For Quick Alerts
  ALLOW NOTIFICATIONS  
  For Daily Alerts

  ನಟ ದುನಿಯಾ ವಿಜಯ್ ತಂದೆ ರುದ್ರಪ್ಪ ನಿಧನ

  |

  ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರುದ್ರಪ್ಪ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಜಯ್ ದಾಖಲಿಸಿದ್ದರು. ಅಲ್ಲಿಯೇ ರುದ್ರಪ್ಪನವರು ಜೀವ ಬಿಟ್ಟಿದ್ದಾರೆ.

  ವಿಜಯ್‌ ತಂದೆ ರುದ್ರಪ್ಪನವರ ಅಂತ್ಯಕ್ರಿಯೆ ಆನೇಕಲ್‌ನ ಕುಂಬಾರ ಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ.

  ಜುಲೈ ತಿಂಗಳಲ್ಲಿ ದುನಿಯಾ ವಿಜಯ್‌ರ ತಾಯಿ ನಿಧನ ಹೊಂದಿದ್ದರು. ಇದೀಗ ತಂದೆ ನಿಧನ ಹೊಂದಿದ್ದಾರೆ. ತಂದೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟ ದುನಿಯಾ ವಿಜಯ್ ''ಮಿಸ್‌ ಯು ಅಪ್ಪ'' ಎಂದು ಬರೆದುಕೊಂಡಿದ್ದಾರೆ. ದುನಿಯಾ ವಿಜಯ್ ತಂದೆ ಅಗಲಿಕೆಗೆ ವಿಜಯ್ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

  ಕೇವಲ ಕೆಲವೇ ತಿಂಗಳ ಅವಧಿಯಲ್ಲಿ ನಟ ವಿಜಯ್ ತಾಯಿ ಹಾಗೂ ತಂದೆ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಇದೇ ಜುಲೈ ತಿಂಗಳಲ್ಲಿ ದುನಿಯಾ ವಿಜಯ್‌ರ ತಾಯಿ ನಿಧನ ಹೊಂದಿದರು. ತಾಯಿಯ ಪುತ್ಥಳಿಯನ್ನು ನಿರ್ಮಿಸಿ ಸಮಾಧಿ ಬಳಿ ಇರಿಸಿ ಗೌರವ ಸಲ್ಲಿಸಿದರು ದುನಿಯಾ ವಿಜಯ್. ತಾಯಿ ಅಗಲಿಕೆಯ ದುಃಖದಿಂದ ಹೊರಗೆ ಬರುವ ಮುನ್ನವೇ ಈಗ ತಂದೆಯೂ ದೂರವಾಗಿದ್ದಾರೆ.

  English summary
  Duniya Vijay Father Rudrappa Passes Away in a private hospital today morning. Rudrappa suffering from age related problems.
  Thursday, November 18, 2021, 12:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X