For Quick Alerts
  ALLOW NOTIFICATIONS  
  For Daily Alerts

  'ಸಲಗ' ನಿರ್ದೇಶಕ ಚೇಂಜ್, ವಿಜಿ ಮುಂದಿನ ಸಿನಿಮಾನೂ ಚೇಂಜ್

  |

  ಹೊಸ ವರ್ಷಕ್ಕೊಂದು ಹೊಸ ಸುದ್ದಿ ಕೊಡ್ತೀನಿ, ಹೊಸ ರೀತಿ ಸಿನಿಮಾ ಮಾಡ್ತೀನಿ ಎಂದು ಹೇಳಿದ್ದ ನಟ ದುನಿಯಾ ವಿಜಯ್ ಹೇಳಿದಂತೆ ಡಿಸೆಂಬರ್ 25 ರಂದು 'ಸಲಗ' ಎಂಬ ಸಿನಿಮಾ ಮಾಡ್ತಿದ್ದೀನಿ. ಆ ಚಿತ್ರವನ್ನ ರಘು ಶಿವಮೊಗ್ಗ ನಿರ್ದೇಶನ ಮಾಡ್ತಿದ್ದಾರೆ ಎಂದಿದ್ದರು.

  ಈ ಚಿತ್ರದ ಮೊದಲ ಪೋಸ್ಟರ್ ಸದ್ಯದಲ್ಲೇ ರಿಲೀಸ್ ಮಾಡುತ್ತೇನೆ ಎಂದು ತಿಳಿಸಿದ್ದ ದುನಿಯಾ ವಿಜಯ್ ಈಗ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

  ಬದಲಾದ ದುನಿಯಾ ವಿಜಿ: ಹೊಸ ವರ್ಷಕ್ಕೆ 'ಹೊಸ ನಿರ್ಧಾರ' ಪ್ರಕಟ.!

  ಒಂದು ತಿಂಗಳಿನಿಂದ ದುನಿಯಾ ಅಭಿಮಾನಿಗಳು ಇಟ್ಟುಕೊಂಡಿದ್ದ ಆಸೆಯನ್ನ ನಿರಾಸೆ ಮಾಡಿದ್ದಾರೆ. ಇದೊಂದು ರೀತಿ ನಿರಾಸೆಯಾಗಿದ್ದರೂ, ಇನ್ನೊಂದು ವಿಧದಲ್ಲಿ ವಿಜಿ ಅಭಿಮಾನಿಗಳಿಗೆ ಸಂಭ್ರಮವೂ ಇದೆ. ಏನದು ಮುಂದೆ ಓದಿ.....

  'ಸಲಗ'ಕ್ಕೆ ಮಾವುತ ಬದಲಾದ್ರು

  'ಸಲಗ'ಕ್ಕೆ ಮಾವುತ ಬದಲಾದ್ರು

  ಈ ಹಿಂದೆ ಸ್ವತಃ ದುನಿಯಾ ವಿಜಯ್ ಅವರೇ ತಿಳಿಸಿದಂತೆ ಸಲಗ ಚಿತ್ರವನ್ನ ರಘು ಶಿವಮೊಗ್ಗ ನಿರ್ದೇಶನ ಮಾಡಬೇಕಿತ್ತು. ಆದ್ರೀಗ, ಈ ಚಿತ್ರದಿಂದ ರಘು ಅವರು ಹಿಂದೆ ಸರಿದಿದ್ದಾರೆ. ಸಲಗ ಚಿತ್ರವನ್ನ ರಘು ನಿರ್ದೇಶನ ಮಾಡುತ್ತಿಲ್ಲ.

  ವಿಜಯ್ ದುನಿಯಾದಲ್ಲಿ ಸ್ನೇಹ, ಪ್ರೀತಿ ಶಕ್ತಿ ಮತ್ತು ಭಕ್ತಿ..!

