twitter
    For Quick Alerts
    ALLOW NOTIFICATIONS  
    For Daily Alerts

    'ಡಾಲಿ' ಧನಂಜಯ್ ಗೆ ಹೊಸ ಬಿರುದು ನೀಡಿದ ದುನಿಯಾ ವಿಜಯ್

    |

    Recommended Video

    'ಡಾಲಿ'ಗೆ ಹೊಸ ಬಿರುದು ನೀಡಿದ ದುನಿಯಾ ವಿಜಯ್ | FILMIBEAT KANNADA

    'ಟಗರು' ಚಿತ್ರದ ಮೂಲಕ ಗೆಲುವಿನ ಹಾದಿಗೆ ಮರುಳಿದ ಡಾಲಿ ಧನಂಜಯ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷವಾಗಿ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಿ ಶುಭ ಕೋರಿದ್ದಾರೆ.

    ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲ ಚಿತ್ರ 'ಸಲಗ'ದಲ್ಲಿ ಧನಂಜಯ್ ನಟಿಸುತ್ತಿದ್ದು, ವಿಜಿ ಎದುರುಗಡೆ ಪವರ್ ಫುಲ್ ಪೊಲೀಸ್ ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದಾರೆ.

    'ಸಲಗ' ಜೊತೆ ಡಾಲಿ ಧನಂಜಯ್ ಹುಟ್ಟುಹಬ್ಬದ ಸಂಭ್ರಮ 'ಸಲಗ' ಜೊತೆ ಡಾಲಿ ಧನಂಜಯ್ ಹುಟ್ಟುಹಬ್ಬದ ಸಂಭ್ರಮ

    ಈಗಾಗಲೇ ಧನಂಜಯ್ ಅವರ ಗೆಟಪ್, ಪೋಸ್ಟರ್ ಗಳು ಬಹಿರಂಗವಾಗಿದ್ದು, ಸಖತ್ ಸ್ಟೈಲಿಶ್ ಆಗಿದೆ. ಇದೀಗ, ಧನಂಜಯ್ ಅವರ ಹುಟ್ಟುಹಬ್ಬದ ವಿಶೇಷವಾಗಿ ದುನಿಯಾ ವಿಜಯ್ ಹೊಸ ಪೋಸ್ಟರ್ ಬಿಟ್ಟಿದ್ದು, ಬರ್ತಡೇ ಬಾಯ್ ಗೆ ಹೊಸ ಬಿರುದು ನೀಡಿದ್ದಾರೆ.

    Duniya Vijay Gives New Title To Dhananjay

    ಡಾಲಿ ಧನಂಜಯ್ ಸಿನಿಮಾಗೆ 'ಬಡವ ರಾಸ್ಕಲ್' ಎಂಬ ವಿವಾದಿತ ಶೀರ್ಷಿಕೆ ಡಾಲಿ ಧನಂಜಯ್ ಸಿನಿಮಾಗೆ 'ಬಡವ ರಾಸ್ಕಲ್' ಎಂಬ ವಿವಾದಿತ ಶೀರ್ಷಿಕೆ

    ಡಾಲಿ ಧನಂಜಯ್ ಅವರಿಗೆ 'ಸಾಮ್ರಾಟ್' ಧನಂಜಯ್ ಎಂದು ಕರೆದಿದ್ದು, ಸಲಗ ಪೋಸ್ಟರ್ ನಲ್ಲೂ 'ಸಾಮ್ರಾಟ್' ಎಂದೇ ಸಂಬೋಧಿಸಿದ್ದಾರೆ. ವಿಶೇಷ ಅಂದ್ರೆ ದುನಿಯಾ ವಿಜಯ್ ಅವರ ಮಗನ ಹೆಸರು ಕೂಡ ಸಾಮ್ರಾಟ್.

    ಇನ್ನುಳಿದಂತೆ ಡಾಲಿ ಪಿಕ್ಚರ್ಸ್ ಎಂಬ ಹೊಸ ನಿರ್ಮಾಣ ಸಂಸ್ಥೆ ಹುಟ್ಟುಹಾಕಿರುವ ಧನಂಜಯ್, 'ಬಡವ ರಾಸ್ಕಲ್' ಎಂಬ ಸಿನಿಮಾ ಆರಂಭಿಸಿದ್ದಾರೆ. ಇದರ ಜೊತೆಗೆ 'ಪೊಗರು', 'ಯುವರತ್ನ' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ದುನಿಯಾ ಸೂರಿ ನಿರ್ದೇಶನ 'ಪಾಪ್ ಕಾರ್ನ್ ಮಂಕಿ' ಟೈಗರ್ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

    English summary
    Kannada actor and director duniya vijay gives new title to birthday boy dhananjay.
    Friday, August 23, 2019, 7:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X