75ರ ಮುದುಕನ ಪಾತ್ರದಲ್ಲಿ ದುನಿಯಾ ವಿಜಿ ಮಿಂಚಿಂಗು
ಇಷ್ಟು ದಿನ ನಿರ್ದೇಶಕ ಯೋಗರಾಜ್ ಭಟ್ ಮತ್ತು ನಟಿ ಪ್ರಿಯಾಮಣಿ ಅವರ ಜೊತೆ ಸೇರಿ ದನ ಕಾಯುತ್ತಿದ್ದ ನಟ ದುನಿಯಾ ವಿಜಯ್ ಈಗ ನಟ ಕಮ್ ನಿರ್ದೇಶಕ ನಾಗಶೇಖರ್ ಅವರ ಜೊತೆ 'ಮಾಸ್ತಿ ಗುಡಿ' ಎಂಬ ಕಾಡನ್ನು ಕಾಯಲು ಸಜ್ಜಾಗಿದ್ದಾರೆ. ಜನವರಿ 29ಕ್ಕೆ 'ಮಾಸ್ತಿ ಗುಡಿ'ಗೆ ಮುಹೂರ್ತ ನೆರವೇರಲಿದೆ.
ನಟ ವಿಜಯ್ ಅವರು ನಿಜ ಜೀವನಾಧರಿತ ಕಥೆಗಳಲ್ಲಿ ಮಿಂಚುತ್ತಿರೋದು ಇದೇನು ಹೊಸದಲ್ಲ. ಇದೀಗ 'ಮಾಸ್ತಿ ಗುಡಿ' ಸಿನಿಮಾ ಕೂಡ ರಿಯಲ್ ಕಥೆಯನ್ನು ಹೊಂದಿದ ಸಿನಿಮಾ ಆಗಿದ್ದು ಇಲ್ಲಿ ವಿಜಯ್ ಅವರು ಕಾಡು ಮತ್ತು ಕಾಡಿನ ಪ್ರಾಣಿಗಳನ್ನು ಉಳಿಸುವ ಪಾತ್ರದಲ್ಲಿ ಮಿಂಚಲಿದ್ದಾರೆ.['ಮಾಸ್ತಿ ಗುಡಿ' ದುನಿಯಾ ವಿಜಿ ರಿಯಲ್ ಕಹಾನಿನಾ?]
1990 ರಲ್ಲಿ ನಡೆದ ನೈಜ ಕಥೆಯಾಧರಿತ ಸಿನಿಮಾವೇ 'ಮಾಸ್ತಿ ಗುಡಿ'. ಆ ಕಾಲದಲ್ಲಿ ಬಿಳಿಗಿರಿ ರಂಗನತಿಟ್ಟು ಕಾಡಿನಲ್ಲಿ ಹುಲಿಗಳು ನಿರಂತರವಾಗಿ ಸಾವನ್ನಪ್ಪುತ್ತಿದ್ದವಂತೆ. ಅದರ ಹಿಂದಿರಬಹುದಾದ ರಹಸ್ಯ ಏನು? ಅಲ್ಲಿ ಏನು ನಡೆದಿರಬಹುದು ಎಂಬ ವಿಷಯಗಳನ್ನು ನಾಗಶೇಖರ್ ಈ ಚಿತ್ರದ ಮೂಲಕ ಹೇಳೋದಕ್ಕೆ ಹೊರಟಿದ್ದಾರೆ.
ಛಾಯಾಗ್ರಾಹಕ ಸತ್ಯ ಹೆಗಡೆ ಅವರು ಈ ಚಿತ್ರಕ್ಕೆ ಕ್ಯಾಮಾರ ಕೈ ಚಳಕ ತೋರಲಿದ್ದು, ವಿಜಿ ಅವರ 'ಜಾಕ್ಸನ್' ಸಿನಿಮಾ ನಿರ್ಮಿಸಿದ್ದ ಸುಂದರ್ ಪಿ.ಗೌಡ್ರು ಮತ್ತು ಅನಿಲ್ ಕುಮಾರ್ ಅವರು 'ಮಾಸ್ತಿ ಗುಡಿ'ಗೆ ಬಂಡವಾಳ ಹೂಡಲಿದ್ದಾರೆ.[ಚಿತ್ರಗಳು: ಭರ್ಜರಿಯಾಗಿ ದನ ಕಾಯುತ್ತಿರುವ ವಿಜಿ ಮತ್ತು ಪ್ರಿಯಾಮಣಿ..!]
ಈಗಾಗಲೇ ದುನಿಯಾ ವಿಜಿ ಸೇರಿದಂತೆ ಇಡೀ ಚಿತ್ರತಂಡ ಲೊಕೇಶನ್ ಗಾಗಿ ಪರ್ಯಟನೆ ಶುರು ಮಾಡಿದೆ. ಚಿತ್ರತಂಡದ ಪರ್ಯಟನೆಯ ಸ್ಟಿಲ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

75 ವರ್ಷದ ಮುದುಕನಾಗಿ ವಿಜಯ್
ನಟ ದುನಿಯಾ ವಿಜಯ್ ಅವರು 25 ವರ್ಷದ ಹುಡುಗನಾಗಿ, 35 ವರ್ಷದ ಯುವಕನಾಗಿ ಮತ್ತು 75 ವರ್ಷದ ಮುದುಕನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರಕ್ಕೆ ಫೊಟೋ ಶೂಟ್ ಕೂಡ ನಡೆದಿದೆ.[ವೀಕೆಂಡ್ ನಲ್ಲಿ ದುನಿಯಾ ವಿಜಯ್ ಕಣ್ಣೀರ ಕಥೆ ಅನಾವರಣ]

ಇಬ್ಬರು ನಾಯಕಿಯರು
ನಾಗಶೇಖರ್ ನಿರ್ದೇಶನದ 'ಮಾಸ್ತಿ ಗುಡಿ' ಚಿತ್ರಕ್ಕೆ ಇಬ್ಬರು ನಾಯಕಿಯರಿದ್ದಾರೆ. ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಜನವರಿ 29ಕ್ಕೆ ಚಿತ್ರ ಸೆಟ್ಟೇರಲಿದೆ.

