For Quick Alerts
  ALLOW NOTIFICATIONS  
  For Daily Alerts

  ದುನಿಯಾ ವಿಜಯ್ ಜೊತೆ 'ಕುಸ್ತಿ' ಅಖಾಡಕ್ಕಿಳಿದ ಮಗ 'ಸಾಮ್ರಾಟ್'

  By Bharath Kumar
  |
  ದುನಿಯಾ ವಿಜಯ್ ಜೊತೆ 'ಕುಸ್ತಿ' ಅಖಾಡಕ್ಕಿಳಿದ ಮಗ 'ಸಾಮ್ರಾಟ್' | Filmibeat Kannada

  ಕನ್ನಡ ಚಿತ್ರರಂಗದಲ್ಲಿ ಮತ್ತೊಬ್ಬ ಸ್ಟಾರ್ ಪುತ್ರನ ಎಂಟ್ರಿ ಆಗುತ್ತಿದೆಯಂತ ಈ ಹಿಂದೆಯೇ ಸುದ್ದಿಯಾಗಿತ್ತು. ಇದೀಗ, ಆ ಸುದ್ದಿ ಅಧಿಕೃತವಾಗಿದೆ. ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅವರ ಮಗ ಸಾಮ್ರಾಟ್ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದು, ಫಸ್ಟ್ ಲುಕ್ ರಿಲೀಸ್ ಆಗಿದೆ.

  ದುನಿಯಾ ವಿಜಯ್ ಅಭಿನಯಿಸಲಿರುವ ಕುಸ್ತಿ ಚಿತ್ರದಲ್ಲಿ ವಿಜಿ ಅವರ ಮಗ ಸಾಮ್ರಾಟ್ ಬಣ್ಣ ಹಚ್ಚಿದ್ದಾರೆ. ಈ ಚಿತ್ರಕ್ಕೆ ನವನಿರ್ದೇಶಕ ಅನಿಲ್ ಆಕ್ಷನ್ ಕಟ್ ಹೇಳಲಿದ್ದಾರೆ. ಜನವರಿ 20 ರಂದು ವಿಜಯ್ ಬರ್ತಡೇ ಆಗಿದ್ದು, ಈ ಸಂಭ್ರಮದ ಉಡಗುಗೊರೆಯಾಗಿ ಕುಸ್ತಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

  ಅಪ್ಪನ ರೀತಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ದುನಿಯಾ ವಿಜಯ್ ಪುತ್ರಅಪ್ಪನ ರೀತಿ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ದುನಿಯಾ ವಿಜಯ್ ಪುತ್ರ

  ಅಂದ್ಹಾಗೆ, ವಿಜಿ ನಾಯಕನಾಗಿರುವ ಈ ಚಿತ್ರವನ್ನ ಸ್ವತಃ ಅವರೇ ನಿರ್ಮಾಣ ಕೂಡ ಮಾಡಲಿದ್ದಾರೆ. ಇದೊಂದು ಕುಸ್ತಿ ಸುತ್ತ ನಡೆಯುವ ಕಥೆಯಾಗಿದ್ದು, ಈ ಪಾತ್ರಕ್ಕೆ ವಿಜಿ ತಯಾರಿ ನಡೆಸಿಕೊಳ್ಳುತ್ತಿದ್ದಾರೆ.

  ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಕನ್ನಡದ ಸ್ಟಾರ್ ನಟರ ಮಕ್ಕಳು.!ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಕನ್ನಡದ ಸ್ಟಾರ್ ನಟರ ಮಕ್ಕಳು.!

  ಸದ್ಯ, ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಅಭಿನಯದ 'ಕನಕ' ಸಿನಿಮಾ ಜನವರಿ 26ರಂದು ವಾರ ತೆರೆಗೆ ಬರ್ತಿದೆ. 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ಶೂಟಿಂಗ್ ಮುಗಿಸಿ ಡಬ್ಬಿಂಗ್ ಹಂತಕ್ಕೆ ಚಿತ್ರ ಬಂದಿದೆ. ಇದಾದ ಬಳಿಕ ಕುಸ್ತಿ ಚಿತ್ರವನ್ನ ಕೈಗೆತ್ತಿಕೊಳ್ಳಲಿದ್ದಾರೆ.

  English summary
  Actor Duniya Vijay son Samrat starrer kusthi first movie poster has released. the movie directed by anil mandya and produced by duniya vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X