For Quick Alerts
  ALLOW NOTIFICATIONS  
  For Daily Alerts

  BREAKING: ದುನಿಯಾ ವಿಜಯ್ ತಾಯಿ ನಾರಾಯಣಮ್ಮ ನಿಧನ

  |

  ನಟ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ಇಂದು (ಜುಲೈ 08) ನಿಧನರಾಗಿದ್ದಾರೆ. ಕಳೆದ 20 ದಿನಗಳಿಂದಲೂ ನಾರಾಯಣಮ್ಮ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು.

  ತಾಯಿ ಪ್ರೀತಿ ಮತ್ತೆ ಸಿಗಲ್ಲ ದುನಿಯಾ ವಿಜಯ್ | Duniya Vijay's Mother No More | Filmibeat Kannada

  ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ನಂತರ ಮನೆಗೆ ಕರೆತರಲಾಗಿತ್ತು, ಪ್ರತಿನಿತ್ಯ ವೈದ್ಯರು ಮನೆಗೆ ಬಂದು ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಅವರು ಕೊನೆ ಉಸಿರೆಳೆದಿದ್ದಾರೆ.

  ತಾಯಿಯ ಅಂತ್ಯಕ್ರಿಯೆಯನ್ನು ಆನೇಕಲ್ ಕುಂಬಾರ ಹಳ್ಳಿಯಲ್ಲಿ ನಾಳೆ (ಜುಲೈ 09) ರಂದು ಮಾಡಲು ದುನಿಯಾ ವಿಜಯ್ ನಿಶ್ಚಯಿಸಿದ್ದಾರೆ.

  ಕೆಲವು ದಿನಗಳ ಹಿಂದಷ್ಟೆ ತಾಯಿಯ ಆರೋಗ್ಯದ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ದುನಿಯಾ ವಿಜಯ್ ''ಅಮ್ಮ ಚೇತರಿಸಿಕೊಳ್ಳುತ್ತಿದ್ದಾರೆ. ಅಮ್ಮನಿಗೆ ಆಸ್ಪತ್ರೆಯಲ್ಲಿರಲು ಇಷ್ಟವಾಗಲಿಲ್ಲ, ಅವರ ಒತ್ತಾಯದ ಮೇರೆಗೆ ಅವರನ್ನು ಮನೆಗೆ ಕರೆತಂದು ಇಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದ್ದೇನೆ. ಅಮ್ಮ ಚೇತರಿಸಿಕೊಳ್ಳಲಿದ್ದಾರೆ'' ಎಂದಿದ್ದರು. ಆದರೆ ದುನಿಯಾ ವಿಜಯ್ ನಿರೀಕ್ಷೆ ಹುಸಿಯಾಗಿದ್ದು, ತಾಯಿ ಅವರನ್ನು ಅಗಲಿ ಹೋಗಿದ್ದಾರೆ.

  English summary
  Actor Duniya Vijay's mother Narayanamma passed away on July 08. She is suffering from brain storke.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X