ದುನಿಯಾ ವಿಜಯ್ ಮೊದಲ ಪತ್ನಿಯಿಂದ ಮತ್ತೊಂದು ದೂರು ದಾಖಲು.!

By Abhimani

ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಅವರ ಸಹೋದರನ ಮಗ ಮಾರುತಿ ಗೌಡ ಮೇಲೆ ಹಲ್ಲೆ ಮಾಡಿರುವ ಆರೋಪದಡಿ ನಟ ದುನಿಯಾ ವಿಜಯ್ ಬಂಧನವಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಣವೇನು.? ಯಾಕೆ ಗಲಾಟೆ ಮಾಡಲಾಯಿತು ಎಂಬುದನ್ನ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಹೀಗಿರುವಾಗ, ದುನಿಯಾ ವಿಜಯ್ ವೈಯಕ್ತಿಕ ಜೀವನದಲ್ಲಿ ಮತ್ತೊಂದು ಕಂಟಕ ಎದುರಾಗಿದೆ. ವಿಜಿ ಅವರ ಮೊದಲ ಪತ್ನಿ ನಾಗರತ್ನ ಅವರಿಂದ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಕೌಟುಂಬಿಕ ವಿಚಾರಕ್ಕೆ ಸಂಬಂಧಪಟ್ಟಂತೆ ದುನಿಯಾ ವಿಜಯ್ ಪತ್ನಿಯರ ನಡುವೆ ಮನಸ್ತಾಪ ಉಂಟಾಗಿದ್ದು, ಈಗ ಪೊಲಿಸ್ ಠಾಣೆಯ ಮೆಟ್ಟೇಲೇರಿದೆ. ಈಗ ನಾಗರತ್ನ ಮತ್ತು ಕೀರ್ತಿಗೌಡ ಇಬ್ಬರನ್ನ ಸ್ಟೇಷನ್ ಗೆ ಕರೆಯಿಸಿ ವಿಚಾರಣೆ ಮಾಡಲಾಗುತ್ತಿದೆ. ಅಷ್ಟಕ್ಕೂ, ನಾಗರತ್ನ ದೂರು ನೀಡಿದ್ದೇಕೆ.? ಮುಂದೆ ಓದಿ....

ಕೀರ್ತಿಗೌಡ ವಿರುದ್ಧ ದೂರು

ಕೀರ್ತಿಗೌಡ ವಿರುದ್ಧ ದೂರು

ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿಗೌಡ ಅವರು ವಿರುದ್ಧ ಮೊದಲನೇ ಪತ್ನಿ ನಾಗರತ್ನ ಅವರು ದೂರು ನೀಡಿದ್ದಾರೆ. ಮಕ್ಕಳನ್ನ ನೋಡಲು ಮನೆ ಬಳಿ ಹೋಗಿದ್ದಾಗ ನನ್ನ ಮೇಲೆ ಬೌನ್ಸರ್ ಗಳನ್ನ ಬಿಟ್ಟು ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

ಎಫ್.ಐ.ಆರ್ ದಾಖಲು.!

ಎಫ್.ಐ.ಆರ್ ದಾಖಲು.!

ದುನಿಯಾ ವಿಜಯ್ ಅವರ ಮೊದಲನೇ ಪತ್ನಿ ನಾಗರತ್ನ ಅವರು ನೀಡಿರುವ ದೂರಿನ ಅನ್ವಯ ಸೆಕ್ಷನ್ 323, 504, 506, 34ರ ಅಡಿ ಎಫ್.ಐ.ಆರ್ ದಾಖಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೀರ್ತಿಗೌಡ ಅವರನ್ನ ಠಾಣೆಗೆ ಕರೆಯಿಸಿ ವಿಚಾರಣೆ ಮಾಡ್ತಿದ್ದಾರೆ.

ಮಾರುತಿ ಗೌಡ ಘಟನೆ ವೇಳೆ ಮಗ ಇದ್ದ.!

ಮಾರುತಿ ಗೌಡ ಘಟನೆ ವೇಳೆ ಮಗ ಇದ್ದ.!

ಇನ್ನು ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ಮಾಡಿದ ಸಂದರ್ಭದಲ್ಲಿ ದುನಿಯಾ ವಿಜಯ್ ಅವರ ಮಗ ಕೂಡ ಇದ್ದರು ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕೀರ್ತಿ ಗೌಡ ಅವರ ಬಳಿ ನಾಗರತ್ನ ಅವರು ಪ್ರಶ್ನಿಸಿದ್ದಾರೆ. ನನ್ನ ಮಗನನ್ನ ನೀವು ಹಾಳು ಮಾಡುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಬೌನ್ಸರ್ ಗಳು ಹಲ್ಲೆ ಮಾಡಿದ್ದರು ಎನ್ನಲಾಗಿದೆ.

ಮಕ್ಕಳ ವಿಚಾರಕ್ಕೆ ಜಗಳ.!

ಮಕ್ಕಳ ವಿಚಾರಕ್ಕೆ ಜಗಳ.!

ದುನಿಯಾ ವಿಜಯ್ ಅವರು ಎರಡನೇ ಮದುವೆ ಆದ ಬಳಿಕ ಮೊದಲ ಪತ್ನಿ ನಾಗರತ್ನ ಅವರು ಎಲ್ಲೂ ಕಾಣಿಸಿಕೊಂಡಿಲ್ಲ. ಆದ್ರೆ, ಅವರ ಮೂರು ಮಕ್ಕಳು ಕೂಡ ಕೀರ್ತಿಗೌಡ ಮತ್ತು ದುನಿಯಾ ವಿಜಿ ಜೊತೆಯಲ್ಲೇ ಇದ್ದಾರೆ. ಹಾಗಾಗಿ, ಮಕ್ಕಳನ್ನ ನೋಡಲು ನಾಗರತ್ನ ಅವರಿಗೆ ಅವಕಾಶ ಸಿಗುತ್ತಿಲ್ಲ ಎಂದು ಹೇಳಲಾಗಿದೆ.

More from Filmibeat

English summary
Kannada Duniya vijay wife nagarathna has failed complaint against duniya vijay second wife keerthi gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X