»   » ಆರ್ ಎಕ್ಸ್ ಸೂರಿ: ಡಬ್ಬಲ್ ಮೀನಿಂಗ್ ಡೈಲಾಗ್ಸ್ ಕಟ್

ಆರ್ ಎಕ್ಸ್ ಸೂರಿ: ಡಬ್ಬಲ್ ಮೀನಿಂಗ್ ಡೈಲಾಗ್ಸ್ ಕಟ್

Posted By:
Subscribe to Filmibeat Kannada

ಇತ್ತೀಚೆಗೆ ಕರ್ನಾಟಕದಾದ್ಯಂತ ಲೇಟೇಸ್ಟ್ ಆಗಿ ಬಿಡುಗಡೆ ಆದ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಿ ಅವರ 'ಆರ್ ಎಕ್ಸ್ ಸೂರಿ' ಚಿತ್ರದ ಕೆಲವಾರು ಸೀನ್ ಗಳು ಹಾಗೂ ಡಬಲ್ ಮೀನಿಂಗ್ ಡೈಲಾಗ್ ಗಳನ್ನು ಕಟ್ ಮಾಡಲಾಗಿದೆಯಂತೆ.

ನಿರ್ದೇಶಕ ಶ್ರೀ ಜೈ ಆಕ್ಷನ್-ಕಟ್ ಹೇಳಿರುವ ದುನಿಯಾ ವಿಜಯ್ ಹಾಗೂ ಆಕಾಂಕ್ಷ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ 'ಆರ್ ಎಕ್ಸ್ ಸೂರಿ' ಚಿತ್ರ ನೋಡಿದ ಕೆಲವು ವಿಮರ್ಶಕರು ಚಿತ್ರದ ಕೆಲವು ಡಬಲ್ ಮೀನಿಂಗ್ ಡೈಲಾಗ್ ಹಾಗೂ ಕೆಲವೊಂದು ಫೈಟ್ ಸೀನ್ ಗಳ ಬಗ್ಗೆ ಆಕ್ಷೇಪ ಎತ್ತಿದ ಕಾರಣಕ್ಕೆ ಇದೀಗ ಚಿತ್ರತಂಡ ಕೆಲವು ದೃಶ್ಯಗಳ ಜೊತೆಗೆ ಡೈಲಾಗ್ ಗಳನ್ನು ಕಟ್ ಮಾಡಿದ್ದಾರೆ. ['RX ಸೂರಿ' ಬಗ್ಗೆ ದುನಿಯಾ ವಿಜಯ್ ಬಿಚ್ಚಿಟ್ಟ ರಹಸ್ಯ]


Duniya Vijay's RX Soori film gets trimmed

ಹೀಗಾಗಿ 'ಆರ್ ಎಕ್ಸ್ ಸೂರಿ' ಚಿತ್ರತಂಡ ಇಂತಹ ವಲ್ಗರ್ ಸೀನ್ ಗಳನ್ನು ಕಟ್ ಮಾಡುವುದು ಒಳ್ಳೆಯದು ಎಂದು ಯೋಚಿಸಿ ಕೆಲವೊಂದು ದೃಶ್ಯಗಳನ್ನು ಕಟ್ ಮಾಡಿದ್ದಾರೆ.


ಹೆಚ್ಚಾಗಿ ಫ್ಯಾಮಿಲಿ ಸಮೇತ ನೋಡುವ ಮಂದಿಗೆ ಇಂತಹ ದೃಶ್ಯಗಳ ಜೊತೆಗೆ ಡಬಲ್ ಮೀನಿಂಗ್ ಡೈಲಾಗ್ ಗಳು ಮುಜುಗರಕ್ಕೀಡು ಮಾಡಬಹುದು ಎಂದು ನಿರ್ದೇಶಕ ಶ್ರೀ ಜೈ ಹಾಗೂ ಇಡೀ ಚಿತ್ರತಂಡ ಈ ನಿರ್ಧಾರ ಕೈಗೊಂಡಿದ್ದಾರೆ.[ಕಲೆಕ್ಷನ್ ನಲ್ಲಿ 'RX ಸೂರಿ' ಸೂಪರ್ರೋ ಸೂಪರ್ರು]


ಇನ್ನೇನು ಚಿತ್ರದ ಹೊಸ ವರ್ಷನ್ ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ. ಇಲ್ಲಿಯವರೆಗೆ ಚಿತ್ರ ನೋಡದೇ ಇರುವವರು ಇನ್ನು ಚಿತ್ರದಲ್ಲಿ ಸೇರ್ಪಡೆಗೊಳಿಸಲಾದ ಹೊಸ ದೃಶ್ಯ ಭಾಗಗಳನ್ನು ನೋಡುವ ಅವಕಾಶವಿದೆ.


Duniya Vijay's RX Soori film gets trimmed

ನಿಜಕಥೆಯನ್ನಾಧರಿಸಿದ 'ಆರ್ ಎಕ್ಸ್ ಸೂರಿ' ಇತ್ತೀಚೆಗೆ ಭಾರಿ ಸುದ್ದಿಯಾಗಿತ್ತು. ಚಿತ್ರದಲ್ಲಿ ಲಾಂಗು-ಮಚ್ಚುಗಳದೇ ಕಾರುಬಾರು ಇದ್ದರು ಕೂಡ ಪ್ರೇಕ್ಷಕರು ಮುಗಿಬಿದ್ದು ನೋಡಲು ಕಾರಣ ಚಿತ್ರದಲ್ಲಿರುವ ನವಿರಾದ ಪ್ರೇಮಕಥೆ ಅಂತಾನೇ ಹೇಳಬಹುದು.[ಆರ್ ಎಕ್ಸ್ ಸೂರಿ : ರಕ್ತಸಿಕ್ತ ಬೊಂಬಾಟ್ ಲವ್ ಸ್ಟೋರಿ]


ಇಷ್ಟೆಲ್ಲಾ ಸುದ್ದಿ ಮಾಡಿದರೂ ಕೂಡ ಕೇವಲ ಮೂರೇ ದಿನದಲ್ಲಿ ಚಿತ್ರ ಬರೋಬ್ಬರಿ 5 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್ ಧೂಳಿಪಟ ಮಾಡಿದೆ. ಅವಲಹಳ್ಳಿಯಲ್ಲಿ ನಡೆದ ನೈಜ ಪ್ರೇಮಕಥೆಯನ್ನು ಇಟ್ಟುಕೊಂಡು ಮಾಡಿದ ಚಿತ್ರ ಸದ್ಯಕ್ಕೆ ಎಲ್ಲಾ ಕಡೆ ಸಖತ್ ಸೌಂಡ್ ಮಾಡುತ್ತಿದೆ.

English summary
'Duniya' Vijay's latest release 'RX Soori' which was released last week across Karnataka has been trimmed off for few minutes particularly the scenes and dialogues which were said to be vulgar. Actor Duniya Vijay, Actress Akanksha in the lead role. The movie is directed by debudent Sreejay.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada