ಎರಡು ವರ್ಷದ ಅಜ್ಞಾತವಾಸ ಮುಗಿಸಿದ ''ಭೀಮ'', ಬದ್ಲಾಗುತ್ತಾ ಕನ್ನಡ ಚಿತ್ರರಂಗದ ಅದೃಷ್ಟ..?

ಕನ್ನಡ ಚಿತ್ರರಂಗದ ಟೈಮು ತುಂಬಾನೇ ಖರಾಬ್ ಆಗಿದೆ. ಅಲ್ಲೊಂದು.. ಇಲ್ಲೊಂದು.. ಚಿತ್ರ ಹೊರತು ಪಡಿಸಿದರೆ, ಈ ವರ್ಷ ಬಂದ ಯಾವ ಚಿತ್ರವೂ ಸದ್ದು ಮಾಡಿಲ್ಲ.ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರಗಳಿಲ್ಲದೇ ಚಿತ್ರಮಂದಿರದ ವಾತಾವರಣ ಕಳೆಗುಂದಿದೆ. ಹಳೆಯ ಚಿತ್ರಗಳ ಮರು ಬಿಡುಗಡೆ ಕಾರ್ಯಕ್ರಮಕ್ಕೂ ಸಪ್ಪೆ ಪ್ರತಿಕ್ರಿಯೆ ಪ್ರೇಕ್ಷಕರಿಂದ ಸಿಗುತ್ತಿದೆ.

ಇನ್ನೂ.. ಸದ್ಯದ ವಾತಾವರಣ ಹೇಗಿದೆ ಎಂಬುದು ನಿಮಗೆ ಗೊತ್ತು. ವಿಚ್ಛೇದನ .. ಕೊಲೆ .. ಬೆದರಿಕೆಗಳಿಗೆ ಕನ್ನಡ ಚಿತ್ರರಂಗ ಹೆಸರುವಾಸಿಯಾಗಿದೆ. ಸಂದರ್ಭ ಮತ್ತು ಸನ್ನಿವೇಶ ಹೀಗಿರುವಾಗ ಆತ್ಮ ವಿಶ್ವಾಸದ ಕಿಡಿ‌, ಭರವಸೆಯ ಬೆಳಕಿನೊಂದಿಗೆ ''ಭೀಮ'' ಅಖಾಡಕ್ಕೆ ಇಳಿಯಲು ರೆಡಿಯಾಗಿದ್ದಾನೆ.

duniya-vijay-is-set-to-release-his-directorial-film-bheema-on-august-9th

ಹೌದು. ಭೀಮ... ಸೆಟ್ಟೇರಿದಾನಿಂದ್ಲೂ ದೊಡ್ಡ ಮಟ್ಟದ ಹೈಪ್, ಕ್ರೇಜ್ ಹುಟ್ಟಿಸಿರೋ ಸಿನಿಮಾ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾ. ಸ್ಯಾಂಡಲ್ವುಡ್ ಸಲಗ ದುನಿಯಾ ವಿಜಯ್ ನಿರ್ದೇಶನದಲ್ಲಿ ಮೂಡಿ ಬಂದ ಮತ್ತೊಂದು ಮಾಸ್ ಕಮರ್ಷಿಯಲ್ ಎಂಟ್ರಟೈನರ್. ಸಲಗದಂತಹ ಬ್ಲಾಕ್ ಬಸ್ಟರ್ ಕೊಟ್ಮೇಲೆ ದುನಿಯಾ ವಿಜಯ್ ಮತ್ತೆ ಆಕ್ಷನ್ ಕಟ್ ಹೇಳೋದ್ರೊಂದಿಗೆ ಲೀಡ್ ರೋಲ್ ಪ್ಲೇ ಮಾಡಿರೋ ಸಿನಿಮಾ.

ಇಂತಹ ಸಿನಿಮಾ ಶುರುವಾಗಿ ಮೊನ್ನೆಯ ಏಪ್ರಿಲ್‌ಗೆ ಎರಡು ವರ್ಷಗಳಾಗಿವೆ. ಆದರೂ.. ಅದ್ಯಾಕೋ ಕನ್ನಡದ ಕರಿಚಿರತೆ ದುನಿಯಾ ವಿಜಯ್ ಚಿತ್ರವನ್ನ ಬಿಡುಗಡೆ ಮಾಡುವ ಮನಸ್ಸನ್ನ ಇಲ್ಲಿಯವರೆಗೆ ಮಾಡಿಯೇ ಇರಲಿಲ್ಲ. ಅದಕ್ಕೆ ಕಾರಣ ಹತ್ತಾರು ಇರಬಹುದು. ಆದರೆ ಈಗ ಭೀಮ ಚಿತ್ರವನ್ನ ಪ್ರೇಕ್ಷಕರ ಮುಂದೆ ಕರೆತರಲು ಅಣಿಯಾದ ಸಲಗ ವಿಜಯ್ ಕುಮಾರ್ ಆಗಸ್ಟ್ 09ಕ್ಕೆ ಚಿತ್ರದ ಬಿಡುಗಡೆಗೆ ಮುಹೂರ್ತವನ್ನು ನಿಗಧಿ ಮಾಡಿದ್ದಾರೆ.

