»   » ಅಪ್ಪನ ರೀತಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ದುನಿಯಾ ವಿಜಯ್ ಪುತ್ರ

ಅಪ್ಪನ ರೀತಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ದುನಿಯಾ ವಿಜಯ್ ಪುತ್ರ

Posted By:
Subscribe to Filmibeat Kannada
ಸ್ಯಾಂಡಲ್ ವುಡ್ ಗೆ ತಮ್ಮ ಮಗ ಸಾಮ್ರಾಟ್ ನನ್ನ ಪರಿಚಯಯಿಸುತ್ತಿರೋ ದುನಿಯಾ ವಿಜಯ್ | Filmibeat Kannada

ಒಂದು ಕಡೆ ನಟ ದುನಿಯಾ ವಿಜಯ್ 'ಕನಕ'ನಾಗಿ ಘರ್ಜನೆ ಮಾಡುತ್ತಿದ್ದಾರೆ. ಇತ್ತ ಅದರೊಂದಿಗೆ ದುನಿಯಾ ವಿಜಯ್ ಮಗ ಕೂಡ ಸಿನಿಮಾರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿ ಕೇಳಿ ಬಂದಿದೆ.

ಇತ್ತೀಚಿಗಷ್ಟೆ ನಟ ಗಣೇಶ್ ಮಗಳು 'ಚಮಕ್' ಚಿತ್ರದಲ್ಲಿ ಅಭಿನಯಿಸಿದ್ದರು. ಅದರ ಹಿಂದೆಯೇ ಈಗ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ತೆರೆ ಮೇಲೆ ಮಿಂಚುವುದಕ್ಕೆ ಸಜ್ಜಾಗಿದ್ದಾರೆ. ತಮ್ಮದೆ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಒಂದು ವಿಶೇಷ ಸಿನಿಮಾದ ಮೂಲಕ ಮಗನನ್ನು ವಿಜಿ ಲಾಂಚ್ ಮಾಡಿಸುವ ಪ್ಲಾನ್ ಮಾಡಿದ್ದಾರೆ. ಮುಂದೆ ಓದಿ...

'ಕುಸ್ತಿ'

ದುನಿಯಾ ವಿಜಯ್ ಸದ್ಯ 'ಕುಸ್ತಿ' ಎನ್ನುವ ಹೆಸರಿನಲ್ಲಿ ಒಂದು ಚಿತ್ರ ಮಾಡುತ್ತಿದ್ದು, ಈ ಚಿತ್ರದಲ್ಲಿ ಮೊದಲ ಬಾರಿಗೆ ವಿಜಿ ಪುತ್ರ ಸಾಮ್ರಾಟ್ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರಂತೆ.

'ಕುಸ್ತಿ' ಬಗ್ಗೆಯ ಕಥೆ

ಚಿತ್ರದ ಟೈಟಲ್ ಗೆ ತಕ್ಕಂತೆ ಸಿನಿಮಾದ ಕಥೆ 'ಕುಸ್ತಿ' ಮೇಲೆ ಇದೆಯಂತೆ. ತುಂಬ ದಿನದಿಂದ ಕುಸ್ತಿಯ ಮೇಲೆ ಸಿನಿಮಾ ಮಾಡುವ ಕನಸು ಹೊಂದಿದ್ದ ವಿಜಿ ಈಗ ಅದನ್ನು ಸಹಕಾರ ಮಾಡಿಕೊಳ್ಳಲಿದ್ದಾರೆ.

ಮಗನ ಪಾತ್ರ ಏನು

'ಕುಸ್ತಿ' ಚಿತ್ರದಲ್ಲಿ ದುನಿಯಾ ವಿಜಯ್ ಅವರ ಬಾಲ್ಯದ ಪಾತ್ರದಲ್ಲಿ ಸಾಮ್ರಾಟ್ ಕಾಣಿಸಿಕೊಳ್ಳಲಿದ್ದಾರೆ.

'ಕನಕ' ದುನಿಯಾ ವಿಜಯ್ ಬಾಯಿಯಲ್ಲಿಯೂ ಬಂತು 'ಹವಾ' ಡೈಲಾಗ್

ದುನಿಯಾ ವಿಜಯ್ ನಿರ್ಮಾಣ

'ಕುಸ್ತಿ' ಚಿತ್ರವನ್ನು ದುನಿಯಾ ವಿಜಯ್ ಅವರೇ ತಮ್ಮ 'ದುನಿಯಾ ಟಾಕೀಸ್' ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಿದ್ದಾರಂತೆ.

ನಿರ್ದೇಶಕರು ಯಾರು?

'ಕುಸ್ತಿ' ಚಿತ್ರದ ಸ್ಕ್ರಿಪ್ಟ್ ವರ್ಕ್ ಸದ್ಯ ನಡೆಯುತ್ತಿದ್ದು, ಚಿತ್ರದ ನಿರ್ದೇಶಕರು ಯಾರು ಎನ್ನುವುದು ಇನ್ನು ಫೈನಲ್ ಆಗಿಲ್ಲ.

ದುನಿಯಾ ವಿಜಿಗೆ 'ಅಂತಾರಾಷ್ಟ್ರೀಯ ಅಥ್ಲೆಟ್'ನಿಂದ ತರಬೇತಿ.!

ತಯಾರಿ ನಡೆಯುತ್ತಿದೆ

ಸದ್ಯ ದುನಿಯಾ ವಿಜಯ್ ಈ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಮಗನಿಗೂ ಕೂಡ ತರಬೇತಿ ಕೊಡಿಸುತ್ತಿದ್ದಾರಂತೆ.

English summary
Actor Duniya Vijay planning to launch his son Samrat to film industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X