'ನಾನು ಹಲ್ಲೆ ಮಾಡಿಲ್ಲ, ಕಿಟ್ಟಿ ಮೇಲೆ ದ್ವೇಷ ಇಲ್ಲ' ಎಂದ ದುನಿಯಾ ವಿಜಯ್
ಎಂಟು ದಿನಗಳ ಕಾಲ ಜೈಲು ವಾಸ ಅನುಭವಿಸಿದ ನಟ ದುನಿಯಾ ವಿಜಯ್ ಇಂದು ಸಂಜೆ ಬಿಡುಗಡೆಯಾದರು. ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಮಂಜೂರು ಆದ್ಮೇಲೆ, ಪರಪ್ಪನ ಅಗ್ರಹಾರ ಜೈಲಿನಿಂದ ದುನಿಯಾ ವಿಜಯ್ ಹೊರಬಂದರು.
ಜಿಮ್ ಟ್ರೈನರ್ ಮಾರುತಿ ಗೌಡ ಮೇಲೆ ಹಲ್ಲೆ, ಅಪಹರಣ ಪ್ರಕರಣದಲ್ಲಿ ದುನಿಯಾ ವಿಜಯ್, ಡ್ರೈವರ್ ಪ್ರಸಾದ್, ಟ್ರೈನರ್ ಪ್ರಸಾದ್ ಹಾಗೂ ಮಣಿ ನ್ಯಾಯಾಂಗ ಬಂಧನದಲ್ಲಿದ್ದರು. ಒಂದು ಲಕ್ಷ ರೂಪಾಯಿ ಹಾಗೂ ಶ್ಯೂರಿಟಿ ಆಧಾರದ ಮೇರೆಗೆ ದುನಿಯಾ ವಿಜಯ್ ಹಾಗೂ ಸಂಗಡಿಗರಿಗೆ ಇಂದು ಸೆಷನ್ಸ್ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತು.
ಜೈಲಿನಿಂದ ಹೊರಗೆ ಬಂದ ಮೇಲೆ, ''ನಾನು ಹಲ್ಲೆ ನಡೆಸಿಲ್ಲ. ಜಾಮೀನು ಕೊಟ್ಟ ನ್ಯಾಯಾಧೀಶರಿಗೆ ನಾನು ಚಿರಋಣಿ. ಪಾನಿಪೂರಿ ಕಿಟ್ಟಿ ಮೇಲೆ ನನಗೆ ದ್ವೇಷ ಇಲ್ಲ'' ಎಂದು ಮಾಧ್ಯಮಗಳ ಮುಂದೆ ದುನಿಯಾ ವಿಜಯ್ ಹೇಳಿದರು.
ಜೈಲಿನಿಂದ ಹೊರಗೆ ಬಂದ್ಮೇಲೆ, ದುನಿಯಾ ವಿಜಯ್ ಕೊಟ್ಟ ಪ್ರತಿಕ್ರಿಯೆ ಏನು.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಚಿರಋಣಿ ಆಗಿರುವೆ
''ಎಲ್ಲವೂ ಕಾನೂನು ಚೌಕಟ್ಟಿನಲ್ಲಿದೆ. ನನಗೆ ಕೆಲವು ನಿರ್ಬಂಧನೆಗಳನ್ನು ಹಾಕಿದ್ದಾರೆ. ನನಗೆ ಜಾಮೀನು ಕೊಟ್ಟ ನ್ಯಾಯಾಧೀಶರಿಗೆ ನಾನು ಚಿರಋಣಿ ಆಗಿರುತ್ತೇನೆ. ಕಾಣದ ಕೈಗಳು ತುಂಬಾ ಆಟವಾಡುತ್ತಿವೆ. ಕಷ್ಟದಿಂದ ಬಂದ ಮೇಲೆ ಕಾಣದ ಕೈಗಳು ಆಟ ಆಡಬೇಕು'' ಎಂದರು ದುನಿಯಾ ವಿಜಯ್.

