ಜೈಲಿನಿಂದ ಹೊರಬಂದ ಬ್ಲಾಕ್ ಕೋಬ್ರಾ ದುನಿಯಾ ವಿಜಯ್
ಎಂಟು ದಿನಗಳ ಸೆರೆವಾಸದ ಬಳಿಕ ಸ್ಯಾಂಡಲ್ ವುಡ್ 'ಕರಿಚಿರತೆ' ದುನಿಯಾ ವಿಜಯ್ ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಎಂಟು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸಿದ್ದ ದುನಿಯಾ ವಿಜಯ್, ಡ್ರೈವರ್ ಪ್ರಸಾದ್, ಟ್ರೈನರ್ ಪ್ರಸಾದ್ ಹಾಗೂ ಮಣಿ ಇದೀಗ ಹೊರಗೆ ಬಂದಿದ್ದಾರೆ.
ಜಿಮ್ ಟ್ರೈನರ್ ಮಾರುತಿ ಗೌಡ ಕಿಡ್ನ್ಯಾಪ್ ಹಾಗೂ ಹಲ್ಲೆ ನಡೆಸಿದ ಆರೋಪದ ಮೇಲೆ ದುನಿಯಾ ವಿಜಯ್ ಮತ್ತು ಮೂವರನ್ನು ಬಂಧಿಸಲಾಗಿತ್ತು. ದುನಿಯಾ ವಿಜಯ್ ಮತ್ತು ಸ್ನೇಹಿತರು ಸೆಷನ್ಸ್ ಕೋರ್ಟ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ಇವತ್ತು ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಯ್ತು.
ಒಂದು ಲಕ್ಷ ರೂಪಾಯಿ ಬಾಂಡ್ ಹಾಗೂ ಶ್ಯೂರಿಟಿ ಆಧಾರದ ಮೇರೆಗೆ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿತು. ''ಸಿನಿಮಾ ನಟರು ರೋಲ್ ಮಾಡೆಲ್ ಆಗಿರಬೇಕು. ಹೀಗೆಲ್ಲಾ ಮಾಡುವುದು ಸರಿಯಲ್ಲ. ನೀವು ಇಂತಹ ಆರೋಪಗಳಲ್ಲಿ ಕೋರ್ಟ್ ಮೆಟ್ಟಿಲೇರಬಾರದು'' ಎಂದು ದುನಿಯಾ ವಿಜಯ್ ಗೆ ಎಚ್ಚರಿಕೆ ಕೊಟ್ಟು ನ್ಯಾಯಾಧೀಶರು ಜಾಮೀನು ನೀಡಿದ್ದರು. ಮುಂದೆ ಓದಿರಿ...

ಜಾಮೀನು ಪ್ರಕ್ರಿಯೆ ಪೂರ್ಣ
ಜಾಮೀನು ಮಂಜೂರು ಆದ ಕೂಡಲೆ, ಆದೇಶದ ಪ್ರತಿಯನ್ನು ದುನಿಯಾ ವಿಜಯ್ ಪರ ವಕೀಲರು ಸೆಂಟ್ರಲ್ ಜೈಲಿಗೆ ತಲುಪಿಸಿದರು. ಜಾಮೀನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬಳಿಕ ದುನಿಯಾ ವಿಜಯ್ ಮತ್ತು ಸ್ನೇಹಿತರು ಹೊರಗೆ ಬಂದರು.

ಕೀರ್ತಿ ಗೌಡಗಾಗಿ ಕಾದ ದುನಿಯಾ ವಿಜಯ್
ಜಾಮೀನು ಪ್ರಕ್ರಿಯೆ ಪೂರ್ಣಗೊಂಡರೂ, ಸುಮಾರು ಒಂದು ಗಂಟೆ ಕಾಲ ಜೈಲಿನಲ್ಲೇ ದುನಿಯಾ ವಿಜಯ್ ಇದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಎರಡನೇ ಪತ್ನಿ ಕೀರ್ತಿ ಗೌಡ ಮೈಸೂರಿನಿಂದ ಬರುತ್ತಿದ್ದ ಕಾರಣ, ಕೀರ್ತಿ ಗೌಡ ಪರಪ್ಪನ ಅಗ್ರಹಾರಕ್ಕೆ ಬರುವವರೆಗೂ ಹೊರಗೆ ಬಾರದಿರಲು ದುನಿಯಾ ವಿಜಯ್ ನಿರ್ಧರಿಸಿದ್ದರು ಎಂದು ವರದಿ ಆಗಿದೆ.

ಪತ್ನಿಯನ್ನ ಅಪ್ಪಿಕೊಂಡ ದುನಿಯಾ ವಿಜಯ್
7.30 ಗಂಟೆ ಸುಮಾರಿಗೆ ಕೀರ್ತಿ ಗೌಡ ಪರಪ್ಪನ ಅಗ್ರಹಾರ ಜೈಲು ತಲುಪಿದರು. ಬಳಿಕ ದುನಿಯಾ ವಿಜಯ್ ಮತ್ತು ಗ್ಯಾಂಗ್ ಜೈಲಿನಿಂದ ಹೊರಗೆ ಬಂದರು. ಆಚೆ ಬರುತ್ತಿದ್ದಂತೆಯೇ, ಕೀರ್ತಿ ಗೌಡ ರನ್ನ ದುನಿಯಾ ವಿಜಯ್ ಅಪ್ಪಿಕೊಂಡರು.

ನಿವಾಸದತ್ತ ಹೊರಟ ದುನಿಯಾ ವಿಜಯ್
ಜೈಲಿನಿಂದ ಹೊರಗೆ ಬಂದ್ಮೇಲೆ ನಿವಾಸದ ಕಡೆಗೆ ದುನಿಯಾ ವಿಜಯ್ ಹೊರಟರು. ಈ ವೇಳೆ ಪತ್ನಿ ಹಾಗೂ ಸ್ನೇಹಿತರು ಜೊತೆಯಲ್ಲಿ ಇದ್ದರು.


Click it and Unblock the Notifications











