For Quick Alerts
  ALLOW NOTIFICATIONS  
  For Daily Alerts

  ದುನಿಯಾ ವಿಜಯ್ 'ಜಾಕ್ಸನ್' ತಮಿಳು ರೀಮೇಕ್

  By Rajendra
  |

  ನಟ ದುನಿಯಾ ವಿಜಯ್ ಅವರ ಹೊಸ ಚಿತ್ರ 'ಜಾಕ್ಸನ್' ಸೆಟ್ಟೇರಿದೆ. ಅವರ 39ನೇ ಹುಟ್ಟುಹಬ್ಬದ ದಿನ 'ಜಾಕ್ಸನ್' ಚಿತ್ರಕ್ಕೆ ಚಾಲನೆ ಸಿಕ್ಕಿರುವುದು ವಿಜಿ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ. ಈ ಚಿತ್ರ ತಮಿಳಿನ ಯಶಸ್ವಿ ಚಿತ್ರ 'ಇದರ್ ಕುಥನ್ ಆಸೈಪಟ್ಟಿ ಬಾಲಕುಮಾರ' (ಇದಕ್ಕಾಗಿ ಆಸೆಪಟ್ಟೆಯಾ ಬಾಲಕುಮಾರ) ರೀಮೇಕ್ ಎಂಬುದು ವಿಶೇಷ.

  ಮೂಲ ಚಿತ್ರದಲ್ಲಿ ವಿಜಯ್ ಸೇತುಪತಿ ಪ್ರಮುಖ ಪಾತ್ರ ಪೋಷಿಸಿದ್ದರು. ಗೋಕುಲ ಆಕ್ಷನ್ ಕಟ್ ಹೇಳಿದ ಚಿತ್ರವಿದು. ಮೂಲ ಚಿತ್ರದಲ್ಲಿ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ದುನಿಯಾ ವಿಜಯ್ ಇಮೇಜಿಗೆ ತಕ್ಕಂತೆ ತೆರೆಗೆ ತರಲಾಗುತ್ತಿದೆ. [ವಿಜಿ 'ಅರ್ಥಪೂರ್ಣ'ಹುಟ್ಟುಹಬ್ಬ ಆಚರಣೆ]

  ಕುಡಿತದಿಂದ ಏನಲ್ಲಾ ಅನಾಹುತಗಳಾಗುತ್ತವೆ ಎಂಬ ಸಂದೇಶ ಕ್ಲೈಮ್ಯಾಕ್ಸ್ ನಲ್ಲಿ ಬಳಸಿಕೊಂಡಿದ್ದೇವೆ. ಜಂಗ್ಲಿ ಹಾಗೂ ಜಾನಿ ಮೇರಾ ನಾಮ್ ಚಿತ್ರಗಳಂತೆ ಜಾಕ್ಸನ್ ಚಿತ್ರವೂ ಕಾಮಿಡಿ ಎಂಟರ್ ಟೈನರ್ ಎಂದಿದ್ದಾರೆ ದುನಿಯಾ ವಿಜಯ್.

  ಇಷ್ಟು ದಿನ ಸಂಕಲನಕಾರರಾಗಿ ಕೆಲಸ ಮಾಡಿರುವ ಸನತ್ ಕುಮಾರ್ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈಹಾಕುತ್ತಿದ್ದಾರೆ. ಜನಪ್ರಿಯ ನಿರ್ದೇಶ ಯೋಗರಾಜ್ ಭಟ್ ಅವರ ಗರಡಿಯಲ್ಲಿ ಪಳಗಿದ ಸತನ್ ಅವರ ಆರು ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ.

  ಪಾವನಿ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಒಟ್ಟು 45 ದಿನಗಳ ಕಾಲ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಳ್ಳಲಾಗಿದೆ. ಮೂಲ ಚಿತ್ರದ 12 ನಿಮಿಷಗಳಷ್ಟು ಭಾಗವನ್ನು ಮೊಟಕುಗೊಳಿಸಿ ತೆರೆಗೆ ತರಲಾಗುತ್ತಿದೆ. ಚಿತ್ರದಲ್ಲಿ ಪಾವನಿ ಅವರದು ಪಕ್ಕದ ಮನೆ ಹುಡುಗಿ ಪಾತ್ರ. ನಾಯಕ ನಟನಿಂದ ಏನೆಲ್ಲಾ ಕಿರಿಕಿರಿ ಅನುಭವಿಸುತ್ತಾರೆ ಎಂಬುದು ತೆರೆಯ ಮೇಲೆ ಮೂಡಿಬರಲಿದೆ.

  ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ನಡೆಸುತ್ತಿದ್ದ ಸುಂದರ್ ಗೌಡ ಅವರು ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಬದಲಾಗುತ್ತಿದ್ದಾರೆ. ವೀರ್ ಸಮರ್ಥ್ ಅವರ ಸಂಗೀತ, ಕಿರಣ್ ಅವರ ಸಂಭಾಷಣೆ ಚಿತ್ರಕ್ಕಿದೆ. ಛಾಯಾಗ್ರಹಣ ಸೆಲ್ವಂ. (ಏಜೆನ್ಸೀಸ್)

  English summary
  Actor Duniya Vijya's upcoming movie Jackson is the remake of Tamil successful movie 'Idarkuthan Aasaipattai Balakumara', which lead Vijay Sethupathi as main actor and directed by Gokul. Sanath Kumar is the director of 'Jakson', while Pawani plays female lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X