ಕೀರ್ತಿ ಗೌಡಗೆ ಮಗು ಇಲ್ವಂತೆ.! ದುನಿಯಾ ವಿಜಯ್ ಸುಳ್ಳು ಹೇಳಿದ್ರೇನು.?
Recommended Video

ಸ್ಯಾಂಡಲ್ ವುಡ್ ನ 'ಕರಿಚಿರತೆ' ದುನಿಯಾ ವಿಜಯ್ ಮತ್ತೊಂದು ಮದುವೆ ಆಗಿದ್ದಾರೆ ಎಂಬ ಸುದ್ದಿ ಎರಡು ವರ್ಷಗಳ ಹಿಂದೆ... ಅಂದ್ರೆ 2016 ರಲ್ಲಿ ಬ್ರೇಕ್ ಆಗಿತ್ತು.
'ಎಲ್ಲರ ಒಪ್ಪಿಗೆ ಪಡೆದು ಮದುವೆ ಆಗಿರುವೆ' ಎಂದು ದುನಿಯಾ ವಿಜಯ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ದುನಿಯಾ ವಿಜಯ್-ಕೀರ್ತಿ ಗೌಡ ಮದುವೆ ಸುದ್ದಿ ಎಲ್ಲೆಡೆ ಬ್ರೇಕಿಂಗ್ ನ್ಯೂಸ್ ಆದ್ಮೇಲೆ ಮೊದಲ ಪತ್ನಿ ನಾಗರತ್ನ ಎಲ್ಲೂ ಕಾಣಿಸಲೇ ಇಲ್ಲ.
ಎರಡು ವರ್ಷಗಳಿಂದಲೂ ಸೈಲೆಂಟ್ ಆಗಿದ್ದ ದುನಿಯಾ ವಿಜಯ್ ಧರ್ಮಪತ್ನಿ ನಾಗರತ್ನ ಇದೀಗ ಗುಡುಗಿದ್ದಾರೆ. ಮಾಧ್ಯಮಗಳ ಮುಂದೆ ಕೂತು ಕೀರ್ತಿ ಗೌಡಗೆ ನಾಗರತ್ನ ಛೀಮಾರಿ ಹಾಕಿದ್ದಾರೆ.
''ಕೀರ್ತಿ ಗೌಡ-ದುನಿಯಾ ವಿಜಯ್ ಗೆ ಮಗು ಇಲ್ಲ. ಯಾವುದೋ ಫೋಟೋ ತೋರಿಸಿ ಸುಳ್ಳು ಹೇಳಿದ್ದಾರೆ. ಅಷ್ಟಕ್ಕೂ ಕೀರ್ತಿ ಗೌಡ ಹೆಂಡತಿ ಅಲ್ಲ. ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ'' ಎಂದು ನಾಗರತ್ನ ಮಾಧ್ಯಮಗಳ ಮುಂದೆ ಬಾಂಬ್ ಸಿಡಿಸಿದ್ದಾರೆ. ಮುಂದೆ ಓದಿರಿ...

ಎರಡು ವರ್ಷಗಳ ಹಿಂದೆ ಹರಿದಾಡಿದ್ದ ಫೋಟೋಗಳು.!
''ದುನಿಯಾ ವಿಜಯ್-ಕೀರ್ತಿ ಗೌಡ (ಕೀರ್ತಿ ಪಟಾಡಿ) ಮದುವೆ ಆಗಿದ್ದಾರೆ. ಇಬ್ಬರಿಗೂ ಗಂಡು ಮಗು ಇದೆ'' ಎಂದು 2016 ರಲ್ಲಿ ಸುದ್ದಿ ಆಗಿತ್ತು. ಅದಕ್ಕೆ ತಕ್ಕ ಹಾಗೆ ದುನಿಯಾ ವಿಜಯ್, ಕೀರ್ತಿ ಗೌಡ ಜೊತೆಗೆ ಒಂದು ಮಗು ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆದವು.

ಎಲ್ಲಿದೆ ಮಗು.?
''ಅವರಿಗೆ ಮಗು ಎಲ್ಲಿದೆ.? ಮಗುವನ್ನ ಕರ್ಕೊಂಡು ಬಂದು ತೋರಿಸಲಿ.. ಡಿ.ಎನ್.ಎ ಟೆಸ್ಟ್ ಮಾಡಿಸೋಣ'' ಎಂದು ನಾಗರತ್ನ ಮಾಧ್ಯಮಗಳ ಮುಂದೆ ಸವಾಲು ಹಾಕಿದ್ದಾರೆ.

