ಪತ್ನಿ ನಾಗರತ್ನರಿಂದ ದೂರವಾಗಲು ಕಾರಣ ಬಿಚ್ಚಿಟ್ಟ ದುನಿಯಾ ವಿಜಯ್

Recommended Video

ವಿಜಿ ನಾಗರತ್ನರಿಂದ ದೂರ ಆಗಿದ್ದು ಯಾಕೆ ಗೊತ್ತಾ..? | Filmibeat Kannada

ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಅವರಿಂದ ವಿಜಿ ದೂರವಾಗಿದ್ದಾರೆ. ಸದ್ಯ ಕೀರ್ತಿ ಗೌಡ ಅವರೊಂದಿಗೆ ದಾಂಪತ್ಯ ಜೀವನ ಮುಂದುವರಿಸಿದ್ದಾರೆ.

ವಿಜಿ ಅವರ ತಂದೆ-ತಾಯಿ, ಎರಡನೇ ಪತ್ನಿ ಕೀರ್ತಿ ಗೌಡ ಮತ್ತು ಮೂವರು ಮಕ್ಕಳು ಒಟ್ಟಿಗೆ ಒಂದೇ ಮನೆಯಲ್ಲಿದ್ದಾರೆ. ಆದ್ರೆ, ನಾಗರತ್ನ ಅವರು ಬೇರೆ ಮನೆಯಲ್ಲಿದ್ದಾರೆ. ಅಷ್ಟಕ್ಕೂ, ನಾಗರತ್ನ ಅವರನ್ನ ವಿಜಿ ದೂರ ಮಾಡಿಕೊಂಡಿದ್ದೇಕೆ ಎಂಬ ಅನುಮಾನ ಎಲ್ಲರನ್ನ ಕಾಡುತ್ತೆ.!

ಈ ಮಧ್ಯೆ ನಾಗರತ್ನ ಅವರು ಕೀರ್ತಿ ಗೌಡ ಅವರೊಂದಿಗೆ ಜಗಳವಾಡಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಅಲ್ಲಿಗೆ ವಿಜಿ ಪತ್ನಿಯರ ನಡುವಿನ ಈ ಕಿತ್ತಾಟವೇಕೆ.? ನಾಗರತ್ನ ಅವರಿಂದ ವಿಜಯ್ ದೂರವಾಗಿರುವುದೇಕೆ ಎಂಬುದನ್ನ ಸ್ವತಃ ವಿಜಿ ಅವರೇ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ.....

2 ವರ್ಷ ಹಿಂದೆ ರಾಜಿ ಆಗಿದ್ವಿ

2 ವರ್ಷ ಹಿಂದೆ ರಾಜಿ ಆಗಿದ್ವಿ

ಎಲ್ಲರಿಗೂ ತಿಳಿದಿರುವಂತೆ ದುನಿಯಾ ವಿಜಯ್ ಮತ್ತು ನಾಗರತ್ನ ಅವರ ಮಧ್ಯೆ ಸುಮಾರು ಎರಡೂವರೆ ವರ್ಷದ ಹಿಂದೆ ಮನಸ್ತಾಪ ಉಂಟಾಗಿ, ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದರು. ಆದ್ರೆ, ಅಂತಿಮ ಕ್ಷಣದಲ್ಲಿ ಇಬ್ಬರು ಒಪ್ಪಂದ ಮಾಡಿಕೊಂಡು ಮತ್ತೆ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ್ದರು. ಆದ್ರೆ, ಅಲ್ಲಿ ಆಗಿದ್ದೇ ಬೇರೆ.

ಒಪ್ಪಂದಂತೆ ಆಗಿಲ್ಲ

ಒಪ್ಪಂದಂತೆ ಆಗಿಲ್ಲ

ಅಂದು ಕೋರ್ಟ್ ನಲ್ಲಿ, ವಕೀಲರ ಮುಂದೆ ದುನಿಯಾ ವಿಜಿ ಮತ್ತು ನಾಗರತ್ನ ಅವರು ಒಪ್ಪಂದ ಮಾಡಿಕೊಂಡಿದ್ದರಂತೆ. ಅದನ್ನ ಸ್ವತಃ ವಿಜಿ ಅವರೇ ಹೇಳಿದ್ದಾರೆ. 'ತಂದೆ-ತಾಯಿನಾ ಚೆನ್ನಾಗಿ ನೋಡ್ಕೋಬೇಕು. ಮನೆಯಲ್ಲಿ ನೆಮ್ಮದಿಯಾಗಿರಬೇಕು ಎಂದು ಷರತ್ತು ವಿಧಿಸಿ ರಾಜಿಯಾಗಿದ್ದೆ. ಆದ್ರೆ, ಅಲ್ಲಿಂದ ಬಂದ ಮೇಲೂ ನಮ್ಮ ಮಧ್ಯೆ ಬಾಂಧವ್ಯ ಸರಿಯಾಗಿಲ್ಲ. ಹಾಗಾಗಿ ಬೇರೆ ಹೋಗಲು ನಿರ್ಧರಿಸಿದೆ'' ಎಂದು ನಟ ವಿಜಿ ತಿಳಿಸಿದ್ದಾರೆ.

