ಡಬ್ಬಿಂಗ್ ಆರಂಭಿಸಿದ ದುನಿಯಾ ವಿಜಯ್; 'ಲ್ಯಾಂಡ್ ಲಾರ್ಡ್' ರಿಲೀಸ್ ಯಾವಾಗ?

ಜಡೇಶ್ ಹಂಪಿ ನಿರ್ದೇಶನದಲ್ಲಿ ದುನಿಯಾ ವಿಜಯ್ ನಟನೆಯ 'ಲ್ಯಾಂಡ್ ಲಾರ್ಡ್' ಸಿನಿಮಾ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. 'ಸಿಟಿ ಲೈಟ್ಸ್' ಸಿನಿಮಾ ನಿರ್ದೇಶನದ ಜೊತೆ ಜೊತೆಗೆ ಈ ಚಿತ್ರದಲ್ಲಿ ವಿಜಯ್ ನಟಿಸಿದ್ದರು. 'ಜಂಟಲ್‌ಮನ್', 'ಗುರು-ಶಿಷ್ಯರು' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟ ಜಡೇಶ್ ಈ ಬಾರಿ ಮತ್ತೊಂದು ಹಿಟ್ ಮೇಲೆ ಕಣ್ಣಿಟ್ಟಿದ್ದಾರೆ.

ರೈತರ ಸಮಸ್ಯೆಗಳು, ವ್ಯವಸ್ಥೆ ಜೊತೆಗಿನ ಸಂಘರ್ಷದ ಕಥೆ 'ಲ್ಯಾಂಡ್‌ಲಾರ್ಡ್' ಚಿತ್ರದಲ್ಲಿದೆ. ಚಿತ್ರದಲ್ಲಿ ಕೂಲಿಕಾರನ ಪಾತ್ರದಲ್ಲಿ ವಿಜಯ್ ನಟಿಸಿದ್ದು ಪವರ್‌ಫುಲ್ ಪಾತ್ರ ಆಗಿರಲಿದೆ. ಜಡೇಶ್ ತಾವು ನೋಡಿದ ಕೇಳಿದ ಕಥೆಗಳನ್ನು ಸೇರಿಸಿ ಈ ಚಿತ್ರವನ್ನು ಕಟ್ಟಿಕೊಡುತ್ತಿದ್ದಾರೆ. 80-90ರ ದಶಕದ ಕಥೆ ಈ ಚಿತ್ರದಲ್ಲಿದೆ. ಕೋಲಾರದ ಭಾಗದಲ್ಲಿ ಕಥೆ ಸಾಗಲಿದ್ದು ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ನಾಯಕ ಜೀವನದ ಏಳುಬೀಳಿನ ಕಥೆ ಇಲ್ಲಿ ಇರಲಿದೆ.

Duniya Vijay s Landlord Enters Dubbing Stage Release Likely After October

ಬರೀ ಪೋಸ್ಟರ್‌ಗಳಿಂದಲೇ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಸದ್ಯ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಚಿತ್ರದಲ್ಲಿ ವಿಜಯ್ ಮಗಳು ರಿತನ್ಯಾ ಕೂಡ ನಟಿಸುತ್ತಿದ್ದಾರೆ. ಸದ್ಯ ತಂದೆ ಮಗಳು ಚಿತ್ರದ ಡಬ್ಬಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊವೊಂದು ವೈರಲ್ ಆಗುತ್ತಿದೆ. ಚಿತ್ರದಲ್ಲಿ ಕೂಡ ಇಬ್ಬರೂ ತಂದೆ, ಮಗಳಾಗಿಯೇ ನಟಿಸುತ್ತಿದ್ದಾರೆ. ರಿತನ್ಯಾ ಜೋಡಿಯಾಗಿ ನಟ ಶಿಶಿರ್‌ ಬೈಕಾಡಿ ಬಣ್ಣ ಹಚ್ಚಿದ್ದಾರೆ.

