸನ ರಚಿಸಿದ್ದಾರೆ. ಇದು ಸಿನಿಮಾ ಜಗತ್ತಿನಲ್ಲಿ ವಿಶೇಷೆನಿಸಿಕೊಂಡಿದೆ. ಇದೇ ಮೊದಲ ಬಾರಿಗೆ ಅಭಿಮಾನಿಯೊಬ್ಬ ಚಿತ್ರವೊಂದರ ಬಗ್ಗೆ ಶಾಸನ ರಚಿಸಿರುವುದು ಅಪರೂಪದ ದಾಖಲೆ ಎನ್ನಬಹುದು.

Duniya Vijay Fan Created Salaga Movie Title Like Ancient rock inscription and gifted to Team

ಸಲಗ ಶಾಸನವನ್ನು ಖುದ್ದು ದುನಿಯಾ ವಿಜಯ್ ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಅನಾವರಣಗೊಳಿಸಿದ್ದಾರೆ. ಪ್ರೀತಿಯಿಂದ ರಚಿಸಿರುವ ಶಾಸನವನ್ನು ಅಭಿಮಾನಿ, ತನ್ನ ನೆಚ್ಚಿನ ನಟನಿಗೆ ಉಡಗೊರೆಯಾಗಿ ನೀಡಿದ್ದಾರೆ.

ಇನ್ನು ಹೊಸ ವರ್ಷದ ಪ್ರಯುಕ್ತು ಸಲಗ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ, ಸಂಜನಾ ಆನಂದ್ ಪ್ರಮುಖ‌ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Kannada actor Duniya Vijay fan created salaga movie title like ancient rock inscription and gifted to team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X