ಡಿವೋರ್ಸ್ ಬೇಡ ಅಂದಿದ್ರು

ಡಿವೋರ್ಸ್ ಬೇಡ ಅಂದಿದ್ರು

'ಡಿವೋರ್ಸ್ ಮಾಡೋಕೆ ಮುಂದಾಗಲಿಲ್ಲ. ಆದ್ರೆ, ನಾನು ಬೇರೆ ಮದುವೆ ಆಗುವುದಾಗಿ ಹೇಳಿದ್ದೆ. ಅದರಂತೆ ನಾನು ಕೀರ್ತಿ ಗೌಡ ಅವರನ್ನ ವಿವಾಹ ಮಾಡಿಕೊಂಡು ಈಗ ಜೀವನ ಮಾಡುತ್ತಿದ್ದೇನೆ. ಅದಕ್ಕಾಗಿ ನಾಗರತ್ನ ಅವರಿಗೆ ಏನೂ ಬೇಕು ಅದೆಲ್ಲವೂ ಮಾಡಿಕೊಟ್ಟಿದ್ದೀನಿ'

ನಾಗರತ್ನ ಕೇಳಿದ್ದು ನಾನು ಕೊಟ್ಟೆ

ನಾಗರತ್ನ ಕೇಳಿದ್ದು ನಾನು ಕೊಟ್ಟೆ

''ನಾಗರತ್ನ ಅವರು ಕೇಳಿದ್ದನ್ನ ನಾನು ಮಾಡಿಕೊಟ್ಟಿದ್ದೆ. ಮೊದಲು ಮನೆ ಮಾಡಿಕೊಡಿ ಅಂತ ಕೇಳಿದ್ರು, 'ದುನಿಯಾ ಋಣ' ಮನೆಯನ್ನ ಆಕೆಯ ಹೆಸರಿಗೆ ಬರೆದುಕೊಟ್ಟೆ. ಆಮೇಲೆ ತೋಟ ಬೇಕು ಅಂದ್ರು, ಅದಕ್ಕೆ ನನ್ನ ಮಗನ ಸಾಮ್ರಾಟ್ ಹೆಸರಿಗೆ ಆ ತೋಟ ಮಾಡಿಕೊಟ್ಟೆ. ನನ್ನ ಹೆಣ್ಣು ಮಕ್ಕಳಿಗೆ ಕೂಡ ಜಾಗ ಮಾಡಿಕೊಟ್ಟಿದ್ದೇನೆ'' ಎಂದು ವಿಜಿ ತಿಳಿಸಿದ್ರು.

ನನ್ನ ತಂದೆ-ತಾಯಿಗೆ ನೋವು ನೀಡಿದ್ದಾರೆ

ನನ್ನ ತಂದೆ-ತಾಯಿಗೆ ನೋವು ನೀಡಿದ್ದಾರೆ

''ನನ್ನ ತಂದೆ ಮತ್ತು ತಾಯಿಗೆ ನಾಗರತ್ನ ತುಂಬಾ ನೋವು ನೀಡಿದ್ದಾರೆ. ಇದರಿಂದ ಬೇಸತ್ತ ನಮ್ಮ ತಂದೆ-ತಾಯಿ ವಿಲ್ ಮಾಡಿಟ್ಟಿದ್ದಾರೆ. ನನ್ನ ಸಾವಿಗೆ ನೀನು ಯಾವುದೇ ಕಾರಣಕ್ಕೂ ಬರಬಾರದು ಎಂದು ನನ್ನ ತಂದೆ ಮತ್ತು ತಾಯಿ ಪ್ರತ್ಯೇಕವಾಗಿ ವಿಲ್ ಮಾಡಿದ್ದಾರೆ. ನಾನೂ ಸತ್ರೂ ಕೂಡ ನೀನು ಬರಬಾರದು ನಾನು ವಿಲ್ ಮಾಡಿದ್ದೇನೆ'' ಎಂದರು.

ಮಕ್ಕಳಿಗೂ ನಾನು ಹೇಳಿದ್ದೆ

ಮಕ್ಕಳಿಗೂ ನಾನು ಹೇಳಿದ್ದೆ

''ನಾನು ಇರುವ ಕಡೆ ಆಕೆ ಇರಬಾರದು ಅಂತ ಮಕ್ಕಳಿಗೂ ಹೇಳಿದ್ದೆ. ಈ ಎರಡೂವರೆ ವರ್ಷದಲ್ಲಿ ಆಕೆ ನನ್ನನ್ನು ಭೇಟಿ ಮಾಡಿಲ್ಲ. ಮಕ್ಕಳು, ಕೀರ್ತಿ, ನಾನು, ತಂದೆ-ತಾಯಿ ಒಟ್ಟಿಗೆ ಇದ್ವಿ. ಈಗ ಸಡನ್ ಆಗಿ ಬಂದು ಯಾಕೆ ಖ್ಯಾತೆ ತೆಗೆದರು ಗೊತ್ತಿಲ್ಲ'' ಎಂದು ವಿಜಿ ಸ್ಪಷ್ಟನೆ ನೀಡಿದ್ದಾರೆ.

More from Filmibeat

English summary
Kannada actor Duniya Vijay has clarified about his wife nagarathna allegations.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X