'ಟಗರು' ಅಡ್ಡಾದಲ್ಲಿ ಕಾಣಿಸಿಕೊಂಡ 'ಸಲಗ': ಇಲ್ಲಿದೆ ಕಾರಣ
Recommended Video
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ನಟ ದುನಿಯಾ ವಿಜಯ್ ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಬ್ಲಾಕ್ ಕೋಬ್ರ ಕೆಲವು ದಿನಗಳಿಂದ 'ಸಲಗ' ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಇದರ ನಡುವೆ ಸ್ಯಾಂಡಲ್ ವುಡ್ 'ಟಗರು' ಅನ್ನು 'ಸಲಗ' ದಿಢೀರ್ ಭೇಟಿ ಆಗಿರುವುದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.
ದುನಿಯಾ ವಿಜಿ ಅಭಿನಯದ 'ಸಲಗ' ಚಿತ್ರದಲ್ಲಿ ಬಹುತೇಕ 'ಟಗರು' ಚಿತ್ರತಂಡ ಕೆಲಸಮಾಡುತ್ತಿದೆ. ಪ್ರಾರಂಭದಲ್ಲಿ ನಿಂತು ಹೋಗಿದ್ದ 'ಸಲಗ' ಚಿತ್ರವನ್ನು 'ಟಗರು' ನಿರ್ಮಾಪಕ ಕೆ ಪಿ ಶ್ರೀಕಾಂತ್ ಕೈಗೆತ್ತಿಕೊಂಡು ಬಂಡವಾಳ ಹೂಡುವ ಮೂಲಕ ಚಿತ್ರವನ್ನು ಕಿಕ್ ಸ್ಟಾರ್ ಮಾಡಿದ್ದಾರೆ.
ಇದೆ ಖುಷಿಯಲ್ಲಿ ವಿಜಿ ಹ್ಯಾಟ್ರಿಕ್ ಹೀರೋ ಮನೆಗೆ ಭೇಟಿ ನೀಡಿ ಶಿವಣ್ಣ ಆಶೀರ್ವಾದ ಪಡೆದಿದ್ದಾರೆ. ಅಷ್ಟೆಯಲ್ಲದೆ ಶಿವಣ್ಣ ಸಲಗ ಚಿತ್ರತಂಡಕ್ಕೆ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರಂತೆ. ನಿಜವಾದ ಟಗರಿನ ಆಶೀರ್ವಾದದ ಜೊತೆಗೆ ಸಲಗ ಪ್ರಾರಂಭಿಸುತ್ತಿದ್ದಾರೆ ದುನಿಯಾ ವಿಜಿ.

'ಟಗರು' ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸಕ್ಸಸ್ ಕಂಡ ಸಿನಿಮಾವಾಗಿದೆ. ಸೆಂಚುರಿ ಸ್ಟಾರ್ ಸಿನಿಮಾ ಯಶಸ್ವಿಯಾಗಿ ಸೆಂಚುರಿ ಬಾರಿಸಿ, 125 ದಿನಗಳ ಅದ್ಧೂರಿ ಪ್ರದರ್ಶನ ಕಂಡ ಸಿನಿಮಾವಾಗಿತ್ತು. ಅದೆ ಚಿತ್ರತಂಡವೀಗ 'ಸಲಗ' ಚಿತ್ರಕ್ಕೂ ಕೆಲಸ ಮಾಡುತ್ತಿರುವುದರಿಂದ 'ಟಗರು' ಅಂತಹ ಮತ್ತೊಂದು ದೊಡ್ಡ ಹಿಟ್ ಸಿನಿಮಾ ಕೊಡುವ ತಯಾರಿಯಲ್ಲಿದೆ ಚಿತ್ರತಂಡ.
ಅಂದ್ಹಾಗೆ 'ಸಲಗ' ಚಿತ್ರಕ್ಕೆ ನಿರ್ದೇಶಕ ಯಾರು ಎನ್ನುವುದು ಇನ್ನು ಅಂತಿಮವಾಗಿಲ್ಲ. ಆದ್ರೆ 'ಟಗರು' ಚಿತ್ರಕ್ಕೆ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ಚರಣ್ ರಾಜ್, ಚಿತ್ರದ ಸಹ ನಿರ್ದೇಶಕ ಅಭಿ, ಮಾಸ್ತಿ ಸಂಭಾಷಣೆ 'ಸಲಗ' ಚಿತ್ರದಲ್ಲೂ ಮುಂದುವರೆಯಲಿದ್ದಾರೆ. ವಿಶೇಷ ಅಂದ್ರೆ ಚಿತ್ರದಲ್ಲಿ ವಿಜಿಗೆ ಟಕ್ಕರ್ ಕೊಡಲಿದ್ದಾರೆ ಡಾಲಿ ಧನಂಜಯ್.


Click it and Unblock the Notifications











