'ಫಿಲ್ಮಿಬೀಟ್ ಕನ್ನಡ'ಗೆ ದುನಿಯಾ ವಿಜಯ್ ನೀಡಿದ ಬ್ರೇಕಿಂಗ್ ನ್ಯೂಸ್.!

By Harshitha

ಗಾಂಧಿನಗರದಲ್ಲೀಗ ಎಲ್ಲೆಲ್ಲೂ ದುನಿಯಾ ವಿಜಯ್ ಅಭಿನಯದ 'RX ಸೂರಿ'ಯದ್ದೇ ಸೌಂಡು. ಕಳೆದ ಶುಕ್ರವಾರವಷ್ಟೇ ರಿಲೀಸ್ ಆದ 'RX ಸೂರಿ' ಚಿತ್ರವನ್ನ ಯುವಕರು, ಅದ್ರಲ್ಲೂ ಯುವ ಪ್ರೇಮಿಗಳು ಹೆಚ್ಚಾಗಿ ಮೆಚ್ಚಿಕೊಂಡಿದ್ದಾರೆ.

ಪ್ರೇಕ್ಷಕರಿಗೆ ರುಚಿಸಿರುವ 'RX ಸೂರಿ' ಸಿನಿಮಾ ಆಂಧ್ರ ನೆಲದ ಪರಿಟಾಲ ರವಿ-ಸೂರಿ ನಡುವಿನ ರಕ್ತಸಿಕ್ತ ಕಥೆ ಅಂತಲೇ ಈ ಹಿಂದೆ ಜಗಜ್ಜಾಹೀರಾಗಿತ್ತು. ಬಹುಶಃ ಸಿನಿಮಾದ ಶೀರ್ಷಿಕೆಯಲ್ಲಿ 'ಸೂರಿ' ಅಂತ ಹೆಸರಿದ್ದ ಮಾತ್ರಕ್ಕೆ ಹಿಂದು-ಮುಂದು ನೋಡದೆ ಅನೇಕರು ಪರಿಟಾಲ ಸೂರಿಗೆ ಸಿನಿಮಾನ ಲಿಂಕ್ ಮಾಡಿದ್ರು. ['RX ಸೂರಿ' ಚಿತ್ರ ನೋಡಿ ಸೀಟಿ ಹೊಡೆದ ಶಿವಣ್ಣ]

Duniya Vijay reveals exclusive details on Kannada Film 'RX Soori'

ಆದ್ರೆ, ಚಿತ್ರತಂಡ ಮಾತ್ರ ಇದು 'ರಿಯಲ್' ಸ್ಟೋರಿ ಅಂತ ಹೇಳಿತ್ತೇ ಹೊರತು, ಪರಿಟಾಲ ರವಿ-ಸೂರಿ ಕಥೆ ಅಂತ ಎಲ್ಲೂ ಹೇಳಿರಲಿಲ್ಲ. 'RX ಸೂರಿ' ಫಸ್ಟ್ ಡೇ ಫಸ್ಟ್ ಶೋ ನೋಡಿದವರಿಗೂ ಇದು ಪರಿಟಾಲ ರವಿ-ಸೂರಿಯ ಕಥೆ ಅಲ್ಲ ಅನ್ನೋದು ಖಾತ್ರಿ ಆಯ್ತು. [ಆರ್ ಎಕ್ಸ್ ಸೂರಿ : ರಕ್ತಸಿಕ್ತ ಬೊಂಬಾಟ್ ಲವ್ ಸ್ಟೋರಿ]

