For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರದಲ್ಲಿ ಮತ್ತೆ 50 ಪರ್ಸೆಂಟ್ ಪ್ರಸ್ತಾವನೆಗೆ ದುನಿಯಾ ವಿಜಯ್ ವಿರೋಧ

  |

  ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದಂತೆ ಕರ್ನಾಟಕದ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಅವಕಾಶ ರದ್ದುಗೊಳಿಸಿ 50 ಪರ್ಸೆಂಟ್ ನೀತಿ ಜಾರಿ ಮಾಡುವುದು ಉತ್ತಮ ಎಂದು ತಜ್ಞರ ತಂಡ ಸರ್ಕಾರಕ್ಕೆ ಸಲಹೆ ನೀಡಿದೆ.

  ತಜ್ಞರ ತಂಡದ ಸಲಹೆಗೆ ಚಿತ್ರರಂಗದಿಂದ ವಿರೋಧ ವ್ಯಕ್ತವಾಗಿದೆ. 'ಥಿಯೇಟರ್‌ಗಳಲ್ಲಿ ಮತ್ತೆ 50 ಪರ್ಸೆಂಟ್ ಮಾಡಿದ್ರೆ ಚಿತ್ರೋದ್ಯಮ ತೊಂದರೆಗೆ ಸಿಲುಕಲಿದೆ' ಎಂದು ನಟ ದುನಿಯಾ ವಿಜಯ್ ಖಂಡಿಸಿದ್ದಾರೆ.

  ಸುದೀಪ್, ಪುನೀತ್ ಚಿತ್ರಗಳ ನಿರ್ಮಾಪಕರಿಗೆ ಮತ್ತೆ ಹೆಚ್ಚಾಯ್ತು ಆತಂಕ?ಸುದೀಪ್, ಪುನೀತ್ ಚಿತ್ರಗಳ ನಿರ್ಮಾಪಕರಿಗೆ ಮತ್ತೆ ಹೆಚ್ಚಾಯ್ತು ಆತಂಕ?

  ''ಕಳೆದ ಒಂದು ವರ್ಷದಿಂದ ಇಂಡಸ್ಟ್ರಿ ಬಹಳಷ್ಟು ಕಷ್ಟದಲ್ಲಿದೆ. ಈಗ ನಿಧಾನಕ್ಕೆ ಚೇತರಿಕೆ ಕಾಣುತ್ತಿರುವ ಸಮಯದಲ್ಲಿ ಮತ್ತೆ 50 ಪರ್ಸೆಂಟ್ ಮಾಡಿದ್ರೆ ಬಹಳ ತೊಂದರೆಯಾಗಲಿದೆ. ದಯವಿಟ್ಟು 50 ಪರ್ಸೆಂಟ್ ಮಾಡಬೇಡಿ'' ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  'ಥಿಯೇಟರ್‌ಗಳಲ್ಲಿ ಅಗತ್ಯ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎಲ್ಲ ಶೋಗಳ ನಡುವೆಯೂ ಸ್ಯಾನಿಟೈಸ್ ಮಾಡುತ್ತಿದ್ದಾರೆ. ಮಾಸ್ಕ್ ಧರಿಸಿ ಪ್ರೇಕ್ಷಕರು ಬರುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸೋಣ. ಎಲ್ಲರೂ ಎಚ್ಚರ ವಹಿಸಿಕೊಂಡು ಬನ್ನಿ ಎಂದು ಹೇಳಬಹುದು. 50 ಪರ್ಸೆಂಟ್ ಮಾಡಿದ್ರೆ ಚಿತ್ರರಂಗ ಬಹಳ ದೊಡ್ಡ ಅನ್ಯಾಯವಾಗುತ್ತದೆ'' ಎಂದು ನಟ ವಿಜಯ್ ಒತ್ತಾಯಿಸಿದ್ದಾರೆ.

  ಪೊಗರು ಮತ್ತು ರಾಬರ್ಟ್ ಸಿನಿಮಾಗಳು ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿವೆ. ಬಹುತೇಕ ಕಡೆ ಥಿಯೇಟರ್ ಹೌಸ್‌ಫುಲ್ ಪ್ರದರ್ಶನ ಕಂಡಿವೆ. ಸಾಮಾಜಿಕ ಅಂತರವೇ ಇಲ್ಲದಂತೆ ಜನರು ಸೇರುತ್ತಿದ್ದಾರೆ. ಇದು ತಜ್ಞರ ತಂಡದ ಗಮನಕ್ಕೆ ಬಂದಿದೆ. ಹಾಗಾಗಿ, ಇದಕ್ಕೆ ಕಡಿವಾಣ ಹಾಕಲು 50 ಪರ್ಸೆಂಟ್ ಮೊರೆ ಹೋಗಲು ಚಿಂತಿಸಲಾಗಿದೆ.

  50% ಸೀಟು ಮಾತ್ರವೇ ಚಿತ್ರಮಂದಿರ ಭರ್ತಿ; ಪವರ್ ಸ್ಟಾರ್ ಗರಂ50% ಸೀಟು ಮಾತ್ರವೇ ಚಿತ್ರಮಂದಿರ ಭರ್ತಿ; ಪವರ್ ಸ್ಟಾರ್ ಗರಂ

  ಯಾವ ಊರಿಗೆ ಯಾವಾಗ ಬರ್ತಾರೆ ಗೊತ್ತಾ ಪವರ್ ಸ್ಟಾರ್? | Yuvarathna | Puneeth Rajkumar | Filmibeat Kannada

  ಮತ್ತೊಂದೆಡೆ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆಯಾಗುತ್ತಿದೆ. ಬಳಿಕ ದುನಿಯಾ ವಿಜಯ್ ಅವರ ಸಲಗ ಹಾಗೂ ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರಗಳು ರಿಲೀಸ್ ಆಗಲಿದೆ. ಒಂದು ವೇಳೆ 50 ಪರ್ಸೆಂಟ್ ಜಾರಿ ಮಾಡಿದ್ರೆ ಈ ಚಿತ್ರಗಳಿಗೆ ದೊಡ್ಡ ಮಟ್ಟದಲ್ಲಿ ತೊಂದರೆಯಾಗಲಿದೆ.

  English summary
  Kannada actor Duniya Vijay Reaction on Govt Plan to make 50% occupancy in theatres.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X