ಪತ್ರಕರ್ತ ರವಿ ಬೆಳಗೆರೆ ವಿರುದ್ಧ ಬುಸುಗುಟ್ಟಿದ 'ಬ್ಲ್ಯಾಕ್ ಕೋಬ್ರ'
Recommended Video
ಹಿರಿಯ ಪತ್ರಕರ್ತ ರವಿ ಬೆಳಗೆರೆ ಮತ್ತು ದುನಿಯಾ ವಿಜಯ್ ನಡುವಿನ ವಾಗ್ವಾದ ಇದೆ ಮೊದಲೇನಲ್ಲ. ಈ ಹಿಂದೆ ದುನಿಯಾ ವಿಜಯ್ ಅಭಿನಯದ "ಭೀಮಾ ತೀರದಲ್ಲಿ" ಸಿನಿಮಾ ರಿಲೀಸ್ ಆದ ಸಮಯದಲ್ಲಿ ಇಬ್ಬರ ಜಗಳ ತಾರಕಕ್ಕೇರಿತ್ತು.
ಚಿತ್ರದ ಕಥೆ ಬೆಳಗೆರೆಯವರ "ಭೀಮಾ ತೀರದ ಹಂತಕರು" ಪುಸ್ತಕದಿಂದ ಕದ್ದಿರುವುದು ಎಂದು ರವಿ ಬೆಳಗೆರೆ ನೇರವಾಗಿ ಆರೋಪ ಮಾಡಿದ್ದರು. ಅಲ್ಲಿಂದ ಶುರುವಾಗಿರುವ ಇಬ್ಬರ ವಾಗ್ವಾದ ಇನ್ನೂ ಮುಂದುವರೆದಿದೆ. ಮೊನ್ನೆ ಮೊನ್ನೆಯಷ್ಟೆ ರವಿ ಬೆಳಗೆರೆ ವಿಜಯ್ ಸಂಸಾರ ಕಲಹದ ಬಗ್ಗೆ ಟೀಕಾ ಪ್ರಹಾರ ಹರಿಸಿದ್ದರು.
ಬೆಳಗೆರೆ ಮಾತಿನಿಂದ ಸಿಟ್ಟಿಗೆದ್ದಿರು ವಿಜಯ್ ಇಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. "ಸು*****ಮಗನಿಗೆ ಇದೆ ಕೊನೆಯ ವಾರ್ಗಿನಿಂಗ್" ಎಂದು ಬೆಳಗೆರೆ ವಿರುದ್ಧ ಬುಸುಗುಟ್ಟಿದ್ದಾರೆ. ಇಂದು ಬಡವ ರಾಸ್ಕಲ್ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯ್ ಬೆಳಗೆರೆ ವಿರುದ್ಧ ಫುಲ್ ಗರಂ ಆಗಿದ್ದರು.

ರವಿ ಬೆಳಗೆರೆ ಬದುಕ್ಕಿದ್ದೀರಾ?
"ರವಿ ಬೆಳಗೆರೆ ಇನ್ನೂ ಬದುಕಿದ್ದಾರಾ? ಅವನಿಗೇ ಇಬ್ಬರು ಹೆಂಡತಿಯರು ನಾಲ್ಕು ಮಕ್ಕಳು ಇದ್ದಾರೆ, ಒಮ್ಮೆ ಪುಲ್ವಾಮ ಅಂತಾರೆ, ಇನ್ನೊಮ್ಮೆ ಹೆಂಡತಿ ಗಲಾಟೆ ಅಂತಾನೆ. ಆತನಿಗೆ ಪ್ರಜ್ಞೆನೇ ಇಲ್ಲ. ಏನಾಗಿದೆ ಅವನಿಗೆ. ಅವನಿಗೆ ಏನಾದ್ರು ಸಮಸ್ಯೆನಾ. ನೀವೆ ಕೇಳಿ ನೋಡಿ" ಎಂದು ಪತ್ರಕರ್ತರಿಗೆ ಹೇಳಿದ್ದಾರೆ.

