'ಸಲಗ' ಸೈಲೆಂಟ್ ಸುನೀಲನ ಕಥೆ: ದುನಿಯಾ ವಿಜಯ್ ಏನಂದ್ರು?

Recommended Video

Salaga Movie : ಸಲಗ ಚಿತ್ರದ ಗುಟ್ಟು ಬಿಚ್ಚಿಟ್ಟ ದುನಿಯಾ ವಿಜಯ್..! | FILMIBEAT KANNADA

ದುನಿಯಾ ವಿಜಯ್ ನಿರ್ದೇಶನ ಮತ್ತು ನಟನೆ ಸಲಗ ಸಿನಿಮಾ ಭಾರಿ ಕುತುಹಲ ಮೂಡಿಸುತ್ತಿದೆ. ಮೇಕಿಂಗ್ ಪೋಸ್ಟರ್ ಗಳಿಂದ ಸಂಚಲನ ಸೃಷ್ಟಿಸಿದ್ದ ಸಲಗ ಸೈಲೆಂಟ್ ಸುನೀಲನ ಕಥೆ ಆಧಾರಿತ ಚಿತ್ರ ಎಂಬ ವಿಷ್ಯಕ್ಕೆ ಸದ್ದು ಮಾಡಿತ್ತು.

ಕಾಕತಾಳೀಯೋ ಅಥವಾ ಉದ್ದೇಶಪೂರ್ವಕವೂ ಸೈಲೆಂಟ್ ಸುನೀಲ ಮತ್ತು ಸಿಸಿಬಿ ಮುಖ್ಯಸ್ಥ ಅಲೋಕ್ ಕುಮಾರ್ ಅವರ ಮಾದರಿಯಲ್ಲಿ ಫೋಟೋಶೂಟ್ ಮಾಡಿದ್ದ ಚಿತ್ರಗಳು ಇದಕ್ಕೆ ಪುಷ್ಠಿ ನೀಡಿದ್ದವು.

ಈ ಎಲ್ಲ ಕಾರಣಗಳಿಂದ ಇದು ಸೈಲೆಂಟ್ ಸುನೀಲನ ಕುರಿತಾದ ಚಿತ್ರ, ದುನಿಯಾ ವಿಜಯ್ ಅದೇ ಪಾತ್ರ ನಿರ್ವಹಿಸುತ್ತಿದ್ದು, ಧನಂಜಯ್ ಅವರು ಅಲೋಕ್ ಕುಮಾರ್ ಪಾತ್ರದಲ್ಲಿ ನಟಿಸುತ್ತಿರಬಹುದು ಎಂಬ ಅನುಮಾನ ಉಂಟಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ದುನಿಯಾ ವಿಜಯ್ ಬೇರೆಯದ್ದೇ ಕಥ ಎಂದಿದ್ದಾರೆ. ವಿಜಿ ಏನಂದ್ರು? ಮುಂದೆ ಓದಿ....

ಅಂಡರ್ ವರ್ಲ್ಟ್ ಕಥೆ ಅನ್ನೋದು ನಿಜಾ

ಅಂಡರ್ ವರ್ಲ್ಟ್ ಕಥೆ ಅನ್ನೋದು ನಿಜಾ

ಸಲಗ ಅಂಡರ್ ವರ್ಲ್ಡ್ ಕಥೆ ಅನ್ನೋದು ನಿಜ. ಕೆಲವು ನೈಜ ಘಟನೆಗಳನ್ನ ಆಧರಿಸಿ ಚಿತ್ರಕತೆ ಮಾಡಲಾಗಿದೆ. ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಎಲಿಮೆಂಟ್ಸ್ ಹೊಂದಿರುವ ಕಮರ್ಷಿಯಲ್ ಸಿನಿಮಾ ಇದು ಎಂದು ನಿರ್ದೇಶಕ ದುನಿಯಾ ವಿಜಯ್ ಸ್ಪಷ್ಟನೆ ನೀಡಿದರು.

