ದುನಿಯಾ ವಿಜಯ್ ಇದೀಗ ವಿಚಾರಣಾಧೀನ ಖೈದಿ ನಂಬರ್ 9035.!

ಸ್ಯಾಂಡಲ್ ವುಡ್ ನಲ್ಲಿ 'ಜಂಗ್ಲಿ' ಎಂದೇ ಖ್ಯಾತಿ ಪಡೆದಿದ್ದ ದುನಿಯಾ ವಿಜಯ್ ಇದೀಗ ಜೈಲು ಪಾಲಾಗಿದ್ದಾರೆ. ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ಹಲ್ಲೆ ನಡೆಸಿದ ದುನಿಯಾ ವಿಜಯ್ ಮತ್ತು ಮೂವರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.

ನಿನ್ನೆ ರಾತ್ರಿ ಪರಪ್ಪನ ಅಗ್ರಹಾರ ತಲುಪಿದ ದುನಿಯಾ ವಿಜಯ್ ಅಂಡ್ ಗ್ಯಾಂಗ್ ಗೆ ಇಂದು ವಿಚಾರಣಾಧೀನ ಖೈದಿ ಸಂಖ್ಯೆ ನೀಡಲಾಗಿದೆ. ಅದರ ಅನುಸಾರ ದುನಿಯಾ ವಿಜಯ್ ಇದೀಗ ವಿಚಾರಣಾಧೀನ ಖೈದಿ ನಂಬರ್ 9035, ಪ್ರಸಾದ್ ವಿಚಾರಣಾಧೀನ ಖೈದಿ ನಂಬರ್ 9036, ಮಣಿ ವಿಚಾರಣಾಧೀನ ಖೈದಿ ನಂಬರ್ 9037 ಹಾಗೂ ಪ್ರಸಾದ್ ವಿಚಾರಣಾಧೀನ ಖೈದಿ ನಂಬರ್ 9038.

ಇಂದು ಮಧ್ಯಾಹ್ನ ಮೂರು ಗಂಟೆಗೆ 8ನೇ ಎಸಿಎಂಎಂ ಕೋರ್ಟ್ ನಲ್ಲಿ ದುನಿಯಾ ವಿಜಯ್ ಅಂಡ್ ಗ್ಯಾಂಗ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಜಾಮೀನಿಗೆ ಪಾನಿಪೂರಿ ಕಿಟ್ಟಿ ಪರ ವಕೀಲರು ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ.

Duniya Vijay is now Khaidi Number 9035

ತಮ್ಮ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಶ್ಯಾಮ ಸುಂದರ್ ರನ್ನ ನೇಮಕ ಮಾಡಲು ಡಿಸಿಎಂ ಪರಮೇಶ್ವರ್ ಬಳಿ ಪಾನಿಪೂರಿ ಕಿಟ್ಟಿ ಇಂದು ಬೆಳಗ್ಗೆ ಮನವಿ ಮಾಡಿದ್ದರು.

ಅತ್ತ ಏಟು ತಿಂದ ಮಾರುತಿ ಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತನ ತುಟಿ ಸೀಳಾಗಿದ್ದು, ಹೊಲಿಗೆ ಹಾಕಲಾಗಿದೆ. ತಿಂದ ಆಹಾರವನ್ನು ಜೀರ್ಣಿಸಿಕೊಳ್ಳಲಾಗದೆ, ಮಾರುತಿ ಗೌಡ ವಾಂತಿ ಮಾಡಿಕೊಳ್ಳುತ್ತಿದ್ದಾನೆ ಎಂದು ಪಾನಿಪೂರಿ ಕಿಟ್ಟಿ ತಿಳಿಸಿದ್ದಾರೆ.

More from Filmibeat

English summary
Kannada Actor Duniya Vijay and Gang to be Parappana Agrahara jail. Duniya Vijay is now Khaidi Number 9035.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X