ಕೊರೊನಾ ಪರಿಣಾಮ 'ಸಲಗ'ದ ಆಗಮನ ಮುಂದೂಡಿಕೆ
ಕೊರೊನಾದಿಂದ ತತ್ತರಿಸಿದ್ದ ಚಿತ್ರೋದ್ಯಮ ಕೊರೊನಾ ಅನ್‌ಲಾಕ್‌ನ ನಂತರ ತುಸು ಚೇತರಿಸಿಕೊಂಡಿತ್ತು ಆದರೆ ಆ ಅನ್‌ಲಾಕ್‌ನ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ಚಿತ್ರಮಂದಿರಗಳ ಮೇಲಿನ ನಿರ್ಬಂಧ ಸಡಿಲಿಸಿದ್ದ ಸರ್ಕಾರ ಕೆಲವೇ ತಿಂಗಳಲ್ಲಿ ಮತ್ತೆ ನಿರ್ಬಂಧ ಹೇರಿದೆ.
ಚಿತ್ರಮಂದಿರಗಳನ್ನು ಪೂರ್ಣವಾಗಿ ಭರ್ತಿ ಮಾಡಲು ಸರ್ಕಾರ ಅವಕಾಶ ಕೊಟ್ಟ ಕೂಡಲೇ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ಸರತಿ ಸಾಲಿನಲ್ಲಿ ನಿಂತವು. ಪೊಗರು, ರಾಬರ್ಟ್, ಯುವರತ್ನ ಹಾಗೂ ಕೆಲವು ಸಿನಿಮಾಗಳು ಸಿನಿಮಾಗಳು ಬಿಡುಗಡೆ ಆದವು ಆದರೆ ಇನ್ನೂ ಹಲವಾರು ಸಿನಿಮಾಗಳು ಬಿಡುಗಡೆ ಬಾಕಿ ಇರುವಂತೆಯೇ ಚಿತ್ರಮಂದಿರಗಳ ಮೇಲೆ ಮತ್ತೆ ನಿರ್ಬಂಧ ಹೇರಲಾಗಿದೆ.
ಚಿತ್ರಮಂದಿರಗಳ ಮೇಲೆ ಮತ್ತೆ ನಿರ್ಬಂಧ ಹೇರಿ 50% ಪ್ರೇಕ್ಷಕರಿಗಷ್ಟೆ ಅವಕಾಶ ನೀಡಿರುವ ಕಾರಣ ಬಿಡುಗಡೆಗೆ ತಯಾರಾಗಿದ್ದ ಹಲವು ಸಿನಿಮಾಗಳು ಸಂಕಷ್ಟಕ್ಕೆ ಸಿಲುಕಿವೆ.

ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದ 'ಸಲಗ' ಸಿನಿಮಾ ಇದೇ ಏಪ್ರಿಲ್ 14 ರಂದು ತೆರೆಗೆ ಬರಬೇಕಿತ್ತು. ಆದರೆ ಚಿತ್ರಮಂದಿರಗಳ ಮೇಲೆ ಹೇರಲಾಗಿರುವ ನಿರ್ಬಂಧದಿಂದಾಗಿ ಸಿನಿಮಾ ಬಿಡುಗಡೆಯನ್ನು ಮುಂದೂಡಿದೆ ಚಿತ್ರತಂಡ.
'ಸಲಗ' ಸಿನಿಮಾ ಬಿಡುಗಡೆಗೆ ಮುನ್ನಾ ಹೊಸಪೇಟೆಯಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸುವ ಯೋಜನೆಯನ್ನೂ ತಂಡ ಹಾಕಿಕೊಂಡಿತ್ತು, ಅದೂ ಸಹ ರದ್ದಾಗಿದೆ. ಸಿನಿಮಾವನ್ನು ಯಾವ ದಿನಾಂಕದಂದು ಬಿಡುಗಡೆ ಮಾಡಲಿದ್ದೇವೆ ಎಂಬುದನ್ನು ಚಿತ್ರತಂಡ ಹೇಳಿಲ್ಲ.
Recommended Video
'ಸಲಗ' ನಂತರ ಸುದೀಪ್ ನಟನೆಯ 'ಕೋಟ್ಯಧಿಪತಿ 3' ಆ ನಂತರ ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾಗಳ ಬಿಡುಗಡೆ ಸಹ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.


Click it and Unblock the Notifications











