ರಾಮು ನಿರ್ಮಾಣದ ಚಿತ್ರದಲ್ಲಿ ದುನಿಯಾ ವಿಜಯ್

By Rajendra

Duniya Vijay
ರಜನಿಕಾಂತ ಚಿತ್ರದ ಬಳಿಕ ನಟ ದುನಿಯಾ ವಿಜಯ್ ಮತ್ತೊಂದು ಚಿತ್ರಕ್ಕೆ ಸಿದ್ಧವಾಗುತ್ತಿದ್ದಾರೆ. ಕೋಟಿ ಬಜೆಟ್ ನಿರ್ಮಾಪಕ ರಾಮು ನಿರ್ಮಾಣದ ಚಿತ್ರವಿದು. ಆಕ್ಷನ್ ಕಟ್ ಹೇಳುತ್ತಿರುವವರು ಪಿಎನ್ ಸತ್ಯ. ಚಿತ್ರದ ಹೆಸರು 'ಶಿವಾಜಿನಗರ'.

ಈ ಹಿಂದೆ ಕಲಾಸಿಪಾಳ್ಯ ಚಿತ್ರವನ್ನು ರಾಮು ನಿರ್ಮಿಸಿದ್ದರು. ಈ ಬಾರಿ ಅವರು ಶಿವಾಜಿನಗರದ ಮೇಲೆ ಕಣ್ಣಾಕಿದ್ದಾರೆ. ಈಗಾಗಲೆ ಬೆಂಗಳೂರಿನ ಹಲವು ಪ್ರದೇಶಗಳು ಚಿತ್ರದ ಶೀರ್ಷಿಕೆಗಳಾಗಿವೆ. ದರ್ಶನ್ ಅಭಿನಯದ ಮೆಜೆಸ್ಟಿಕ್, ಡೈಲಾಗ್ ಕಿಂಗ್ ಸಾಯಿಕುಮಾರ್ ಅಭಿನಯದ ಶ್ರೀರಾಮಪುರ ಪೊಲೀಸ್ ಸ್ಟೇಷನ್ ಚಿತ್ರಗಳು ಮುಖ್ಯವಾದವು.

ಮೇ31ಕ್ಕೆ ಶಿವಾಜಿನಗರ ಚಿತ್ರ ಸೆಟ್ಟೇರುತ್ತಿದೆ. ಚಿತ್ರದ ಕಥೆ ಏನು ಎಂಬ ಬಗ್ಗೆ ರಾಮು ಸುಳಿವು ನೀಡದಿದ್ದರೂ 'ಶಿವಾಜಿನಗರ'ದ ಸುತ್ತ ಸುತ್ತುವ ಕಥೆ ಎಂದಷ್ಟೇ ಹೇಳಬೇಕು. ಚಿತ್ರದ ಬಹುತೇಕ ಚಿತ್ರೀಕರಣ ಶಿವಾಜಿನಗರದಲ್ಲೇ ನಡೆಯಲಿದೆ. ಉಳಿದಂತೆ ಚಿಕ್ಕಮಗಳೂರಿನಲ್ಲೂ ನಡೆಯಲಿದೆ.

ಜೆಸ್ಸಿ ಗಿಫ್ಟ್ ಅವರ ಸಂಗೀತ ಚಿತ್ರಕ್ಕಿದೆ. ಚಿತ್ರದ ನಾಯಕಿ ಹಾಗೂ ಉಳಿದ ಪಾತ್ರವರ್ಗದ ವಿವರಗಳು ಇನ್ನಷ್ಟೇ ಹೊರಬೀಳಬೇಕು. ಏತನ್ಮಧ್ಯೆ ವಿಜಿ ಅಭಿನಯದ ಹೋಂ ಬ್ಯಾನರ್ ಚಿತ್ರ ಜಯಮ್ಮನ ಮಗ ಚಿತ್ರವೂ ಸಿದ್ಧವಾಗಿದೆ. (ಏಜೆನ್ಸೀಸ್)

More from Filmibeat

English summary
Duniya Vijay new film titled as Shivajinagar. The film is being produced by Ramu and directed by PN Satya. The film will be launched on May 31 and other cast and crew members are yet to be announced. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X