ಮಾರುತಿ ಗೌಡ ಮೇಲಿನ ಹಲ್ಲೆ ಬಗ್ಗೆ ದುನಿಯಾ ವಿಜಯ್ ಹೇಳಿದ ಕಥೆಯೇ ಬೇರೆ

ನಟ ದುನಿಯಾ ವಿಜಯ್ ಜಿಮ್ ಟ್ರೈನರ್ ಮಾರುತಿ ಗೌಡ ಅವರನ್ನ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಂಬೇಡ್ಕರ್ ಭವನದಲ್ಲಿ ವಿಜಿ ಮತ್ತು ಸ್ನೇಹಿತರು ಹಲ್ಲೆ ಮಾಡಿ, ಕಾರಿನಲ್ಲಿ ಕರೆದುಕೊಂಡು ಹೋಗಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿತ್ತು.

ಸ್ವತಃ ಹಲ್ಲೆಗೆ ಒಳಗಾದ ಮಾರುತಿ ಗೌಡ ಅವರೇ ''ದುನಿಯಾ ವಿಜಯ್ ನನ್ನ ಮೇಲೆ ಹಲ್ಲೆ ಮಾಡಿದ್ರು, ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ರು'' ಎಂದು ಹೇಳಿದ್ದರು.

ಆದ್ರೀಗ, ಮೊದಲ ಬಾರಿಗೆ ದುನಿಯಾ ವಿಜಯ್ ಅವರು ಈ ಘಟನೆ ಬಗ್ಗೆ ಸಂಪೂರ್ಣವಾಗಿ ಮಾತನಾಡಿದ್ದಾರೆ. ಅಂದು ರಾತ್ರಿ ಅಂಬೇಡ್ಕರ್ ಭವನದಲ್ಲಿ ಏನಾಯ್ತು ಎಂಬ ಘಟನೆಯನ್ನ ವಿವರಿಸಿದ್ದಾರೆ. ನಿಜಕ್ಕೂ ಮಾರುತಿ ಗೌಡ ಮೇಲೆ ಹಲ್ಲೆ ಮಾಡಿದ್ದು ಯಾರು ಎಂದು ಬಹಿರಂಗಪಡಿಸಿದ್ದಾರೆ. ಹಾಗಿದ್ರೆ, ಈ ಹಲ್ಲೆ ಬಗ್ಗೆ ದುನಿಯಾ ವಿಜಯ್ ಹೇಳಿದ್ದೇನು.? ಮುಂದೆ ಓದಿ....

ನಾನು ಕಾಂಪಿಟೇಶನ್ ನೋಡೋಕೆ ಹೋಗಿದ್ದೆ.....

ನಾನು ಕಾಂಪಿಟೇಶನ್ ನೋಡೋಕೆ ಹೋಗಿದ್ದೆ.....

''ನಾನು ಕಾಂಪಿಟೇಶನ್ ನೋಡೋದಕ್ಕೆ ಹೋಗಿದ್ವಿ. ಕಾಂಪಿಟೇಶನ್ ಮುಗಿಸಿ ನಾವು ವಾಪಸ್ ಬರುತ್ತಿರುವಾಗ ಮಾರುತಿ ಗೌಡ ಕಾಣಿಸಿದರು. ಕಿಟ್ಟಿ ಎಲ್ಲಿ ಎಂದು ನಾನು ಕೇಳಿದೆ, ಅದಕ್ಕೆ ಅವರು ಗೊತ್ತಿಲ್ಲ ಎಂದರು. ನಾನು ಅಲ್ಲಿಂದ ಹೊರಟೆ. ಆಗ, ಮಾರುತಿ ಗೌಡ ನನ್ನ ಮಗ ಸಾಮ್ರಾಟ್ ತಲೆ ಮೇಲೆ ಟಚ್ ಮಾಡಿದ್ದಾರೆ. ಅದಕ್ಕೆ ನನ್ನ ಮಗ 'ಯಾಕ್ರೀ ತಲೆಗೆ ಹೊಡೆದಿದ್ದು' ಅಂತ ಕೇಳಿದ್ದಾನೆ''