'ಸು****ಮಗನಿಗೆ ಇದೆ ಕೊನೆ ವಾರ್ನಿಂಗ್'
"ಅವನ ವಯಸ್ಸಿಗೊಂದು ಮರಿಯಾದೆ ಇಲ್ಲವಾ? ಕುಡಿದು ಕುಡಿದು ಮಾನಸ ಆಸ್ಪತ್ರೆಯಲ್ಲಿ ಇರ್ತಾರೆ, ಪ್ರಜ್ಞೆ ಬಂದ್ಮೇಲೆ ಏನಾದ್ರು ಬರಿತ ಇರ್ತಾನೆ. ಪ್ರಜ್ಞೆ ಬಂದಾಗಲೆಲ್ಲ ದರ್ಶನ್ ಹೆಂಡತಿ, ದುನಿಯಾ ವಿಜಯ್ ಹೆಂಡತಿಯರು. ಇವನ ಹೆಂಡತಿಯರು ಇವನಿಗೆ ಕಣ್ಣಿಗೆ ಕಾಣುವುದಿಲ್ಲವಾ? ಸು****ಮಗನಿಗೆ ಇದೆ ಕೊನೆ ವಾರ್ನಿಂಗ್, ಅವನು ನೆಟ್ಟಗೆ ಇರಬೇಕು ಇನ್ನೊಬ್ಬನಿಗೆ ಹೇಳಬೇಕಾದ್ರೆ. ನೆಟ್ಟಗಿದ್ರೆ ಮಾತ್ರ ಇನ್ನೊಬ್ಬನಿಗೆ ಹೇಳಬೇಕು" ಎಂದು ಏಕವಚನದಲ್ಲಿ ಮಾತನಾಡಿದ್ದಾರೆ.

ವಿಜಿ ಬಗ್ಗೆ ಬೆಳಗೆರೆ ಟೀಕಾ ಪ್ರಹಾರ
"ಎಷ್ಟು ಜನರನ್ನು ಮದುವೆ ಆಗುತ್ತಾನೆ. ಆ ಹೆಂಡತಿನಾ ಬಿಟ್ಟು ಇನ್ನೊಂದು, ಅವಳನ್ನು ಬಿಟ್ಟು ಮತ್ತೊಂದು ಮದುವೆ ಆಗುತ್ತಾನೆ. ಅದಷ್ಟು ಜನರನ್ನು ಮದುವೆ ಆಗ್ತಾನೆ ಅವನು, ಅವನು ಕೂಡ ಜೈಲ್ ಗಿರಾಕಿ. ಏನಾಗಿದೆ ಅವನಿಗೆ" ಎಂದು ಬೆಳಗೆರೆ ದುನಿಯಾ ವಿಜಯ್ ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು.

ವಿಜಿ-ಬೆಳಗೆರೆ ಗಲಾಟೆ ಮೊದಲೇನಲ್ಲ
ಈ ಹಿಂದೆ ಕೂಡ ದುನಿಯ ವಿಜಯ್ ಮತ್ತು ರವಿ ಬೆಳಗೆರೆ ನಡುವೆ ದೊಡ್ಡ ಗಲಾಟೆಯೆ ಆಗಿತ್ತು. ದುನಿಯಾ ವಿಜಯ್ ಭೀಮಾ ತೀರದಲ್ಲಿ ಸಿನಿಮಾ ಮಾಡಿದಾಗ ಇಬ್ಬರ ಜಗಳ ತಾರಕ್ಕೇರಿತ್ತು. ಭೀಮಾ ತೀರಕ್ಕೆ ಹೋದರೆ ಸುಮ್ಮನಿರಲ್ಲ ಎಂದು ದುನಿಯಾ ವಿಜಯ್ ಗೆ ಸವಾಲ್ ಹಾಕಿದ್ದರು. ಅದೇನಾಗುತ್ತೋ ನೋಡೆ ಬಿಡೋಣ ಎಂದು ವಿಜಯ್ ಮತ್ತು ತಂಡ ಭೀಮಾ ತೀರಕ್ಕೆ ಹೋಗಿ ವಾಪಸ್ ಬಂದಿದ್ದರು. ಸಿನಿಮಾ ರಿಲೀಸ್ ಆದ ಸಮಯದಲ್ಲಂತು ಇಬ್ಬರ ನಡುವೆ ದೊಡ್ಡ ವಾಗ್ವಾದವೆ ನಡೆದಿತ್ತು.


Click it and Unblock the Notifications