  ಕಾರಣ ಬೇರೆ ಸಿನಿಮಾ

  ಕಾರಣ ಬೇರೆ ಸಿನಿಮಾ

  ದುನಿಯಾ ವಿಜಯ್ ಕುಸ್ತಿ ಸಿನಿಮಾ ಮಾಡ್ತಿರೋದು ಇದೇ ರಘು ಶಿವಮೊಗ್ಗ. ಇದರ ಮಧ್ಯೆ ಸಲಗ ಘೋಷಿಸಿದ್ದರು. ಈಗ ಸಲಗ ಚಿತ್ರವೂ ಮಾಡುತ್ತಿಲ್ಲ. ಯಾಕಂದ್ರೆ, ನಟ ವಿಜಿ ಮತ್ತು ರಘು ಅವರ ಮಧ್ಯ ಒಂದು ಒಪ್ಪಂದ ಆಗಿದೆ. ಇದು ಒಪ್ಪಂದ ಅನ್ನೋವುದಕ್ಕಿಂತ ಸ್ನೇಹದ ಸಂಬಂಧಕ್ಕೆ ಇಬ್ಬರು ಕೊಟ್ಟ ಬೆಲೆ ಎನ್ನಬಹುದು.

  ಸಲಗ ಬಿಟ್ಟು ಕೊಟ್ಟ ಡೈರೆಕ್ಟರ್

  ಸಲಗ ಬಿಟ್ಟು ಕೊಟ್ಟ ಡೈರೆಕ್ಟರ್

  'ಸಲಗ' ಎಂಬ ಟೈಟಲ್ ಗೆ ರಘು ಒಂದು ಮಾಸ್ ಕಥೆಯನ್ನು ಮಾಡುತ್ತಿದ್ದರು. ಇದೇ ಸಮಯದಲ್ಲಿ ಇನ್ನೊಂದು ಕಥೆ ನನ್ನ ಬಳಿ ಚರ್ಚೆಗೆ ಬಂತು‌. ಆ ಕಥೆಯನ್ನು ರಾಘು ಶಿವಮೊಗ್ಗ‌ ಬಳಿ ಹೇಳಿದೆ. ಅವರು ತಕ್ಷಣ ಸಲಗ ಟೈಟಲ್ ಗೆ ಈ ಕಥೆ ಹೊಂದುತ್ತದೆ‌ ನಾವಿಬ್ಬರೂ 'ಕುಸ್ತಿ' ಸಿನಿಮಾವನ್ನೇ ಮಾಡೋಣ. ಈಗ ನೀವು ಇದನ್ನೇ ಮಾಡಿ ಅಂದ್ರು'' ಎಂದು ವಿಜಿ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

  ಮುಂದೆ ಏನಪ್ಪಾ ಅಂದ್ರೆ

  ಮುಂದೆ ಏನಪ್ಪಾ ಅಂದ್ರೆ

  ನನಗೆ ರಘು ಕಮಿಟ್ಮೆಂಟ್ ಇಷ್ಟ‌ ಆಯ್ತು. ಒಬ್ಬ ನಿರ್ದೇಶಕ ಈ ರೀತಿಯೂ ಯೋಚಿಸಬಹುದಾ ಎಂದುಕೊಂಡೆ. ಇದು ಅವರಲ್ಲಿನ ವೃತ್ತಿಪರತೆಯನ್ನು ತೋರಿಸುತ್ತದೆ. ಅವರ ಈ ನಿರ್ಧಾರ ನನಗೆ ಒಳ್ಳೆ ಕಥೆಗಾರ ಮತ್ತು ನಿಸ್ವಾರ್ಥಿ ನಿರ್ದೇಶಕನನ್ನು ತೋರಿಸಿಕೊಟ್ಟಿತು. ಹಾಗಾಗಿ ಈ ಬಾರಿ ಬೇರೆ ಮಾವುತನೊಂದಿಗೆ ಸಲಗನಾಗಿ ನಿಮ್ಮ ಮುಂದೆ ಬರಲಿದ್ದೇನೆ. ಆ ಮಾವುತ ಮತ್ತು ಆ ಸಿನಿಮಾದ ಇತರ ವಿವರವನ್ನು ಮುಂದೆ ತಿಳಿಸ್ತೇನೆ. ರಘು ಶಿವಮೊಗ್ಗ ಮತ್ತು ನಾನು ಮುಂದಿನ ದಿನಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತೇವೆ'' ಎಂದು ವಿಜಿ ಹೇಳಿದ್ದಾರೆ.

  English summary
  Duniya Vijay has announced his upcoming movie is titled as Salaga and it is being produced under his own banner 'Duniya Talkies'. but, now he changed his director and movie also.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X