twitter
    For Quick Alerts
    ALLOW NOTIFICATIONS  
    For Daily Alerts

    ಸೆಪ್ಟೆಂಬರ್ 29ಕ್ಕೆ ನಿರ್ಧಾರವಾಗಲಿದೆ ದುನಿಯಾ ವಿಜಯ್ ಭವಿಷ್ಯ

    |

    Recommended Video

    ನಾಳೆ ಏನು ತೀರ್ಪು ಸಿಗುತ್ತೋ..! | Filmibeat Kannada

    ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಜಾಮೀನು ನಿರಾಕರಣೆ ಆದ ಕಾರಣ ಈಗ ದುನಿಯಾ ವಿಜಯ್ ಸೆಷನ್ಸ್ ಕೋರ್ಟ್‌ ಮೊರೆ ಹೋಗಿದ್ದಾರೆ. ಗುರುವಾರ ವಿಜಿ ಪರ ವಕೀಲ ಶಿವಕುಮಾರ್ ಅವರು ಸೆಷನ್ಸ್ ಕೋರ್ಟ್‌ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

    ಅರ್ಜಿ ವಿಚಾರಣೆ ಮಾಡಿದ ಸೆಷನ್ಸ್ ಕೋರ್ಟ್ ಸೆಪ್ಟೆಂಬರ್ 29ಕ್ಕೆ ವಿಚಾರಣೆ ಮುಂದೂಡಿದೆ. ಅಲ್ಲಿಗೆ ಶನಿವಾರ ವಿಜಿ ಅವರ ಜಾಮೀನು ಅರ್ಜಿ ನ್ಯಾಯಧೀಶರ ಮುಂದೆ ಬರಲಿದ್ದು, ಬೇಲ್ ಕೊಡ್ಬೇಕಾ ಅಥವಾ ಬೇಡವಾ ಎಂದು ತೀರ್ಮಾನಿಸಲಿದ್ದಾರೆ.

    ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ಮತ್ತು ಅಪಹರಣ ಪ್ರಕರಣದಲ್ಲಿ ಬಂಧನವಾಗಿರುವ ನಟ ವಿಜಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿದ್ದರು. ಸೋಮವಾರ ವಿಚಾರಣೆ ನಡೆಸಿದ್ದ ಕೋರ್ಟ್ ಬುಧವಾರ ಅರ್ಜಿ ವಜಾ ಮಾಡಿ ಆದೇಶ ಹೊರಡಿಸಿತ್ತು. ಈಗ ಕಾನೂನು ಹೋರಾಟ ಮುಂದುವರಿಸಿರುವ ವಿಜಿ ಮತ್ತು ಸ್ನೇಹಿತರು ಸೆಷನ್ಸ್ ಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

    Duniya Vijay moved session court for bail

    ದುನಿಯಾ ವಿಜಿ ಜಾಮೀನು ಅರ್ಜಿ ವಜಾ: ಜೈಲಲ್ಲೇ ಉಳಿಯಬೇಕು 'ಜಂಗ್ಲಿ'ದುನಿಯಾ ವಿಜಿ ಜಾಮೀನು ಅರ್ಜಿ ವಜಾ: ಜೈಲಲ್ಲೇ ಉಳಿಯಬೇಕು 'ಜಂಗ್ಲಿ'

    ಸೆಪ್ಟೆಂಬರ್ 23ರಂದು ಅಂಬೇಡ್ಕರ್ ಭವನದಲ್ಲಿ ನಡೆದ ಘಟನೆಯ ನಂತರ ಹೈಗ್ರೌಂಡ್ಸ್ ಠಾಣೆ ಪೊಲೀಸರು ದುನಿಯಾ ವಿಜಯ್, ಮಣಿ, ಪ್ರಸಾದ್ ಎಂಬುವರನ್ನ ಬಂಧಿಸಿದ್ದರು. ಕೋರ್ಟ್ 14 ದಿನಗಳ ಕಾಲ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಬೆಂಗಳೂರಿನ ಕೇಂದ್ರ ಕಾರಗೃಹ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

    ದುನಿಯಾ ವಿಜಿ-ಪಾನಿಪುರಿ ಕಿಟ್ಟಿ ಮಧ್ಯೆ ಇರೋ ಈ 'ಪ್ರಸಾದ್' ಯಾರು.?ದುನಿಯಾ ವಿಜಿ-ಪಾನಿಪುರಿ ಕಿಟ್ಟಿ ಮಧ್ಯೆ ಇರೋ ಈ 'ಪ್ರಸಾದ್' ಯಾರು.?

    ಘಟನೆಯ ವಿವರ:

    ಬೆಂಗಳೂರಿನ ವಸಂತನಗರದ ಅಂಬೇಡ್ಕರ್​ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್​ ಕಾಂಪಿಟೇಷನ್​ ನಡೆಯುತ್ತಿತ್ತು. ಈ ವೇಳೆ ದುನಿಯಾ ವಿಜಿ ತಂಡ ​ಟ್ರೈನರ್​ ಮಾರುತಿ ಗೌಡ ಅವರ ಮೇಲೆ ಹಲ್ಲೆ ಮಾಡಿ, ಕಾರಿನಲ್ಲಿ ಕರೆದೊಯ್ದಿದ್ದು, ಬೆದರಿಕೆ ಹಾಕಿದ್ದಾರೆ ಎಂದು ಪಾನಿಪುರಿ ಕಿಟ್ಟಿ ದೂರು ನೀಡಿದ್ದಾರೆ.

    ಮತ್ತೊಂದೆಡೆ ಹಲ್ಲೆಗೊಳಗಾದ ಮಾರುತಿ ಗೌಡ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರುತಿ ಅವರ ತುಟಿಗೆ 15 ಹೊಲಿಗೆ ಹಾಕಲಾಗಿದೆ.

    English summary
    Kannada actor Duniya Vijay moved session court for bail. Bengaluru 8th ACMM court on September 26, 2018 rejected the bail application of Duniya Vijay.
    Thursday, September 27, 2018, 17:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X