duniya-vijay-is-set-to-release-his-directorial-film-bheema-on-august-9th

ಅಂದ್ಹಾಗೇ ಚಂಡ ಪ್ರತಿಭಾವಂತರ ದಂಡು ಕಟ್ಟಿಕೊಂಡು ವಿಜಯ್ ಮಾಡಿರುವ ಈ ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ನ ʻಕೌನ್ರೆ ಉನೇ ಹಾಡುʼ ಜಗದ್ವಿಖ್ಯಾತಿಯಾಗಿತ್ತು. ಅದಾದ ನಂತರ ʻಲವ್‌ ಯು ಕಣೇʼ ಹಾಡು ಕೂಡಾ ಸೂಪರ್‌ ಹಿಟ್‌ ಆಗಿತ್ತು. ಇದರ ಜೊತೆಗೆ ಫಸ್ಟ್‌ ಲುಕ್ಕು, ಟೀಸರುಗಳೂ ಚೆನ್ನಾಗೇ ಸೌಂಡು ಮಾಡಿದ್ದವು. ಇಷ್ಟೊಳ್ಳೆ ಪಬ್ಲಿಸಿಟಿಯಾಗುತ್ತಿರುವ ಹೊತ್ತಲ್ಲೇ ಸಿನಿಮಾ ರಿಲೀಸ್‌ ಮಾಡಿದ್ದಿದ್ದರೆ ಚೆನ್ನಾಗಿತ್ತು ಎಂಬ ಅಭಿಪ್ರಾಯ ಈ ಹಿಂದೆ ವ್ಯಕ್ತವಾಗಿತ್ತು.

ಏನೇ ಇರಲಿ ಲೇಟ್ ಆದ್ರೂ ಲೇಟೆಸ್ಟ್ ಆಗಿ ಸದ್ಯಕ್ಕೆ ''ಭೀಮ'' ಚಿತ್ರವನ್ನ ದುನಿಯಾ ವಿಜಯ್ ತೆರೆಗೆ ತರುತ್ತಿದ್ದಾರೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸಿರೋ ಈ ಚಿತ್ರಕ್ಕೆ ಶಿವಸೇನಾ ಕ್ಯಾಮೆರಾ ವರ್ಕ್ ಇದೆ. ಮಾಸ್ತಿ ಸಂಭಾಷಣೆ ಇರುವ ಚಿತ್ರದಲ್ಲಿ ಅಶ್ವಿನಿ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ಇನ್ನೂ.. ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಜೊತೆಗೆ ವಿಜಯ್ ಸಲಗಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರು. ಆದಾದ ಮೇಲೆ ಭೀಮ ಮೂಲಕ ಮತ್ತೆ ಸಂಚಲ ಸೃಷ್ಟಿಸೋದಕ್ಕೆ ಸಜ್ಜಾಗಿದ್ದಾರೆ. ಭೀಮ ಚಿತ್ರದಿಂದಾದ್ರೂ ಕನ್ನಡ ಚಿತ್ರರಂಗದ ನಸೀಬು ಬದಲಾಗುತ್ತಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ.

duniya-vijay-is-set-to-release-his-directorial-film-bheema-on-august-9th

ಉಳಿದಂತೆ ಆಗಸ್ಟ್ ನಲ್ಲಿಯೇ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಕೂಡ ತೆರೆಗೆ ಬರಲಿದೆ. ಮೊನ್ನೆಯಷ್ಟೇ ಖುದ್ದು ಈ ಮಾತನ್ನ ಹೇಳಿದ್ದರು ಕೂಡ. ಹೀಗಾಗಿ ಭೀಮ ಮತ್ತು ಮ್ಯಾಕ್ಸ್ ಒಂದೇ ದಿನ ಬಿಡುಗಡೆಯಾಗಲಿವೆಯಾ ಎಂಬ ಕುತೂಹಲ ಈಗ ಅನೇಕರನ್ನ ಕಾಡುತ್ತಿದೆ. ಎರಡು ಸಿನಿಮಾಗಳು ಒಟ್ಟಿಗೆ ಬಿಡುಗಡೆಯಾಗದಿರಲಿ ಅನ್ನುವುದು ಅಭಿಮಾನಿಗಳ ಆಶಯ

More from Filmibeat

English summary
Duniya Vijay's much-awaited film 'BHEEMA' will be released on August 9th. Will 'BHEEMA' change the fortunes of the Kannada film industry?"
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X