For Quick Alerts
  ALLOW NOTIFICATIONS  
  For Daily Alerts

  ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ 'ಸಲಗ'

  |
  ಸಿದ್ದರಾಮಯ್ಯರನ್ನು ಭೇಟಿ ಮಾಡಿದ ದುನುಯಾ ವಿಜಯ್..? | FILMIBEAT KANNADA

  ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಲಿರುವ ಸಲಗ ಚಿತ್ರತಂಡ ಮೇಕಿಂಗ್ ಹಂತದಲ್ಲೇ ಭಾರಿ ಕುತೂಹಲ ಮೂಡಿಸುತ್ತಿದೆ. ಇಷ್ಟು ದಿನ ತೆರೆಮೇಲೆ ಅಬ್ಬರಿಸಿದ್ದ ವಿಜಿ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಲು ತಯಾರಾಗಿದ್ದು, ಈ ವಿಶೇಷ ಚಿತ್ರಕ್ಕೆ ಸ್ಯಾಂಡಲ್ ವುಡ್ ಬಳಗವನ್ನೇ ಸಾಕ್ಷಿಯನ್ನಾಗಿಸುವ ಪ್ರಯತ್ನ ಸಾಗುತ್ತಿದೆ.

  'ಸಲಗ' ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಆಹ್ವಾನಿಸುವ ಉದ್ದೇಶದಿಂದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವು ಸ್ಟಾರ್ ಗಳನ್ನ ಈಗಾಗಲೇ ಭೇಟಿ ಮಾಡಿದ್ದಾರೆ ನಟ ವಿಜಿ.

  'ಸಲಗ' ಚಿತ್ರದಲ್ಲಿ ಅಲೋಕ್ ಕುಮಾರ್-ಸೈಲೆಂಟ್ ಸುನೀಲನ ನೆರಳು? 'ಸಲಗ' ಚಿತ್ರದಲ್ಲಿ ಅಲೋಕ್ ಕುಮಾರ್-ಸೈಲೆಂಟ್ ಸುನೀಲನ ನೆರಳು?

  ಇದೀಗ, ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ಅಗ್ರಗಣ್ಯ ನಾಯಕ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ್ದಾರೆ. ಜೂನ್ 6 ರಂದು ಬಂಡಿ ಮಹಾಕಾಳಮ್ಮ ದೇವಾಲಯದಲ್ಲಿ ಸಲಗ ಚಿತ್ರದ ಮೂಹೂರ್ತ ನಡೆಯಲಿದ್ದು, ಈ ಕಾರ್ಯಕ್ರಮಕ್ಕ ಸಿದ್ದರಾಮಯ್ಯ ಅವರನ್ನ ಕೂಡ ಆಹ್ವಾನ ಮಾಡಲಾಗಿದೆ.

  ದುನಿಯಾ ವಿಜಿಯ 'ಸಲಗ' ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್ ದುನಿಯಾ ವಿಜಿಯ 'ಸಲಗ' ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್

  ಇತ್ತೀಚಿಗಷ್ಟೆ ನಿರ್ಮಾಪಕ ಕೆಪಿ ಶ್ರೀಕಾಂತ್ ಅವರು ಕಿಚ್ಚ ಸುದೀಪ್ ಅವರನ್ನ ಭೇಟಿಯಾಗಿ ಸಲಗ ಚಿತ್ರದ ಮೂಹೂರ್ತಕ್ಕೆ ಅತಿಥಿಯಾಗಿ ಬರಲು ಆಹ್ವಾನಿಸಿದ್ದಾರೆ. ಸುದೀಪ್ ಕೂಡ ಒಪ್ಪಿದ್ದಾರೆ ಎನ್ನಲಾಗಿದೆ.

  ರಾಜಕೀಯ ನಾಯಕರು, ಸಿನಿಮಾ ಗೆಳೆಯರಿಗೆ ಆಹ್ವಾನ ನೀಡಿರುವ ದುನಿಯಾ ವಿಜಯ್, ಜೂನ್ ಮೊದಲ ವಾರದಲ್ಲೇ ಸಲಗ ಸಿನಿಮಾದ ಮುಹೂರ್ತ ಮಾಡಲಿದ್ದಾರೆ. ಧನಂಜಯ್, ಟಗರು ಕಾಕ್ರೋಚ್ ಸೇರಿದಂತೆ ಟಗರು ತಂತ್ರಜ್ಞರು ಇಲ್ಲಿ ಕೆಲಸ ಮಾಡಲಿದ್ದಾರಂತೆ.

  English summary
  Kannada actor Duniya vijay has meet ex chief minister siddaramaiah in his residence along with producer kp srikanth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X