ಮಗಳ ಮೇಲೆ ಹಲ್ಲೆ ಮಾಡಿದ್ರಾ ವಿಜಿ? : ಆಸ್ಪತ್ರೆ ಸೇರಿದ ಮೋನಿಕಾ!
Recommended Video

ನಟ ದುನಿಯಾ ವಿಜಯ್ ಮೇಲೆ ಇದೀಗ ಅವರ ಹಿರಿಯ ಮಗಳು ದೂರು ನೀಡಿದ್ದಾರೆ. ಅಪ್ಪನ ವಿರುದ್ಧ ಗಿರಿ ನಗರದ ಪೊಲೀಸ್ ಠಾಣೆಯಲ್ಲಿ ಮೋನಿಕಾ ಕಂಪ್ಲೆಂಟ್ ಕೊಟ್ಟಿದ್ದಾರೆ.
ನಿನ್ನೆ ತನ್ನ ಬಟ್ಟೆ ಹಾಗೂ ವಸ್ತುಗಳನ್ನು ತರಲು ಮನೆಗೆ ಹೋಗಿರುವಾಗ, ಅಲ್ಲಿ ದುನಿಯಾ ವಿಜಯ್, ಕೀರ್ತಿ ಗೌಡ ಹಾಗೂ ವಿಜಿ ಕಾರ್ ಡ್ರೈವರ್ ನನ್ನ ಮೇಲೆ ಹಲ್ಲೆ ಮಾಡಿದರು ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದರು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಮೋನಿಕಾ ಬಲಗೈ ಗೆ ಪೆಟ್ಟಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಗಾದರೆ, ದುನಿಯಾ ವಿಜಯ್ ತಮ್ಮ ಮಗಳ ಮೇಲೆ ನಿಜವಾಗಿಯೂ ಹಲ್ಲೆ ಮಾಡಿದ್ರಾ..?. ಇದೀಗ ಈ ಘಟನೆಯ ಬಗ್ಗೆ ಸ್ವತಃ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ಯಾರೂ ಇದನ್ನು ನಂಬಬೇಡಿ
''ಪದೇ ಪದೇ ನನ್ನ ಮೇಲೆ ಈ ರೀತಿ ಮಾಡಿ, ನನ್ನ ಮುಖಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಪೊಲೀಸ್ ಠಾಣೆಯವರಿಗೂ ಈ ಬಗ್ಗೆ ಎಲ್ಲ ಗೊತ್ತಿದೆ. ಮೂರು ದಿನದಲ್ಲಿ ಸತ್ಯ ಬಿಚ್ಚಿಡುತ್ತೇನೆ. ಯಾರೂ ಇದನ್ನು ನಂಬಬೇಡಿ. ನಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ.'' - ದುನಿಯಾ ವಿಜಯ್, ನಟ

ಮತ್ತೆ ಜೈಲಿಗೆ ಕಳುಹಿಸಲು ಪ್ಲಾನ್
''ನನ್ನ ಮೇಲೆ ಪದೇ ಪದೇ ಎಫ್ ಐ ಆರ್ ಹಾಕಲು ಈ ರೀತಿ ಮಾಡುತ್ತಿದ್ದಾರೆ. ಅವರ ಮೇಲೆ ಸಿಂಪತಿ ಹುಟ್ಟು ಹಾಕುವ ಪ್ರಯತ್ನ ಇದು. ನನ್ನನ್ನು ಮತ್ತೆ ಜೈಲಿಗೆ ಕಳುಹಿಸಬೇಕು ಎಂಬ ಪ್ಲಾನ್ ಮಾಡುತ್ತಿದ್ದಾರೆ. ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರದ್ದು ವಿಕೃತ ಮನಸ್ಸು.'' - ದುನಿಯಾ ವಿಜಯ್, ನಟ

ಡ್ರಾಮಾ ಮಾಡುತ್ತಿದ್ದಾರೆ
''ಎಲ್ಲ ಡ್ರಾಮಾ ಮಾಡುತ್ತಿದ್ದಾರೆ. ಮಕ್ಕಳಿಗೆ ಹೊಡೆಯುವ ತಂದೆಯನ್ನು ನಾನು ಎಲ್ಲೂ ನೋಡಿಲ್ಲ. ಹಳ್ಳಕ್ಕೆ ಬಿದ್ದಾಗ ಎಲ್ಲರೂ ಕಲ್ಲು ಹಾಕುತ್ತಾರೆ. ನನ್ನ ಮೇಲೆ ನೆಗೆಟಿವ್ ಅಭಿಪ್ರಾಯ ಬರಬೇಕು ಅಂತ ಕಾಯುತ್ತಿದ್ದಾರೆ. ಜೊತೆಗೆ ಟಿವಿಯಲ್ಲಿ ಬರುವ ಆಸೆ ಇದೆ ಅವರಿಗೆ ಅದಕ್ಕೆ ದಿನ ಈ ರೀತಿ ಮಾಡುತ್ತಾರೆ.'' - ದುನಿಯಾ ವಿಜಯ್, ನಟ

ನಾಗರತ್ನ ಬಣ್ಣ ಬಯಲು ಮಾಡುತ್ತೇನೆ
''ನಾಗರತ್ನ ಬಣ್ಣ ಬಯಲು ಮಾಡುತ್ತೇನೆ. ಇದು ಪೂರ್ವ ನಿಯೋಜನೆಯಾಗಿ ಮಾಡಲಾಗಿದೆ. ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ. ನನ್ನ ಮಗಳು ನೀಡಿರುವ ದೂರು ಸುಳ್ಳು. ನನ್ನ ಮಗಳ ಮೇಲೆ ನಾನು ಹಲ್ಲೆ ಮಾಡಿಲ್ಲ. ನಮ್ಮ ಮನೆಯನ್ನು ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ.'' - ದುನಿಯಾ ವಿಜಯ್, ನಟ

ಮೋನಿಕಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ದುನಿಯಾ ವಿಜಯ್ ಅವರ ಹಿರಿಯ ಮಗಳು ಮೋನಿಕಾ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೋನಿಕಾ ಬಲಗೈ ಗೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಇದ್ದಾರೆ. ತಮ್ಮ ತಂದೆ ಹಲ್ಲೆ ಮಾಡಿದ್ದಾರೆ ಎಂದು ಗಿರಿ ನಗರ ಪೊಲೀಸ್ ಠಾಣೆಯಲ್ಲಿ ಮೋನಿಕಾ ದೂರು ನೀಡಿದ್ದಾರೆ.


Click it and Unblock the Notifications











