For Quick Alerts
  ALLOW NOTIFICATIONS  
  For Daily Alerts

  ಒಟಿಟಿಗೆ ನೋ ಎಂದ ದುನಿಯಾ ವಿಜಿ, ಸಲಗ ರಿಲೀಸ್ ಬಗ್ಗೆ ಕೊಟ್ರು ಬ್ರೇಕಿಂಗ್

  |

  ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ ಸಲಗ. ಕೆಪಿ ಶ್ರೀಕಾಂತ್ ನಿರ್ಮಾಣದಲ್ಲಿ ದುನಿಯಾ ವಿಜಯ್, ಧನಂಜಯ್, ಸಂಜನಾ ಆನಂದ್ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಲಗ ರಿಲೀಸ್‌ಗೆ ರೆಡಿಯಾಗಿದೆ.

  ದುನಿಯಾ ವಿಜಯ್ ಕೆಲಸಕ್ಕೆ ಬೇಕಾಗಿದೆ ಸಪೋರ್ಟ್ | Filmibeat Kannada

  ಕೊರೊನಾ ನಿಯಮ, 50 ಪರ್ಸೆಂಟ್ ಆಸನ ಭರ್ತಿಗೆ ಮಾತ್ರ ಅವಕಾಶ, ಜನರು ಥಿಯೇಟರ್‌ಗೆ ಬರ್ತಾರೋ ಇಲ್ವೋ ಎಂಬ ಗೊಂದಲಗಳಿಂದ ಸಲಗ ಸಿನಿಮಾದ ಬಿಡುಗಡೆ ವಿಳಂಬವಾಗುತ್ತಿದೆ. ಈಗ ಒಂದೊಂದೆ ಚಿತ್ರಗಳು ತೆರೆಗೆ ಬರಲು ದಿನಾಂಕ ಲಾಕ್ ಮಾಡುತ್ತಿದೆ. ಈ ನಡುವೆ ಸಲಗ ಸಿನಿಮಾ ಚಿತ್ರಮಂದಿರಕ್ಕೆ ಬರುವುದು ಅನುಮಾನ, ಒಟಿಟಿಗೆ ಹೋಗಬಹುದು ಎಂಬ ಅನುಮಾನವೂ ವ್ಯಕ್ತವಾಗಿತ್ತು. ಇದಕ್ಕೆಲ್ಲ ಸ್ಪಷ್ಟನೆ ನೀಡಿರುವ ದುನಿಯಾ ವಿಜಯ್, ಸಲಗ ರಿಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದೆ ಓದಿ...

  ಒಟಿಟಿಗೆ ನೋ ಎಂದ ಸಲಗ

  ಒಟಿಟಿಗೆ ನೋ ಎಂದ ಸಲಗ

  ಸಲಗ ಸಿನಿಮಾ ಯಾವುದೇ ಕಾರಣಕ್ಕೂ ಒಟಿಟಿಯಲ್ಲಿ ಬಿಡುಗಡೆಯಾಗಲ್ಲ ಎಂದು ನಟ-ನಿರ್ದೇಶಕ ದುನಿಯಾ ವಿಜಯ್ ಸ್ಪಷ್ಟನೆ ನೀಡಿದ್ದಾರೆ. ''ನಾನು ನಿರ್ದೇಶನ ಮಾಡಿರುವ ಚೊಚ್ಚಲ ಸಿನಿಮಾ, ಜನರನ್ನು ಅದನ್ನು ಚಿತ್ರಮಂದಿರದಲ್ಲಿಯೇ ಕುಳಿತು ನೋಡಬೇಕು. ಒಟಿಟಿಗೆ ನಾವು ಬರಲ್ಲ'' ಎಂದು ಫೇಸ್‌ಬುಕ್‌ ಲೈವ್‌ನಲ್ಲಿ ಖಚಿತಪಡಿಸಿದ್ದಾರೆ.