ಹಾಗಾದ್ರೆ, 'RX ಸೂರಿ', 'ರಿಯಲ್' ಸ್ಟೋರಿ ಅಂತ ಚಿತ್ರತಂಡ ಹೇಳಿದ್ದು ಯಾಕೆ? ಯಾವ ರೌಡಿಯ ಪ್ರೇಮ ಕಹಾನಿಯನ್ನ 'RX ಸೂರಿ' ಚಿತ್ರತಂಡ ತೆರೆ ಮೇಲೆ ತೋರಿಸಿದೆ? ಈ ಪ್ರಶ್ನೆಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಕಾಡಿದ ಪರಿಣಾಮ, ಡೌಟ್ ಕ್ಲಿಯರ್ ಮಾಡಿಕೊಳ್ಳೋಣ ಅಂತ ಸೀದಾ 'ಬ್ಲಾಕ್ ಕೋಬ್ರಾ' ದುನಿಯಾ ವಿಜಯ್ ಅವರಿಗೆ ಫೋನ್ ಮಾಡಿದ್ವಿ.

Duniya Vijay reveals exclusive details on Kannada Film 'RX Soori'

ಆಗಲೇ ಇಲ್ಲಿಯವರೆಗೂ ಬಚ್ಚಿಟ್ಟಿದ್ದ ರಹಸ್ಯವನ್ನ 'ಫಿಲ್ಮಿಬೀಟ್ ಕನ್ನಡ'ಗೆ ದುನಿಯಾ ವಿಜಯ್ ಬಿಟ್ಟುಕೊಟ್ಟಿದ್ದು. 'ಫಿಲ್ಮಿಬೀಟ್ ಕನ್ನಡ'ಗೆ ನಟ ದುನಿಯಾ ವಿಜಯ್ ಮತ್ತು ನಿರ್ದೇಶಕ ಶ್ರೀ ಜೈ 'RX ಸೂರಿ' ಚಿತ್ರದ ಬಗ್ಗೆ ಎಕ್ಸ್ ಕ್ಲೂಸಿವ್ ಸಂದರ್ಶನ ನೀಡಿದ್ದಾರೆ. [ದುನಿಯಾ ವಿಜಯ್ 'RX ಸೂರಿ' ಚಿತ್ರದ ಬಗ್ಗೆ ವಿಮರ್ಶಕರು ಏನಂದ್ರು?]

ಅದರಲ್ಲಿ ನಿಜವಾದ 'ಸೂರಿ' ಯಾರು? ಸೂರಿಯನ್ನ ಪ್ರೀತಿ ಮಾಡಿ ಪ್ರಾಣವನ್ನೇ ಕಳೆದುಕೊಂಡ 'ರಿಯಲ್ ಮೀರಾ' ಎಲ್ಲಿಯವರು ಅನ್ನುವ ಮಾಹಿತಿಯನ್ನ ದುನಿಯಾ ವಿಜಯ್ ಮತ್ತು ಶ್ರೀ ಜೈ ಹೊರ ಹಾಕಿದ್ದಾರೆ.

ರಿಯಲ್ ಸೂರಿ ಮತ್ತು ಮೀರಾ ಬದುಕಿನ ರೋಚಕ ಸಂಗತಿಗಳನ್ನ ದುನಿಯಾ ವಿಜಯ್ ಮತ್ತು ನಿರ್ದೇಶಕ ಶ್ರೀ ಜೈ ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಅದನ್ನೆಲ್ಲಾ ನಾಳೆ ನಿಮಗೆ ತೋರಿಸ್ತೀವಿ. ದುನಿಯಾ ವಿಜಯ್ ನಮಗೆ ನೀಡಿರುವ ಎಕ್ಸ್ ಕ್ಲೂಸಿವ್ ಇಂಟರ್ವ್ಯೂ ನ ಕಣ್ಣಾರೆ ನೋಡುವುದಕ್ಕೆ ನಾಳೆ ಬೆಳಗ್ಗೆವರೆಗೂ ಸ್ವಲ್ಪ ವೇಯ್ಟ್ ಮಾಡಿ....

More from Filmibeat

English summary
Kannada Actor Duniya Vijay has shared few exclusive details about his film 'RX Soori'. Shri Jai directorial 'RX Soori' is based on a real inciden. Duniya Vijay and Shri Jai has revealed the real characters of the film 'RX Soori' to Filmibeat Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X