ಇನ್ನು 'ಲ್ಯಾಂಡ್‌ಲಾರ್ಡ್' ಚಿತ್ರದ ಟೈಟಲ್ ಜೊತೆಗೆ "ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ" ಎನ್ನುವ ಟ್ಯಾಗ್‌ಲೈನ್ ಕೂಡ ಇದೆ. ಚಿತ್ರಕ್ಕೆ ಮಾಸ್ತಿ ಹಾಗೂ ಶ್ರೀಕಾಂತ್ ಸಂಭಾಷಣೆ ಇದೆ. ಇತ್ತೀಚೆಗೆ 'ಕಾಟೇರ' ಹಾಗೂ 'ಎಕ್ಕ' ಸೇರಿ ಹಲವು ಸಿನಿಮಾಗಳಲ್ಲಿ ಮಾಸ್ತಿ ಡೈಲಾಗ್ಸ್ ಸದ್ದು ಮಾಡಿದೆ. ಈ ಚಿತ್ರದಲ್ಲಿ ಕೂಡ ಅದು ಮುಂದುವರೆಯಲಿದೆ. ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ 'ಲ್ಯಾಂಡ್‌ಲಾರ್ಡ್' ಚಿತ್ರಕ್ಕೆ ಟ್ಯೂನ್ ಹಾಕುತ್ತಿದ್ದಾರೆ.

Duniya Vijay s Landlord Enters Dubbing Stage Release Likely After October

ಸಾರಥಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕೆ. ವಿ ಸತ್ಯಪ್ರಕಾಶ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಈ ಹಿಂದೆ ಚಿತ್ರಕ್ಕೆ 'ರಾಚಯ್ಯ' ಎನ್ನುವ ಟೈಟಲ್ ಇಡಲು ಚಿತ್ರತಂಡ ಮನಸ್ಸು ಮಾಡಿತ್ತು. ಬಳಿಕ 'ಲ್ಯಾಂಡ್‌ಲಾರ್ಡ್' ಎನ್ನುವ ಟೈಟಲ್ ಸೂಕ್ತ ಎಂದು ಬದಲಾಯಿಸಿತು. ಚಿತ್ರದಲ್ಲಿ ನಾಯಕನ ಹೆಸರು ರಾಚಯ್ಯ ಎಂದೇ ಇರುವ ಸಾಧ್ಯತೆಯಿದೆ.

ರಚಿತಾ ರಾಮ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ನೆಲಮಂಗಲದ ಬಳಿ ಭಾರೀ ಸೆಟ್ ಹಾಕಿ ಚಿತ್ರದ ಪ್ರಮುಖ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ್‌ ಕುಮಾರ್‌, ಬಿ. ಸುರೇಶ್‌ ಕೂಡ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಹಿರಿಯ ನಟಿ ಉಮಾಶ್ರೀ ಕೂಡ ಒಂದು ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಸದ್ಯ ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಆರಂಭಿಸಿರುವ 'ಲ್ಯಾಂಡ್‌ಲಾರ್ಡ್' ತಂಡ ಸಿನಿಮಾ ಬಿಡುಗಡೆ ದಿನಾಂಕದ ಚರ್ಚೆಯಲ್ಲಿದೆ. ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ- 1' ಹಾಗೂ ದರ್ಶನ್ ನಟನೆಯ 'ಡೆವಿಲ್' ಸಿನಿಮಾಗಳ ಬಿಡುಗಡೆ ನೋಡಿಕೊಂಡು ತಮ್ಮ ಸಿನಿಮಾ ತೆರೆಗೆ ತರುವ ಲೆಕ್ಕಾಚಾರ ನಡೀತಿದೆಯಂತೆ.

ಅಕ್ಟೋಬರ್ 2ರಂದು 'ಕಾಂತಾರ-1' ತೆರೆಗೆ ಬರಲಿದೆ. ಅಕ್ಟೋಬರ್ ಕೊನೆಗೆ 'ಡೆವಿಲ್' ಸಿನಿಮಾ ಬಿಡುಗಡೆ ಆಗುವ ಸಾಧ್ಯತೆಯಿದೆ. ಹಾಗಾಗಿ ನವೆಂಬರ್‌ನಲ್ಲಿ 'ಲ್ಯಾಂಡ್‌ಲಾರ್ಡ್' ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಶೀಘ್ರದಲ್ಲೇ ಸಿನಿಮಾ ರಿಲೀಸ್ ಡೇಟ್ ಘೋಷಣೆ ಆಗಲಿದೆ.

More from Filmibeat

English summary
Duniya Vijay’s Landlord Nears Completion: Farmers’ Struggles, Father-Daughter Duo and a November Release on Cards
Read more about: vijay rachita ram sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X