»   » ದುನಿಯಾ ವಿಜಿ ಹುಟ್ಟುಹಬ್ಬದ ದಿನ ಇದೆಂಥ ಅಪಶಕುನ?

ದುನಿಯಾ ವಿಜಿ ಹುಟ್ಟುಹಬ್ಬದ ದಿನ ಇದೆಂಥ ಅಪಶಕುನ?

Posted By:
Subscribe to Filmibeat Kannada

ಆಕ್ಷನ್ 'ಜಾಕ್ಸನ್' ದುನಿಯಾ ವಿಜಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಿನ್ನೆ ಮಧ್ಯರಾತ್ರಿಯಿಂದಲೂ ಅಭಿಮಾನಿಗಳು 'ಕರಿಚಿರತೆ' ಜನ್ಮದಿನವನ್ನ ಅದ್ದೂರಿಯಾಗಿ ಆಚರಿಸ್ತಾಯಿದ್ದಾರೆ.

ಇದೇ ಸಡಗರದ ನಡುವೆ 'ಜಾಕ್ಸನ್' ರಿಲೀಸ್ ಆಗಿದ್ದ ನರ್ತಕಿ ಚಿತ್ರಮಂದಿರದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಹುಟ್ಟುಹಬ್ಬದ ಪ್ರಯುಕ್ತ ಹಾಲಿನ ಅಭಿಷೇಕ ಕಾಣ್ಬೇಕಿದ್ದ ದುನಿಯಾ ವಿಜಿ ಕಟೌಟ್ ಸುಟ್ಟು ಕರಕಲಾಗಿದೆ. [ದುನಿಯಾ ವಿಜಿ ಹುಟ್ಟುಹಬ್ಬದ ಉಡುಗೊರೆ: RX ಸೂರಿ ಟೀಸರ್]


ಬೃಹತ್ ಹೂವಿನ ಹಾರಗಳಿಂದ ಅಲಂಕೃತವಾಗಿದ್ದ ದುನಿಯಾ ವಿಜಿ ಕಟೌಟ್ ಅಗ್ನಿಗೆ ಆಹುತಿಯಾಗಿ ಧಗಧಗಿಸಿ ಉರಿದಿದೆ. ಹುಟ್ಟುಹಬ್ಬದ ದಿನ ಸಂಭ್ರಮ ಪಡಬೇಕಿದ್ದ 'ಬ್ಲಾಕ್ ಕೋಬ್ರಾ'ಗೆ ಅಪಶಕುನ ಎದುರಾಗಿದೆ. ಅಸಲಿಗೆ ನರ್ತಕಿ ಚಿತ್ರಮಂದಿರದಲ್ಲಿ ಆಗಿದ್ದೇನು..? ಮುಂದೆ ಓದಿ.....


ನರ್ತಕಿ ಚಿತ್ರಮಂದಿರದಲ್ಲಿ ಆಗಿದ್ದೇನು?

ಮಧ್ಯರಾತ್ರಿ ಸ್ಮಶಾನದಲ್ಲಿ ಬರ್ತಡೆಯನ್ನ ಸೆಲೆಬ್ರೇಟ್ ಮಾಡಿಕೊಂಡಿದ್ದ ದುನಿಯಾ ವಿಜಿ, ಬೆಳ್ಳಗ್ಗೆ ಮನೆಯಲ್ಲಿ ಕುಟುಂಬ ಮತ್ತು ಅಭಿಮಾನಿಗಳೊಂದಿಗೆ ಕೆಲಕಾಲ ಸಂಭ್ರಮ ಪಟ್ಟು, ಮಧ್ಯಾಹ್ನ 12.30 ರ ಸುಮಾರಿಗೆ ಬೆಂಗಳೂರಿನ ನರ್ತಕಿ ಚಿತ್ರಮಂದಿರಕ್ಕೆ ಭೇಟಿ ಕೊಟ್ಟರು. ಕಳೆದ ವಾರವಷ್ಟೆ ದುನಿಯಾ ವಿಜಿ ಅಭಿನಯದ 'ಜಾಕ್ಸನ್' ಚಿತ್ರ ನರ್ತಕಿ ಚಿತ್ರಮಂದಿರದಲ್ಲಿ ತೆರೆಕಂಡಿತ್ತು. 'ಜಾಕ್ಸನ್' ಜನಮೆಚ್ಚುಗೆ ಗಳಿಸಿ ಸಕ್ಸಸ್ ಆಗಿರುವುದರಿಂದ 'ಜಾಕ್ಸನ್' ಚಿತ್ರತಂಡ, ನರ್ತಕಿ ಚಿತ್ರಮಂದಿರದಲ್ಲಿ ಸಣ್ಣ ಕಾರ್ಯಕ್ರಮ ಏರ್ಪಡಿಸಿತ್ತು.