ಸೈಲೆಂಟ್ ಸುನೀಲನ ಕಥೆ ಅಲ್ಲ

ಸೈಲೆಂಟ್ ಸುನೀಲನ ಕಥೆ ಅಲ್ಲ

ಫೋಟೋಶೂಟ್ ಚಿತ್ರಗಳು ಬಿಡುಗಡೆ ಆದ ಬಳಿಕ ಸುದ್ದಿಯಾಗಿರುವಂತೆ ಇದು ಸೈಲೆಂಟ್ ಸುನೀಲನ ಕಥೆಯಲ್ಲ ಅಥವಾ ಅಲೋಕ್ ಕುಮಾರ್ ಅವರ ಕಥೆಯೂ ಅಲ್ಲ. ಅದೆಲ್ಲ ಸುಳ್ಳು ಸುದ್ದಿ ಅಷ್ಟೆ.

ಫೋಟೋ ಕಾಕತಾಳೀಯ ಅಷ್ಟೇ

ಫೋಟೋ ಕಾಕತಾಳೀಯ ಅಷ್ಟೇ

ಮೊದಲೇ ಚಿತ್ರಕಥೆ ಮಾಡಿ ಮುಗಿಸಿದ್ದಿವಿ. ಆಮೇಲೆ ಫೋಟೋಶೂಟ್ ಮಾಡಿದ್ದು. ಇಲ್ಲಿ ಸೈಲೆಂಟ್ ಸುನೀಲ ಅಥವಾ ಅಲೋಕ್ ಕುಮಾರ್ ಹೀಗೆ ಯಾರನ್ನ ಮನಸ್ಸಿನಲ್ಲಿಟ್ಟುಕೊಂಡು ಕಥೆ ಮಾಡಿಲ್ಲ. ಕಾಕತಾಳೀಯ ಆ ಫೋಟೋಗಳು ಸ್ವಲ್ಪ ಹಾಗೆ ಮ್ಯಾಚ್ ಆದ್ವು ಅಷ್ಟೆ'' ಎಂದು ವಿಜಿ ತಿಳಿಸಿದರು.

ಸಮಾಜಕ್ಕೆ ಮಾದರಿ ಪಾತ್ರಗಳು

ಸಮಾಜಕ್ಕೆ ಮಾದರಿ ಪಾತ್ರಗಳು

''ಡಾಲಿ ಧನಂಜಯ್ ಅವರು ಮಾಡುತ್ತಿರುವ ಐಪಿಎಸ್ ಆಫೀಸರ್ ಪಾತ್ರ ಸಮಾಜಕ್ಕೆ ಮಾದರಿಯಾಗುತ್ತೆ. ಅದನ್ನ ಬಿಟ್ಟರೇ ಬೇರೆ ಏನೂ ಇಲ್ಲ. ಜೈಲಿನಲ್ಲಿ ಕೇಳಿದ ಕೆಲವು ಕಥೆ ಹಾಗೂ ನಾನು ಕಂಡ ಅನುಭವ ಎಲ್ಲವೂ ಸೇರಿ ಸ್ಕ್ರಿಪ್ಟ್ ಮಾಡಿದ್ದೇನೆ'' ಎಂದು ಹೇಳಿದರು.

ಸಲಗ ಚಿತ್ರಕ್ಕೆ ಸುದೀಪ್ ಸಾಥ್

ಸಲಗ ಚಿತ್ರಕ್ಕೆ ಸುದೀಪ್ ಸಾಥ್

ಬೆಂಗಳೂರಿನ ಬಂಡಿಮಹಾಕಾಳಮ್ಮ ದೇವಸ್ಥಾನದಲ್ಲಿ ಜೂನ್ 6 ರಂದು ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆ ಸುರೇಶ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

More from Filmibeat

English summary
Kannada actor duniya vijay directional movie salaga started from today (june 6th). viji said that its not real story of silent sunil or alok kumar its real story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X