ಸುದೀಪ್, ಶಿವಣ್ಣ ಬಳಿಕ ದುನಿಯಾ ವಿಜಯ್ ಅಭಿಮಾನಿಗಳಿಂದ ಕ್ರಿಕೆಟ್ ಹಬ್ಬ

ಕಿಚ್ಚ ಸುದೀಪ್ ಪ್ರೀಮಿಯಲ್ ಲೀಗ್ ನಡೆದಿತ್ತು. ಶಿವರಾಜ್ ಕುಮಾರ್ ಪ್ರೀಮಿಯರ್ ಲೀಗ್ ನೆರವೇರಿತ್ತು. ಈಗ ದುನಿಯಾ ವಿಜಯ್ ಅಭಿಮಾನಿಗಳ ಕಡೆಯಿಂದ 'ಸಲಗ ಕಪ್' ಕ್ರಿಕೆಟ್ ಟೂರ್ನಿ ಆರಂಭವಾಗುತ್ತಿದೆ.

ದುನಿಯಾ ವಿಜಯ್ ನಟನೆಯ ಸಲಗ ಸಿನಿಮಾ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರ್ತಿದೆ. ವಿಜಿ ಚೊಚ್ಚಲ ಬಾರಿಗೆ ನಿರ್ದೇಶಿಸಿ ನಟಿಸಿರುವ ಸಿನಿಮಾ ಇದಾಗಿದ್ದು, ಬಹಳ ಕುತೂಹಲ ಮೂಡಿಸಿದೆ.

ಸಲಗ ಸಿನಿಮಾದ ಟೀಸರ್, ಹಾಡುಗಳು ಈಗಾಗಲೇ ಸದ್ದು ಮಾಡ್ತಿದ್ದು, ಚಿತ್ರವನ್ನು ಆದಷ್ಟು ಬೇಗ ನೋಡಲು ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಸಲಗ ಚಿತ್ರದ ಪ್ರಚಾರ ಕಾರ್ಯ ಅದಾಗಲೇ ಶುರು ಮಾಡಿಕೊಂಡಿರುವ ಚಿತ್ರತಂಡ ಅವಕಾಶ ಸಿಕ್ಕ ಕಡೆಯಲ್ಲೆಲ್ಲ ಅಭಿಮಾನಿಗಳನ್ನು ತಲುಪುತ್ತಿದ್ದಾರೆ.

Duniya Vijay Fans Organizing Salaga Cup All Over Karnataka

ದುನಿಯಾ ವಿಜಯ್ ಅಭಿಮಾನಿಗಳು ರಾಜ್ಯದಾದ್ಯಂತ ಸಲಗ ಕ್ರಿಕೆಟ್‌ ಕಪ್ ಸರಣಿಯನ್ನ ಏರ್ಪಡಿಸ್ತಿದ್ದು, ಆ ಸರಣಿಗಳಲ್ಲಿ ಸಲಗ ಚಿತ್ರತಂಡವೂ ಒಂದು ಟೀಮ್ ಆಗಿ ಆಟವಾಡ್ತಿದೆ. ಅದ್ರಂತೆ ಇದೇ ತಿಂಗಳ 7ನೇ ತಾರೀಖು‌ ಕೋಲಾರದ ಮಾಲೂರಿನಲ್ಲಿ ನಡೆಯುವ ಸಲಗ ಕ್ರಿಕೆಟ್ ಕಪ್ ಸರಣಿಯಲ್ಲಿ ಪಂದ್ಯವನ್ನಾಡ್ತಿದೆ.

ಇದೇ ಮಾದರಿಯಲ್ಲಿ ಚಿತ್ರದುರ್ಗ, ಹೊಸಪೇಟೆ ಹಾಗೂ ಮೈಸೂರು ಸೇರಿ ರಾಜ್ಯದ ನಾನಾ ಊರುಗಳಲ್ಲಿ ಸಲಗ ಕಪ್ ನಡೆಯಲ್ಲಿದ್ದು ಸದ್ಯದಲ್ಲೇ ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

Duniya Vijay Fans Organizing Salaga Cup All Over Karnataka

ಇತ್ತೀಚೆಗಷ್ಟೆ ನಡೆದ ಎಸ್‌ಪಿಎಲ್ ಟೂರ್ನಿಯಲ್ಲಿ (ಶಿವರಾಜ್ ಕುಮಾರ್ ಪ್ರಿಮಿಯರ್ ಲೀಗ್) ಸಲಗ ಚಿತ್ರತಂಡವೂ ಭಾಗಿಯಾಗಿತ್ತು. ಪ್ರದರ್ಶನ ಪಂದ್ಯವನ್ನ ಆಡಿದ ಸಲಗ ಟೀಮ್ ಭರ್ಜರಿಯಾಗಿ ಗೆದ್ದುಬೀಗಿತ್ತು.

ದುನಿಯಾ ವಿಜಯ್ ನಿರ್ದೇಶನದ ಸಲಗ ಚಿತ್ರಕ್ಕೆ ಕೆಪಿ ಶ್ರೀಕಾಂತ್ ಬಂಡವಾಳ ಹಾಕಿದ್ದಾರೆ. ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸಂಜನಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ.

More from Filmibeat

English summary
Kannada actor Duniya Vijay Fans organizing Salaga cup cricket tournament all over Karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X