  ಸಂಕ್ರಾಂತಿ ಹಬ್ಬಕ್ಕೆ ದುನಿಯಾ ವಿಜಯ್ ಫೇಸ್‌ಬುಕ್ ಲೈವ್, ಕಾರಣವೇನು?ಸಂಕ್ರಾಂತಿ ಹಬ್ಬಕ್ಕೆ ದುನಿಯಾ ವಿಜಯ್ ಫೇಸ್‌ಬುಕ್ ಲೈವ್, ಕಾರಣವೇನು?

  ಸಲಗ ರಿಲೀಸ್ ಯಾವಾಗ?

  ಸಲಗ ರಿಲೀಸ್ ಯಾವಾಗ?

  ''ಸಲಗ' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಎಲ್ಲ ಅಂದುಕೊಂಡಂತೆ ಆದರೆ ಈ ತಿಂಗಳ ಅಂತ್ಯಕ್ಕೆ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಸಲಗ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡುತ್ತೇವೆ'' ಎಂದು ವಿಜಿ ಮಾಹಿತಿ ನೀಡಿದ್ದಾರೆ.

  ಎಲ್ಲರೂ ಹೊಂದಾಣಿಕೆಯಿಂದ ಹೋದ್ರೆ ಚೆನ್ನಾಗಿರುತ್ತೆ

  ಎಲ್ಲರೂ ಹೊಂದಾಣಿಕೆಯಿಂದ ಹೋದ್ರೆ ಚೆನ್ನಾಗಿರುತ್ತೆ

  ''ನಮ್ಮ ನಿರ್ಮಾಪಕರು ಸಲಗ ಬಿಡುಗಡೆ ಬಗ್ಗೆ ಎಲ್ಲ ಕಡೆಯಲ್ಲೂ ಚರ್ಚೆಯಲ್ಲಿದ್ದಾರೆ. ಪ್ರದರ್ಶಕರು, ವಿತರಕರು, ನಿರ್ಮಾಪಕರು ಹೊಂದಾಣಿಕೆ ಮಾಡಿಕೊಂಡು ಹೋದರೆ ಎಲ್ಲ ಚಿತ್ರಗಳು ಬೇಗ ರಿಲೀಸ್ ಆಗಬಹುದು. ಸುಮಾರು ಚಿತ್ರಗಳು ಸಿದ್ಧವಾಗಿದೆ'' ಎಂದು ದುನಿಯಾ ವಿಜಯ್, ನಿರ್ಮಾಪಕರ ಹಾಗೂ ಪ್ರದರ್ಶಕರ ನಡುವಿನ ಮನಸ್ತಾಪದ ಬಗ್ಗೆ ಮಾತನಾಡಿದರು.

  ಚಿತ್ರರಂಗದಲ್ಲಿ ಇದೇ ಮೊದಲು: 'ಸಲಗ' ಶಾಸನ ರಚಿಸಿದ ವಿಜಿ ಅಭಿಮಾನಿಚಿತ್ರರಂಗದಲ್ಲಿ ಇದೇ ಮೊದಲು: 'ಸಲಗ' ಶಾಸನ ರಚಿಸಿದ ವಿಜಿ ಅಭಿಮಾನಿ

  ಹುಟ್ಟುಹಬ್ಬಕ್ಕೆ ಸಲಗ ಹಾಡು

  ಹುಟ್ಟುಹಬ್ಬಕ್ಕೆ ಸಲಗ ಹಾಡು

  ಜನವರಿ 20ರಂದು ದುನಿಯಾ ವಿಜಯ್ ಅವರ ಹುಟ್ಟುಹಬ್ಬವಿದೆ. ಈ ವಿಶೇಷವಾಗಿ ಸಲಗ ಚಿತ್ರದ ಟೈಟಲ್ ಹಾಡು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಬಹುಶಃ ವಿಜಿ ಅವರ ಜನುಮದಿನದಂದು ಬೆಳಗ್ಗೆ A2 ಮ್ಯೂಸಿಕ್ ಯ್ಯೂಟ್ಯೂಬ್ ವಾಹಿನಿಯಲ್ಲಿ ಸಲಗ ಟೈಟಲ್ ಹಾಡು ತೆರೆಕಾಣಲಿದೆ.

  English summary
  Kannada actor Duniya Vijay reveals about Salaga movie release date. and he confirms salaga will hit screens on theaters only.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X