ನಾಗರತ್ನ ಆಡಿದ ಮಾತುಗಳೇನು.?
''ಅವರಿಗೆ (ದುನಿಯಾ ವಿಜಯ್-ಕೀರ್ತಿ ಗೌಡ) ಮಗು ಇದೆ ಅಂತ ಟಿವಿಯಲ್ಲಿ ತೋರಿಸಿದ್ರು. ಜನರ ಕಣ್ಣಿಗೂ ಇವರು ಮಣ್ಣೆರಚುತ್ತಿದ್ದಾರೆ. ಮೀಡಿಯಾ ಮುಂದೆ ಸುಳ್ಳು ಹೇಳಿ ಸಿಂಪಥಿ ಗಿಟ್ಟಿಸಿಕೊಳ್ಳಬೇಕಾ.? ಯಾವುದೋ ಫೋಟೋ ತೆಗೆದುಕೊಂಡು ಎಲ್ಲಾ ಕಡೆ ಪ್ರಚಾರ ಮಾಡಿದರು. ಎಲ್ಲಿದೆ ಮಗು.? ಕರ್ಕೊಂಡು ಬಂದು ಮಗುವನ್ನ ತೋರಿಸಲಿ, ಡಿ.ಎನ್.ಎ ಟೆಸ್ಟ್ ಮಾಡಿಸೋಣ. ಪ್ರೂವ್ ಮಾಡಲಿ...'' ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ ದುನಿಯಾ ವಿಜಯ್ ಪತ್ನಿ ನಾಗರತ್ನ.

ಕೀರ್ತಿ ಗೌಡ ಹೆಂಡತಿ ಅಲ್ಲ.!
''ಕೀರ್ತಿ ಗೌಡನ ಎಲ್ಲೂ ಹೆಂಡತಿ ಅಂತ ಹೇಳಬಾರದು. ಯಾಕಂದ್ರೆ, ನನಗೆ ಡೈವೋರ್ಸ್ ಕೊಟ್ಟಿಲ್ಲ. ನಾನು ಮಾತ್ರ ಹೆಂಡತಿ. ನಮ್ಮ ಹಿಂದೂ ಸಮಾಜದಲ್ಲಿ ಡೈವೋರ್ಸ್ ಇಲ್ಲದೆ ಮದುವೆ ಮಾಡಿಕೊಳ್ಳುವ ಹಾಗಿಲ್ಲ. ಕೀರ್ತಿ ಗೌಡ ಹೆಂಡತಿ ಅಲ್ಲ. ಅನೈತಿಕ ಸಂಬಂಧ ಇಟ್ಟುಕೊಂಡು ಆಕೆ ಬಂದಿರೋದು'' ಅಂತಾರೆ ನಾಗರತ್ನ.

ಕಾಫಿ-ಟೀ ಕಾಯಿಸಲು ಇದ್ದರಂತೆ.!
''ಕಾಫಿ-ಟೀ ಕಾಯಿಸುವುದಕ್ಕೆ ಅವಳನ್ನ (ಕೀರ್ತಿ ಗೌಡ) ಇಟ್ಟುಕೊಂಡಿದ್ದರಂತೆ. ನಮ್ಮ ಅತ್ತೆ-ಮಾವ ಕೂಡ ಅಲ್ಲಿ ಸೇರಿಕೊಂಡಿದ್ದಾರೆ. ನಾನು ತುಂಬಾ ಘಾಟಿ ಅಂತೆ. ನನಗೇನೂ ಗೊತ್ತಿಲ್ಲ ಅಂತ ಎಲ್ಲಾ ಸೇರಿ ನನ್ನನ್ನ ತುಳಿದುಬಿಟ್ಟರು. ಈಗ ನೋಡಿ ಈ ಸ್ಥಿತಿ ಬಂದಿದೆ'' ಅಂತ ಅಳಲು ತೋಡಿಕೊಂಡಿದ್ದಾರೆ ನಾಗರತ್ನ.

ಬೇರೆ ಯಾರೂ ಸಿಗಲಿಲ್ವಾ.?
''ಅವಳಿಗೆ (ಕೀರ್ತಿ ಗೌಡ) ಬೇರೆ ಯಾರೂ ಸಿಗಲಿಲ್ವಾ.? ಮೂರು ಮಕ್ಕಳ ತಂದೆನೇ ಬೇಕಿತ್ತಾ.? ಮಾನ ಮರ್ಯಾದೆ ಇಲ್ವಾ ಆಕೆಗೆ.? ಏನೂ ಅನ್ಸಲ್ವಾ.? ಈ ತರಹ ಸುಮಾರು ಜನ ಬಂದು ಹೋಗಿದ್ದಾರೆ ನನ್ನ ಜೀವನದಲ್ಲಿ... ಎಲ್ಲರೂ ಬಂದು ಹೋಗಿರೋರೇ.! ಇವರೂ ಸ್ವಲ್ಪ ದಿನ ಇದ್ದು ಹೋಗ್ತಾರೆ'' - ನಾಗರತ್ನ, ದುನಿಯಾ ವಿಜಯ್ ಮೊದಲ ಪತ್ನಿ

ದರಿದ್ರ ಶುರುವಾಯ್ತು
''ಕೀರ್ತಿ ಗೌಡ ಬಂದಿದ್ದೇ, ನಮ್ಮ ಮನೆಯಲ್ಲಿ ದರಿದ್ರ ಶುರುವಾಯ್ತು. ಅನಿಲ್ ಹಾಗೂ ಉದಯ್ ನೀರುಪಾಲಾದರು. ಬಳಿಕ ಬರೀ ರಗಳೆ, ಕೇಸ್ ಗಳೇ ಆಗಿದೆ ನಮಗೆ. ಕೀರ್ತಿ ಗೌಡದು ದರಿದ್ರ ಕಾಲು'' - ನಾಗರತ್ನ, ದುನಿಯಾ ವಿಜಯ್ ಮೊದಲ ಪತ್ನಿ


Click it and Unblock the Notifications