ನನ್ನ ಮಗನಿಗೆ ಬೈಯ್ದ ಮಾರುತಿ ಗೌಡ

ನನ್ನ ಮಗನಿಗೆ ಬೈಯ್ದ ಮಾರುತಿ ಗೌಡ

''ನನ್ನ ಮಗನ ಬಳಿ ಮಾರುತಿ ಗೌಡ 'ನಿಂದು ಜಾಸ್ತಿ ಆಯ್ತು, ನಿಮ್ಮ ಅಪ್ಪದು ಜಾಸ್ತಿ ಆಯ್ತು. ಈ ವಯಸ್ಸಿನಲ್ಲೇ ಈ ಥರ ಡೈಲಾಗ್ ಅಲ್ಲ ಹೊಡಿತಿದ್ದಿಯಾ ನೋಡ್ಕೊಳ್ತೀನಿ' ಅಂದಿದ್ದಾನೆ. ಆ ವೇಳೆ ಅಲ್ಲಿ ಯಾರೋ ಒಬ್ಬ ಯಾಕೋ ಆ ಹುಡುಗನಿಗೆ ಹಾಗೆ ಅಂತಿದ್ದೀಯಾ ಎಂದು ಬಾಯಿ ಮುಚ್ಚಿದ್ದಾನೆ. ಅಷ್ಟರಲ್ಲೇ ಗುಂಪಿನಲ್ಲಿ ಹೊಡೆಯೋಕೆ ಶುರು ಮಾಡಿದ್ರು''

ನಾನು ಕಾರು ಬಳಿ ಇದ್ದೆ

ನಾನು ಕಾರು ಬಳಿ ಇದ್ದೆ

'ನಾನು ಆಗ ಕಾರು ಬಳಿ ಇದ್ದೆ. ತಕ್ಷಣ ಕೆಳಗೆ ಇಳಿದು ಬಂದೆ. ಅದು ಯಾರೋ ಅದು ಹಾಗೆ ಹೊಡಿತಿದ್ದಾರೆ ಅಂತ ಕೇಳಿದ್ದಕ್ಕೆ. ಅಪ್ಪ ನನ್ನ ಬೈಯ್ದಬಿಟ್ಟ ಎಂದು ಸಾಮ್ರಾಟ್ ಹೇಳಿದ. ಆಗ ನಾನು 'ಹೇ ಅವನು ನಮ್ಮ ಕಿಟ್ಟಿ ಅವರ ಅಣ್ಣನ ಮಗ, ಕರೆದುಕೊಳ್ರಿ' ಅಂತ ಹೇಳಿ ಕಾರಿನಲ್ಲಿ ಕೂರಿಸಿಕೊಂಡ್ವಿ''

ಮನೆಗೆ ಡ್ರಾಪ್ ಮಾಡೋಕೆ ಹೊಗಿದ್ದು

ಮನೆಗೆ ಡ್ರಾಪ್ ಮಾಡೋಕೆ ಹೊಗಿದ್ದು

''ಆಮೇಲೆ ಮಾರುತಿ ಗೌಡ ಅವರನ್ನ ಮನೆಗೆ ಬಿಡೋಕೆ ಹೋದ್ವಿ. ಆಲ್ ರೆಡಿ ತುಂಬಾ ಹೊಡೆದಿದ್ರು. ಬಾಯಲ್ಲಿ ರಕ್ತ ಬರ್ತಿತ್ತು. ಆಗ ರಾಜರಾಜೇಶ್ವರಿ ನಗರದವರೆಗೂ ಹೋಗಿದ್ವಿ. ಆಗ ಮಾರುತಿ ಗೌಡ ಇಲ್ಲಿ ಬಿಡಿ ನನ್ನ ಅಂದ್ರು. ಬೇಡ ನಾವು ಮನೆಗೆ ಬಿಡ್ತೀವಿ ಅಂತ ಹೇಳಿದ್ರ''