ಹಿಂಸೆ ಆಗುತ್ತಿದೆ
''ನನಗೆ ಕಾನೂನಿನ ಮೇಲೆ ತುಂಬಾ ಗೌರವ ಇದೆ. ಜಾಮೀನು ಕೊಟ್ಟ ನ್ಯಾಯಾಧೀಶರು ನನ್ನ ಪಾಲಿನ ದೇವರು. ಅವರ ಪಾದಕ್ಕೆ ನಾನು ಬಿದ್ದು ಎಲ್ಲಾ ವಿಷಯವನ್ನು ಬಿಚ್ಚಿಡುತ್ತೇನೆ. ಯಾಕಂದ್ರೆ, ನನ್ನ ಮೇಲೆ ಪದೇ ಪದೇ ಆರೋಪ ಕೇಳಿಬರುತ್ತಿದೆ. ನನಗೆ ಹಿಂಸೆ ಆಗುತ್ತಿದೆ'' - ದುನಿಯಾ ವಿಜಯ್

ಕಿಟ್ಟಿ ಮೇಲೆ ದ್ವೇಷ ಇಲ್ಲ
''ಪಾನಿಪೂರಿ ಕಿಟ್ಟಿ ಮೇಲೆ ನನಗೆ ದ್ವೇಷ ಇಲ್ಲ. ನಾವಿಬ್ಬರು ಗೆಳೆಯರು. ನಾನು ಖಂಡಿತವಾಗಿಯೂ ಹಲ್ಲೆ ಮಾಡಿಲ್ಲ. ಇದು ಕಾಣದ ಕೈಗಳ ಕೈವಾಡ. ಕಾಲ ಬಂದಾಗ ಎಲ್ಲವನ್ನೂ ಬಿಚ್ಚಿಡುತ್ತೇನೆ. ಕೋಪದಲ್ಲಿ ಕಿಟ್ಟಿ ನನ್ನನ್ನ ಬೈದಿರಬಹುದು. ಆದ್ರೆ, ನನಗೆ ಬೇಜಾರು ಇಲ್ಲ. ಹಿಂದೆ ಬೇರೆಯೇ ಕಥೆ ಇದೆ. ಎಲ್ಲವನ್ನೂ ಬಿಚ್ಚಿಡುವೆ'' - ದುನಿಯಾ ವಿಜಯ್

ನಾನು ಕೆಟ್ಟವನಲ್ಲ
''ನಾನು ಯಾರ ತಂಟೆಗೂ ಹೋದವನು ಅಲ್ಲ. ನಾನು ಕೆಟ್ಟವನು ಅಲ್ಲ. ನಾನು ರೌಡಿ ಅಲ್ಲ. ನಾನು ಯಾರ ಮೇಲೂ ಹೊಡೆಯಲು ಹೋಗಿಲ್ಲ. ನಾಲ್ಕು ಜನಕ್ಕೆ ಸಹಾಯ ಮಾಡುತ್ತೇನೆ ಹೊರತು ಯಾರಿಗೂ ತೊಂದರೆ ಕೊಟ್ಟಿಲ್ಲ. ಕಿಟ್ಟಿ ಮೇಲೆ ನನಗೆ ದ್ವೇಷ ಇಲ್ಲ. ಫ್ರೆಂಡ್ ಶಿಪ್ ಮಧ್ಯೆ ನಡೆದಿರುವ ಮಿಸ್ ಅಂಡರ್ ಸ್ಟಾಂಡಿಂಗ್ ಇದು'' - ದುನಿಯಾ ವಿಜಯ್

ಕೀರ್ತಿ ಬಗ್ಗೆ ವಿಜಿ ಮಾತು
''ಕೀರ್ತಿ ಜೊತೆಗೆ ನಾನು ಸಾಯುವವರೆಗೂ ಜೊತೆಗೆ ಇರುತ್ತೇನೆ. ಕೀರ್ತಿ ನನ್ನ ಜೀವ. ನನ್ನ-ಅವಳನ್ನ ಯಾರಿಂದಲೂ ಬೇರೆ ಮಾಡಲು ಸಾಧ್ಯ ಇಲ್ಲ'' - ದುನಿಯಾ ವಿಜಯ್


Click it and Unblock the Notifications