ಸಾಧು ಅವರದು ಐದು ಹಾಡುಗಳು
ದುನಿಯಾ ವಿಜಿ ಮತ್ತು ನಾಗಶೇಖರ್ ಕಾಂಬಿನೇಷನ್ ನ 'ಮಾಸ್ತಿ ಗುಡಿ'ಗೆ ಕಾಮಿಡಿ ನಟ ಕಮ್ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರು 5 ಹಾಡುಗಳನ್ನು ಕಂಪೋಸ್ ಮಾಡುತ್ತಿದ್ದಾರೆ. ಜೊತೆಗೆ ಚಿತ್ರದಲ್ಲೂ ಅಭಿನಯಿಸಲಿದ್ದಾರೆ.

ಚರ್ಚೆಯಲ್ಲಿ ಚಿತ್ರತಂಡ
ಚಿತ್ರದ ಮೂಹೂರ್ತಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ಈಗಾಗಲೇ ಇಡೀ ಚಿತ್ರತಂಡ ಮತ್ತು ನಟ ವಿಜಯ್ ಅವರು ಚಿತ್ರದ ಬಗ್ಗೆ ಧೀರ್ಘ ಸಮಾಲೋಚನೆಯಲ್ಲಿ ತೊಡಗಿರುವುದು.

ಬಾಳೆ ಎಲೆ ಊಟ
ಸಿನಿಮಾದ ಶೂಟಿಂಗ್ ಗೆ ಲೊಕೇಶನ್ ಹುಡುಕುವ ಭರಾಟೆಯಲ್ಲೂ ಭೋಜನದ ಸಂದರ್ಭದಲ್ಲಿ ದುನಿಯಾ ವಿಜಯ್ ಮತ್ತು ನಾಗಶೇಖರ್ ಅವರ ಫೋಸ್. ಪಕ್ಕದಲ್ಲಿ ಮಾತಿನಲ್ಲಿ ನಿರತರಾಗಿರುವ ರಂಗಾಯಣ ರಘು.

ಅಲೆದಾಡುತ್ತಿರುವ 'ಮಾಸ್ತಿ ಗುಡಿ' ತಂಡ
ಶೂಟಿಂಗ್ ಗೆ ಜಾಗ ಹುಡುಕಲು ಬೆಟ್ಟ-ಗುಡ್ಡಗಳಲ್ಲಿ ಅಲೆಮಾರಿಗಳಾಗಿ ಅಲೆದಾಡುತ್ತಿರುವ ನಟ ದುನಿಯಾ ವಿಜಯ್ ನಿರ್ದೇಶಕ ನಾಗಶೇಖರ್ ಮತ್ತು ತಂಡ.

'ಮಾಸ್ತಿ ಗುಡಿ' ಫಸ್ಟ್ ಪೋಸ್ಟರ್ ರಿಲೀಸ್
'ಮಾಸ್ತಿ ಗುಡಿ' ಮೊದಲನೇ ಪೋಸ್ಟರ್ ಬಿಡುಗಡೆ ಮಾಡುವ ಸಂದರ್ಭದಲ್ಲಿ ನಟ ದುನಿಯಾ ವಿಜಯ್, ಖಳನಟ ಉದಯ್, ನಿರ್ದೇಶಕ ನಾಗಶೇಖರ್ ಮತ್ತು ಚಿತ್ರತಂಡ.

ಚಡ್ಡಿ ದೋಸ್ತ್ ಗಳು
'ದುನಿಯಾ' ಸಿನಿಮಾದಿಂದ ಹಿಡಿದು ಹೆಚ್ಚಾಗಿ ಒಂದೇ ಸಿನಿಮಾಗಳಲ್ಲಿ ಚಡ್ಡಿ ದೋಸ್ತಿಗಳಂತೆ ಕಾಣಿಸಿಕೊಳ್ಳುವ ನಟ ದುನಿಯಾ ವಿಜಯ್ ಮತ್ತು ಅದ್ಭುತ ನಟ ರಂಗಾಯಣ ರಘು ಫೋಸ್.

ವಿಭಿನ್ನ ಲುಕ್ ನಲ್ಲಿ ದುನಿಯಾ ವಿಜಿ
ವಿಶೇಷವಾಗಿ 'ಮಾಸ್ತಿ ಗುಡಿ' ಚಿತ್ರಕ್ಕಾಗಿಯೇ ವಿಭಿನ್ನ ಲುಕ್ ನಲ್ಲಿ, ಡಿಫರೆಂಟ್ ಗೆಟಪ್ ನಲ್ಲಿ ದುನಿಯಾ ವಿಜಯ್ ಅವರು ಮಿಂಚಲಿದ್ದಾರೆ ಅನ್ನೋದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ.


Click it and Unblock the Notifications