ಪೊಲೀಸಿನವರು ಫೋನ್ ಮಾಡಿದ್ರು

ಪೊಲೀಸಿನವರು ಫೋನ್ ಮಾಡಿದ್ರು

''ಅಷ್ಟರಲ್ಲೇ ಕಿಟ್ಟಿ ಫೋನ್ ಮಾಡಿದ್ರು. ಆದ್ರೆ, ಕಿಟ್ಟಿಗೆ ಸತ್ಯ ಗೊತ್ತಿಲ್ಲ. ಅವರಿಗೆ ಹೋಗಿದ್ದ ಸಂದೇಶವೇ ಬೇರೆ. ಆಮೇಲೆ ಕಿಟ್ಟಿಗೂ ನನಗೂ ಮಾತಾಯ್ತು. ಸರಿ ಗಾಡಿ ತಿರುಗಿಸಿಕೊಂಡು ವಾಪಸ್ ಬರೋಣ ಅನ್ನುವಷ್ಟರಲ್ಲಿ ಪೊಲೀಸ್ ಸ್ಟೇಷನ್ ನಿಂದ ಫೋನ್ ಬಂತು. ಮಾರುತಿಗೌಡ ಅವರನ್ನ ಕರೆದುಕೊಂಡು ಬನ್ನಿ, ಇಲ್ಲಂದ್ರೆ ಸಮಸ್ಯೆಯಾಗುತ್ತೆ ಅಂದ್ರು. ಸರಿ ಅಂತ ಹೈಗ್ರೌಂಡ್ ಪೊಲೀಸ್ ಠಾಣೆ ಬಳಿ ಕರೆದುಕೊಂಡು ಬಂದು ನಿಲ್ಲಿಸಿದೆ''

ಅವರು ಕಡೆಯವರು ಎಗರಾಡಿದ್ರು

ಅವರು ಕಡೆಯವರು ಎಗರಾಡಿದ್ರು

''ಆಮೇಲೆ ನಾನು ಪೊಲೀಸಿನವರು ಮಾತಿಗೆ ಗೌರವ ಕೊಟ್ಟು ಹೈಗ್ರೌಂಡ್ ಪೊಲೀಸ್ ಸ್ಟೇಷನ್ ಬಳಿ ಬಂದೆ. ಆಗ ಅವರ ಕಡೆಯವರು ಹುಡುಗರು ನನ್ನ ಮೇಲೆ ಎಗರಾಡಿದ್ರು. ಆದ್ರೆ, ನನ್ನ ಮಾತನ್ನ ಕೇಳದ ಕಿಟ್ಟಿ ಡಿಚ್ಚಿ ಹೊಡೆದ. ಇಷ್ಟೆ ಆಗಿದ್ದು'' ಎಂದು ದುನಿಯಾ ವಿಜಯ್ ಅವರು ಬಹಿರಂಗಪಡಿಸಿದ್ರು.

ವಿಜಿ ಹೇಳೋದು ಹಲ್ಲೆ ಮಾಡಿಲ್ಲ

ವಿಜಿ ಹೇಳೋದು ಹಲ್ಲೆ ಮಾಡಿಲ್ಲ

ಇಷ್ಟೆಲ್ಲಾ ಘಟನೆಯನ್ನ ವಿವರಿಸಿದ ದುನಿಯಾ ವಿಜಯ್ ಅವರು ನಾನು ಮಾರುತಿ ಗೌಡ ಅವರ ಮೇಲೆ ಹಲ್ಲೆ ಮಾಡಿಲ್ಲ. ಇಲ್ಲಿ ಅಪಾರ್ಥವಾಗಿದೆ. ಕಿಟ್ಟಿಗೂ ಸತ್ಯ ಗೊತ್ತಿಲ್ಲ. ನಾನು ಹಲ್ಲೆ ಮಾಡಿಲ್ಲ ಎಂದು ಮಾಧ್ಯಮಗಳೊಂದಿಗೆ ಹೇಳಿದ್ದಾರೆ.

More from Filmibeat

English summary
Kannada actor Duniya Vijay has clarified about the Gym trainer Maruthi Gowda incident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X