ದುನಿಯಾ ವಿಜಯ್ 'ಸಲಗ' ಬಿಡುಗಡೆಗೆ ಮುಹೂರ್ತ ನಿಗದಿ
'ಥಿಯೇಟರ್‌ಗಳಿಗೆ 100 ಪರ್ಸೆಂಟ್ ಅವಕಾಶ ಸಿಕ್ಕ ಮೇಲೆ ನಾವು ಮೊದಲು ಬರ್ತೇವೆ' ಎಂದು ನಟ ದುನಿಯಾ ವಿಜಯ್ ಈ ಹಿಂದೆ ಹೇಳಿದ್ದರು. ಅದರಂತೆ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ 'ಸಲಗ' ಸಿನಿಮಾ ರಿಲೀಸ್‌ಗೆ ದಿನಾಂಕ ಫಿಕ್ಸ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ಹೊರಬಿದ್ದಿರುವ ಮಾಹಿತಿಯಂತೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 'ಸಲಗ' ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ. ಆಗಸ್ಟ್ 21 ರಂದು ವರಮಹಾಲಕ್ಷ್ಮಿ ಹಬ್ಬ ಇದೆ. ಹಬ್ಬ ಶನಿವಾರ ಇರುವುದರಿಂದ ಒಂದೆರಡು ದಿನ ಮುಂಚಿತವಾಗಿಯೇ ಪ್ರೇಕ್ಷಕರೆದುರು ಬರುವ ಲೆಕ್ಕಾಚಾರದಲ್ಲಿದೆ.
ಇದುವರೆಗೂ ಬಿಡುಗಡೆ ಬಗ್ಗೆ ಅಧಿಕೃತ ಪ್ರಕಟಣೆ ಆಗಿಲ್ಲ. ದುನಿಯಾ ವಿಜಯ್ ಆಗಲಿ ಅಥವಾ ನಿರ್ಮಾಪಕರ ಕಡೆಯಿಂದಾಗಲಿ ಯಾವುದೇ ಖಚಿತ ಮಾಹಿತಿ ಇಲ್ಲ.

ಜುಲೈ 19 ರಿಂದ ಕರ್ನಾಟಕದಲ್ಲಿ ಚಿತ್ರಮಂದಿರಗಳಿಗೆ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಸದ್ಯಕ್ಕೆ ಶೇಕಡಾ 50ರಷ್ಟು ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ, ಮತ್ತಷ್ಟು ದಿನ ಸ್ಟಾರ್ ನಟರ ಸಿನಿಮಾಗಳು ಕಾಯಬೇಕಿದೆ.
ದುನಿಯಾ ವಿಜಯ್ ನಟಿಸಿರುವ ನಿರ್ದೇಶಿಸಿರುವ ಈ ಚಿತ್ರವನ್ನು ಕೆಪಿ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ. ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಜನಾ ಆನಂದ್ ನಾಯಕಿ. ಚರಣ್ ರಾಜ್ ಸಂಗೀತ ನಿರ್ದೇಶನದ ಹಾಡುಗಳು ಈಗಾಗಲೇ ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ.
'ಸಲಗ' ಸಿನಿಮಾ ಬಿಟ್ಟರೆ, ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 3', 'ವಿಕ್ರಾಂತ್ ರೋಣ' ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿವೆ. ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾ ಬಿಡುಗಡೆಯಾಗಬೇಕಿದೆ. ಲಾಕ್‌ಡೌನ್‌ಗೂ ಮುಂಚೆ ಪೊಗರು, ರಾಬರ್ಟ್, ಯುವರತ್ನ ಸಿನಿಮಾಗಳು ರಿಲೀಸ್ ಆಗಿತ್ತು.


Click it and Unblock the Notifications











