'ಬರ್ತಡೇ ಆಚರಣೆ ಬೇಡ: ಈ ಮಹತ್ವದ ಕೆಲಸಕ್ಕೆ ಕೈ ಜೋಡಿಸಿ': ದುನಿಯಾ ವಿಜಯ್

'ಈ ವರ್ಷ ಹುಟ್ಟುಹಬ್ಬ ಆಚರಿಸುವುದು ಬೇಡ, ದುಡ್ಡು ವೆಚ್ಚ ಮಾಡುವುದು ಬೇಡ, ಅದರ ಬದಲು ಒಂದು ಪುಣ್ಯದ ಕೆಲಸಕ್ಕೆ ಕೈ ಜೋಡಿಸೋಣ' ಎಂದು ನಟ ದುನಿಯಾ ವಿಜಯ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Recommended Video

ಅಭಿಮಾನಿಗಳಿಗೆ ಸಿಹಿ ಜೊತೆಗೆ ಕಹಿ ಸುದ್ದಿ ಕೊಟ್ಟ ದುನಿಯಾ ವಿಜಯ್ | Filmibeat Kannada

ಸಂಕ್ರಾಂತಿ ಹಬ್ಬದ ವಿಶೇಸವಾಗಿ ಫೇಸ್‌ಬುಕ್ ಲೈವ್ ಬಂದಿದ್ದ ದುನಿಯಾ ವಿಜಯ್ ''ಈ ವರ್ಷ ಹುಟ್ಟುಹಬ್ಬ ಆಚರಿಸುವುದು ಬೇಡ. ಕೊರೊನಾ ಇನ್ನು ಹೋಗಿಲ್ಲ. ಅದಕ್ಕೆ ಔಷಧ ಸಹ ಇನ್ನು ಕೈಗೆ ಸಿಕ್ಕಿಲ್ಲ. ನಾನು ಸಹ ಕುಟುಂಬದ ಜೊತೆಗೆ ಹೊರಗಡೆ ಬಂದಿರುವೆ. ದಯವಿಟ್ಟು ಈ ಸಲ ದೂರದ ಊರುಗಳಿಂದ ಮನೆ ಬಳಿ ಯಾರೂ ಬರಬೇಡಿ'' ಎಂದು ವಿಜಿ ವಿನಂತಿಸಿಕೊಂಡಿದ್ದಾರೆ.

''ಪ್ರತಿ ವರ್ಷ ನೀವು ನನ್ನ ಮನೆಗೆ ಬಂದ ಹಾರೈಸಿದ ಕಾರಣ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಈ ವರ್ಷ ದಯವಿಟ್ಟು ತಮ್ಮ ಮನೆಗಳಿಂದ, ನೀವು ಇದ್ದಲ್ಲಿಯೇ ನೀವು ನನಗೆ ಆಶೀರ್ವಾದ ಮಾಡಿ, ನಿಮ್ಮ ಪ್ರೀತಿಯೇ ನನಗೆ ಖುಷಿ'' ಎಂದು ಮನವಿ ಮಾಡಿದ್ದಾರೆ.

Duniya Vijay requested his fans not to celebrate birthday

''ಹುಟ್ಟುಹಬ್ಬದ ಪ್ರಯುಕ್ತವಾಗಿ ಸಲಗ ಸಿನಿಮಾದ ಟೈಟಲ್ ಹಾಡು ಬಿಡುಗಡೆ ಮಾಡುತ್ತಿದ್ದೇವೆ. ಈ ಹಾಡನ್ನು ನೋಡಿ ಖುಷಿ ಪಟ್ಟರೆ ಅದೇ ನನಗೆ ಸಂತೋಷ'' ಎಂದು ಮಾಹಿತಿ ನೀಡಿದ್ದಾರೆ.

''ಹೊಸಪೇಟೆಯಲ್ಲಿ ಅನ್ನಪೂರ್ಣೇಶ್ವರಿ ವಿದ್ಯಾಪೀಠ ಪ್ರೌಢ ಶಾಲೆ ಇದೆ. ಆರ್ಥಿಕವಾಗಿ ಅಥವಾ ಮಕ್ಕಳು ಓದಿಸಲು ಕಷ್ಟ ಆಗ್ತಿದೆ ಎಂಬ ಕುಟುಂಬದ ಮಕ್ಕಳನ್ನು ವಿಶೇಷವಾಗಿ 8, 9, 10ನೇ ತರಗತಿ ಮಕ್ಕಳನ್ನು ಈ ಶಾಲೆಗೆ ಕರೆದುಕೊಂಡು ಸೇರಿಸಿ, ಆ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ಈ ಸಂಸ್ಥೆಯದ್ದು. ತುಂಬಾ ದೊಡ್ಡ ನಾಗಸಾಧುಗಳೊಬ್ಬರು ಈ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈ ಸಂಸ್ಥೆಯ ಜೊತೆ ನಾನು ಇದ್ದೇನೆ'' ಎಂದು ಮನವಿ ಮಾಡಿದ್ದಾರೆ.

''ಪ್ರತಿ ವರ್ಷದಂತೆ ಕೇಟ್ ಮಾಡಿಸುವುದು, ಬ್ಯಾನರ್ ಹಾಕುವುದು, ಕಟೌಟ್ ನಿಲ್ಲಿಸುವುದು ಬೇಡ. ಅದೇ ದುಡ್ಡಿನಲ್ಲಿ ನಿಮ್ಮ ಅಕ್ಕ-ಪಕ್ಕದಲ್ಲಿರುವ ಹಿರಿಯರಿಗೆ ಅಥವಾ ಇನ್ಯಾರಿಗೋ ಬೆಡ್‌ಶೀಟ್ ಕೊಡಿಸಿ, ಇದು ಚಳಿಗಾಲ'' ಎಂದು ದುನಿಯಾ ವಿಜಯ್ ತಮ್ಮ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

More from Filmibeat

English summary
Kannada actor Duniya Vijay requested his fans not to come to near home to celebrate birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X