'ಚಿನ್ನದ ಕಿರೀಟ' ಕೊಡುವ ಜಾಗದಲ್ಲಿ ಬೆಂಕಿ ಬಿತ್ತು!

'ಜಾಕ್ಸನ್' ಚಿತ್ರಕ್ಕೆ 'ಒಂದು ರೂಪಾಯಿ' ಸಂಭಾವನೆ ಪಡೆದು ಫ್ರೀ ಕಾಲ್ ಶೀಟ್ ಪಡೆದಿದ್ದ ದುನಿಯಾ ವಿಜಿಗೆ, ಚಿತ್ರತಂಡ ಹುಟ್ಟುಹಬ್ಬದ ಪ್ರಯುಕ್ತ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ 'ಚಿನ್ನದ ಕಿರೀಟ'ವನ್ನ ಉಡುಗೊರೆಯಾಗಿ ನೀಡುವ ಆಲೋಚನೆ ಹೊಂದಿತ್ತು. ದುನಿಯಾ ವಿಜಿ ಚಿತ್ರಮಂದಿರಕ್ಕೆ ಭೇಟಿ ಕೊಡುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.


ಇದ್ದಿಕ್ಕಿದ್ದಂತೆ ಹೊತ್ತಿಕೊಂಡ ಬೆಂಕಿ

ದುನಿಯಾ ವಿಜಿಯನ್ನ ನೋಡಿದ ಸಂಭ್ರಮದಲ್ಲಿ ಪಟಾಕಿ ಸಿಡಿಸುವುದಕ್ಕೆ ಶುರುಮಾಡಿದ ಅಭಿಮಾನಿಗಳು ಸರಪಟಾಕಿಯನ್ನ ಹಚ್ಚಿದರು. ಪಟಾಕಿಯ ಕಿಡಿ, ಪಕ್ಕದಲ್ಲೇ ಇದ್ದ ಬೃಹತ್ ಕಟೌಟ್ ಗೆ ಅಂಟಿಕೊಳ್ತು. ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಅರ್ಧ ಕಟೌಟ್, ಬೆಂಕಿಗೆ ಆಹುತಿಯಾಗಿತ್ತು.


ಎಚ್ಚೆತ್ತ ಅಭಿಮಾನಿಗಳು

ಅಭಿಮಾನದ ಪರಾಕಾಷ್ಟೆಯಲ್ಲಿ ಮೈಮರೆಯದೆ ಎಚ್ಚೆತ್ತ ಅಭಿಮಾನಿಗಳು ಬೆಂಕಿ ನಂದಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಚಿತ್ರಮಂದಿರದ ಸಿಬ್ಬಂದಿ ಕೂಡ ಕೈಜೋಡಿಸಿ, ಬೆಂಕಿಯನ್ನ ನಂದಿಸಿದರು.


ಚಿತ್ರಮಂದಿರದಲ್ಲಿ ಬಿಗುವಿನ ವಾತಾವರಣ

ಬೆಂಕಿ ಹೊತ್ತಿಕೊಂಡ ಪರಿಣಾಮ ನರ್ತಕಿ ಹಾಗು ಸಂತೋಷ್ ಚಿತ್ರಮಂದಿರದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯ್ತು. ಆದ್ರೆ, ಚಿತ್ರ ಪ್ರದರ್ಶನದಲ್ಲಿ ಯಾವುದೇ ಅಡ್ಡಿಯುಂಟಾಗಲಿಲ್ಲ. [ದುನಿಯಾ ವಿಜಿ ಅಭಿನಯದ ಟಾಪ್ 5 ಚಿತ್ರಗಳು]


ಚಿನ್ನದ ಕಿರೀಟ ಧರಿಸಿದ 'ದುನಿಯಾ ವಿಜಿ'

ಪರಿಸ್ಥಿತಿ ತಿಳಿಗೊಳ್ಳುತ್ತಿದ್ದಂತೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ 'ಜಾಕ್ಸನ್' ಚಿತ್ರತಂಡ, ದುನಿಯಾ ವಿಜಿಗೆ 'ಚಿನ್ನದ ಕಿರೀಟ'ವನ್ನ ಉಡುಗೊರೆಯಾಗಿ ನೀಡಿತು. ಶಿಳ್ಳೆ-ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕಿದ್ದ ಸಮಾರಂಭ, ಆದ ಅವಘಡದಿಂದ ಮಂಕಾಗಿ ಸಾಗಿತು. [ಕಿಚ್ಚ ಸುದೀಪ್ ಬೆಳ್ಳಿ ಕಿರೀಟ ನಿರಾಕರಿಸಿದ್ದು ಯಾಕೆ?]


English summary
Kannada Actor Duniya Vijay's Cut-out catches fire at Narthaki theatre in Bengaluru. As a part of Birthday Celebration, team 'Jackson' had arranged an event for Vijay in Narthaki Theatre. Amidst fan fare and bursting crackers Narthaki Theatre witnessed a Fire Mishap.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada