ಪಾನಿಪುರಿ ಕಿಟ್ಟಿ ಜೊತೆಗಿನ 20 ವರ್ಷದ 'ಸೇಡು-ಸ್ನೇಹ'ದ ಕಥೆ ಬಿಚ್ಚಿಟ್ಟಿದ್ದ ವಿಜಿ

ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಮತ್ತು ನಟ ದುನಿಯಾ ವಿಜಿ ಅವರ ಸ್ನೇಹ ಅಥವಾ ದುಷ್ಮನ್ ನಿನ್ನೆ ಮೊನ್ನೆಯದಲ್ಲ. ಇವರಿಬ್ಬರ ಈ ಸೇಡು ಮತ್ತು ಸ್ನೇಹಕ್ಕೆ 20 ವರ್ಷಗಳ ಇತಿಹಾಸವಿದೆ.

ಪಾನಿಪೂರಿ ಕಿಟ್ಟಿ ಇಂದು ಕನ್ನಡದ ಸ್ಟಾರ್ ನಟರುಗಳಿಗೆ ಬೇಕಾಗಿರುವ ಬಹುಬೇಡಿಕೆಯ ಜಿಮ್ ಟ್ರೈನರ್. ಸ್ವತಃ ವಿಜಿಗೂ ಕೂಡ ಪರ್ಸನಲ್ ಟ್ರೈನರ್ ಆಗಿದ್ದರು ಈ ಕಿಟ್ಟಿ. ಆದ್ರೆ, ಈಗ ಕಿಟ್ಟಿ ಹಾಗೂ ದುನಿಯಾ ವಿಜಯ್ ನಡುವೆ ಸ್ನೇಹ ಕಳಚಿ ಬಿದ್ದಿದೆ. ಇದರ ಪರಿಣಾಮ ಈಗ ಹಾವು-ಮುಂಗುಸಿಯಂತೆ ಕಿತ್ತಾಡಲು ಕಾರಣವಾಗಿದೆ.

ಅಂದ್ಹಾಗೆ, ದುನಿಯಾ ವಿಜಯ್ ಮತ್ತು ಪಾನಿಪೂರಿ ಕಿಟ್ಟಿಯ ನಡುವೆ ಏನೋ ಜಗಳ ಇದೆ. ಯಾವುದೋ ವಿಷ್ಯಕ್ಕೆ ಕಿತ್ತಾಡಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿಯೇ ಈಗ ನಡೆದಿರುವ ಜಗಳ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದ್ರೆ, ಎರಡು ವರ್ಷದ ಹಿಂದೆ ದುನಿಯಾ ವಿಜಿ ಬರೆದುಕೊಂಡಿದ್ದ ಈ ಪದಗಳನ್ನ ನೋಡಿದ್ರೆ, ಕಿಟ್ಟಿ ಮತ್ತು ವಿಜಿ ಮಧ್ಯೆ ಇಂತಹದೊಂದು ಜಗಳ ಆಗುತ್ತೆ ಎಂದು ಯಾರೂ ನಿರೀಕ್ಷೆ ಮಾಡಿರಲ್ಲ. ವಿಜಿ ಅಂದು ಬರೆದಿದ್ದ ಪತ್ರವನ್ನ ಓದಿದ್ರೆ ಹೃಯದ ಕರಗುತ್ತೆ. ಅಷ್ಟಕ್ಕೂ, ಕಿಟ್ಟಿ ಬಗ್ಗೆ ವಿಜಿ ಎರಡು ವರ್ಷದ ಹಿಂದೆ ಏನು ಹೇಳಿದ್ದರು ಎಂಬುದನ್ನ ಮುಂದೆ ಓದಿ.....

ಮೊದಲು ದುಷ್ಮನ್, ಆಮೇಲೆ ಫ್ರೆಂಡ್

ಮೊದಲು ದುಷ್ಮನ್, ಆಮೇಲೆ ಫ್ರೆಂಡ್

''ಅವನು ನಾನು ಇಪ್ಪತ್ತು ವರ್ಷದಿಂದ ಗೊತ್ತಿರೋರು. ಆರಂಭದಲ್ಲಿ ಅವನು ನನ್ನ ದುಷ್ಮನ್, ಬಾಡಿ ಬಿಲ್ಡಿಂಗ್ ಟೈಮಲ್ಲಿ ನೀನಾ ನಾನಾ ಅಂತ ಜಿದ್ದಿಗೆ ಬಿದ್ದಿದ್ದೂ ಇದೆ. ಆದ್ರೆ ಕಾಲ ಕ್ರಮೇಣ ಗೆಳೆಯರಾದ್ವಿ. ಜೀವದ ಗೆಳೆಯರಾದ್ವಿ.

ಕಿತ್ತು ತಿಂತಿದ್ದ ಕಷ್ಟಗಳು ಅದು

ಕಿತ್ತು ತಿಂತಿದ್ದ ಕಷ್ಟಗಳು ಅದು

''ಇವತ್ತು ಕಿಟ್ಟಿ ಆಗಿರೋ ನನ್ನ ಗೆಳೆಯ ಪಾನಿಪುರಿ ಕಿಟ್ಟಿಯನ್ನು ಕಿತ್ತು ತಿಂತಿದ್ದ ಕಷ್ಟಗಳು ನನ್ನ ಕಣ್ಣೆದುರಿಗೇ ಇದೆ. ಆದ್ರೆ, ಇವತ್ತವನು ಬೆಳೆದ ರೀತಿ ನೋಡಿದ್ರೆ ಖುಷಿ ಆಗುತ್ತೆ. ಹೆಮ್ಮೆ ಅನ್ಸುತ್ತೆ. ಅವತ್ತವನ ಬಳಿ ಸೈಕಲ್ ಸಹ ಇರಲಿಲ್ಲ. ಇವತ್ತು ಆಡಿ ಕಾರಲ್ಲಿ ಓಡಾಡೋದು ನೋಡಿದ್ರೆ ಅವನು ಪಟ್ಟ ಕಷ್ಟಗಳು ಕಣ್ಣೆದುರಿಗೆ ರಪ್ ಅಂತ ಪಾಸಾಗುತ್ತೆ.!''

ಕುಟುಂಬವೂ ಹತ್ತಿರ

ಕುಟುಂಬವೂ ಹತ್ತಿರ

''ಅವನು ಮಾತ್ರವಲ್ಲ, ಅವನ ಕುಟುಂಬ ಸಹ ಇವತ್ತು ನನಗೆ ಹತ್ತಿರ. ಅವನ ಮಗ ನನ್ನ ಹೆಗಲೇರಿ ಆಟವಾಡ್ತಾನೆ. ನನ್ನ ಮಗ ಕಿಟ್ಟಿಯ ಜೊತೆ ಡಿಶುಂ ಡಿಶುಂ ಅಂತಾನೆ. ಅವನು ಬೆಳೆದಿದ್ದಾನೆ. ಆದ್ರೆ, ಇನ್ನು ಇನ್ನೂ ಬೆಳಿಯಬೇಕು''

ಜಿಮ್ ಆರಂಭಿಸ್ತಾ ಇದ್ದಾನೆ

ಜಿಮ್ ಆರಂಭಿಸ್ತಾ ಇದ್ದಾನೆ

''ಅವನೀಗ ಹೊಸ ಜಿಮ್ ಆರಂಭಿಸ್ತಾ ಇದ್ದಾನೆ. ಅದು ಹತ್ತಾಗಬೇಕು, ನೂರಾಗಬೇಕು. ನಾನು ಅವನು ಜೀವನದಲ್ಲಿ ಒಂದು ಪಾಠ ಏನು ಗೊತ್ತಾ.? ಕಷ್ಟಪಟ್ರೆ ಜೀವನದಲ್ಲಿ ಸಿಗದೇ ಇರೋದು ಏನೂ ಇಲ್ಲ. ನಮ್ಮ ದೇಹದೊಳಗಿದ್ದ ಬೆವರೆಂಬ ರಾಕ್ಷಸ ಹೊರಗೆ ಹೋದ್ರೆ ಯಶಸ್ಸು ತೆಪ್ಪಗೆ ನಮ್ಮ ಹಿಂದೆ ಬರುತ್ತೆ...ಗೆಳೆಯ ಲವ್ ಯೂ ಕಣೋ.....''

ಇದನ್ನ ನೋಡಿದ್ಮೇಲೆ ಕಾಡುವುದೇನು.?

ಇದನ್ನ ನೋಡಿದ್ಮೇಲೆ ಕಾಡುವುದೇನು.?

ಎರಡು ವರ್ಷದ ಹಿಂದೆ ಪಾನಿಪೂರಿ ಕಿಟ್ಟಿ ವಿದ್ಯಾರಣ್ಯಪುರದಲ್ಲಿ 'ಮಸಲ್ ಪ್ಲಾನೆಟ್' ಎಂಬ ಜಿಮ್ ಒಪನ್ ಮಾಡಿದ್ದರು. ಈ ವೇಳೆ ಗೆಳೆಯನಿಗೆ ಶುಭಕೋರಿದ್ದ ವಿಜಿ ತಮ್ಮಿಬ್ಬರ ಗೆಳೆತನ ಮತ್ತು ದುಷ್ಮನ್ ಬಗ್ಗೆ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದರು. ಈಗ ನೋಡಿದ್ರೆ ಇಬ್ಬರು ಕಿತ್ತಾಡಿಕೊಂಡಿದ್ದಾರೆ. ಈ ಮಧ್ಯೆ ಕಿಟ್ಟಿ ಅವರು ವಿಜಿಯಿಂದ ದೂರವಾಗಿದ್ದರು. ಅಲ್ಲಿಗೆ ಪ್ರಸಾದ್ ಎಂಬ ಟ್ರೈನರ್ ಬಂದಿದ್ದರು. ಈ ಪ್ರಸಾದ್ ಬೇರೆ ಯಾರೂ ಅಲ್ಲ. ಕಿಟ್ಟಿಗೆ ಟ್ರೈನರ್ ಆಗಿದ್ದವರು.

More from Filmibeat

English summary
Kannada Actor Duniya Vijay has taken his facebook account to share about his friend Pani Puri Kitty at 2016.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X