For Quick Alerts
  ALLOW NOTIFICATIONS  
  For Daily Alerts

  ಸಂಕ್ರಾಂತಿ ಹಬ್ಬಕ್ಕೆ ದುನಿಯಾ ವಿಜಯ್ ಫೇಸ್‌ಬುಕ್ ಲೈವ್, ಕಾರಣವೇನು?

  |

  ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ ಸಲಗ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲವೂ ಮುಗಿಸಿರುವ ಸಲಗ ಚಿತ್ರಮಂದಿರದ ಲೆಕ್ಕಾಚಾರಕ್ಕಾಗಿ ಕಾಯುತ್ತಿದೆ.

  ಸಲಗ ಚಿತ್ರದ ಬಗ್ಗೆ ನಾಳೆ ಸಿಗುತ್ತಾ ಬಿಗ್ ಅಪ್ಡೇಟ್ | Duniya Vijay | Filmibeat Kannada

  100 ಪರ್ಸೆಂಟ್ ಆಸನ ಭರ್ತಿಗೆ ಅವಕಾಶ ನೀಡಿದ್ಮೇಲೆ ಸಿನಿಮಾ ಬಿಡುಗಡೆ ಮಾಡೋಣ ಎಂದು ನಿರ್ಧರಿಸಿ ಕಾಯುತ್ತಿದೆ. ಎಲ್ಲವೂ ಸರಿ ಹೋಗುವವರೆಗೂ ಸಲಗ ಸಿನಿಮಾ ಬಿಡುಗಡೆ ಮಾಡಲ್ಲ ಎಂದು ಈ ಹಿಂದೆಯೇ ನಿರ್ಮಾಪಕ ಕೆಪಿ ಶ್ರೀಕಾಂತ್ ಸ್ಪಷ್ಟಪಡಿಸಿದ್ದರು.

  ಚಿತ್ರರಂಗದಲ್ಲಿ ಇದೇ ಮೊದಲು: 'ಸಲಗ' ಶಾಸನ ರಚಿಸಿದ ವಿಜಿ ಅಭಿಮಾನಿಚಿತ್ರರಂಗದಲ್ಲಿ ಇದೇ ಮೊದಲು: 'ಸಲಗ' ಶಾಸನ ರಚಿಸಿದ ವಿಜಿ ಅಭಿಮಾನಿ

  ಇದೀಗ, ನಟ, ನಿರ್ದೇಶಕ ದುನಿಯಾ ವಿಜಯ್ ಫೇಸ್‌ಬುಕ್ ಲೈವ್ ಬರಲಿದ್ದಾರೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಜನವರಿ 14ರ ಸಂಜೆ 6 ಗಂಟೆಗೆ ತಮ್ಮದೇ ಅಧಿಕೃತ ಖಾತೆಯಲ್ಲಿ ಲೈವ್ ಬರಲಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ.

  ದುನಿಯಾ ವಿಜಯ್ ಫೇಸ್‌ಬುಕ್ ಲೈವ್ ಬರುತ್ತಿರುವುದರ ಹಿಂದಿನ ಅಸಲಿ ಕಾರಣ ಏನು ಎನ್ನುವುದು ಸದ್ಯಕ್ಕೆ ಗೊತ್ತಿಲ್ಲ. ಬಹುಶಃ ಫೇಸ್‌ಬುಲ್ ಲೈವ್ ವೇಳೆ ಸಲಗ ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸಬಹುದು ಎಂಬ ನಿರೀಕ್ಷೆ ಇದೆ.

  ಏಕಂದ್ರೆ, ಜನವರಿ 10 ರಂದು ಫೇಸ್‌ಬುಕ್ ಲೈವ್ ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಬರ್ಟ್ ಚಿತ್ರದ ರಿಲೀಸ್ ದಿನಾಂಕ ಘೋಷಿಸಿದ್ದರು. ಈಗ ದುನಿಯಾ ವಿಜಯ್ ಫೇಸ್‌ಬುಕ್ ಲೈವ್ ಬರ್ತಿದ್ದು, ಸಲಗ ರಿಲೀಸ್ ದಿನಾಂಕ ಹೇಳಬಹುದು ಎಂಬ ನಿರೀಕ್ಷೆ ಇದೆ.

  ಸಲಗ ಬಿಡುಗಡೆ ದಿನಾಂಕ ಹೇಳದಿದ್ದರೂ ಟೈಟಲ್ ಹಾಡು, ಟ್ರೈಲರ್ ಅಥವಾ ಇನ್ನಿತರ ವಿಚಾರಗಳನ್ನು ಮಾತನಾಡಬಹುದು.

  'ಸಲಗ' ಬಳಿಕ ಮತ್ತೊಂದು ಸಿನಿಮಾಗೆ ವಿಜಯ್ ನಿರ್ದೇಶನ: ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ ವಿಜಿ'ಸಲಗ' ಬಳಿಕ ಮತ್ತೊಂದು ಸಿನಿಮಾಗೆ ವಿಜಯ್ ನಿರ್ದೇಶನ: ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ ವಿಜಿ

  ಇನ್ನುಳಿದಂತೆ ಸಲಗ ಚಿತ್ರದಲ್ಲಿ ದುನಿಯಾ ವಿಜಯ್ ಜೊತೆ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ಸಂಜನಾ ಆನಂದ್ ನಾಯಕಿಯಾಗಿದ್ದಾರೆ. ಈಗಾಗಲೇ ಸಲಗ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದು, ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇದೆ.

  English summary
  Kannada actor Duniya Vijay is coming live on Facebook tomorrow evening at 6pm for an exciting announcement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X