Duniya Vijay: ನಟ ದುನಿಯಾ ವಿಜಯ್ 'ಭೀಮ'ನ ಅವತಾರಕ್ಕೆ ಅಧಿಕೃತ ಚಾಲನೆ!

ದುನಿಯಾ ವಿಜಯ್ 'ಸಲಗ' ಚಿತ್ರದ ಮೂಲಕ ತಾನೊಬ್ಬ ಉತ್ತಮ ನಿರ್ದೇಶಕ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಇದೀಗ ಎರಡನೇ ಸಿನಿಮಾಗೆ ಭರ್ಜರಿ ತಯಾರಿ ಮಾಡಿಕೊಂಡಿದ್ದು, ಚಿತ್ರದ ಟೈಟಲ್ ಈಗಾಗಲೇ ರಿವೀಲ್ ಮಾಡಿದ್ದಾರೆ. ಚಿತ್ರದ ಟೈಟಲ್ 'ಭೀಮ'. ಟೈಟಲ್ ಟೀಸರ್ ಮೂಲಕ ಈ ಸಿನಿಮಾ ಹೆಚ್ಚಿನ ಗಮನ ಸೆಳೆದಿದೆ.

'ಭೀಮ' ಟೈಟಲ್ ಮೂಲಕವೇ ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ. ದುನಿಯ ವಿಜಯ್ ಈ ಟೈಟಲ್ ಮೂಲಕ ಮತ್ತೊಂದು ರೋಚಕ ಕಥೆಯನ್ನು ಹೇಳುವುದರಲ್ಲಿ ಅನುಮಾನವಿಲ್ಲ. ದುನಿಯಾ ವಿಜಯ್ ತೆಲುಗಿನಲ್ಲಿ ಬ್ಯುಸಿ ಆಗಿದ್ದರಿಂದ 'ಭೀಮ' ತಡವಾಗಬಹುದು ಎನ್ನಲಾಗಿತ್ತು. ಅದರೆ ಈಗ ಚಿತ್ರದ ಕೆಲಸಗಳು ಆರಂಭ ಆಗಿವೆ.

ಬೆಂಗಳೂರಿನಲ್ಲಿ 'ಭೀಮ' ಚಿತ್ರದ ಮುಹೂರ್ತ ನೆರವೇರಿದೆ. ಚಿತ್ರದ ಕೆಲಸಗಳು ಇನ್ನು ಮುಂದೆ ಭರದಿಂದ ಸಾಗಲಿವೆ. ಈ ಚಿತ್ರದ ಶೂಟಿಂಗ್ ಬಗ್ಗೆ, ರಿಲೀಸ್ ಬಗ್ಗೆ, ಪಾತ್ರ ವರ್ಗದ ಬಗ್ಗೆ, ಪಾತ್ರದ ಬಗ್ಗೆ ನಟ ದುನಿಯಾ ವಿಜಯ್ ಮಾತನಾಡಿದ್ದರೆ. ಮುಂದೆ ಓದಿ....

'ಭೀಮ' ಚಿತ್ರದ ಬಗ್ಗೆ ದುನಿಯಾ ವಿಜಯ್!

ನಟ ದುನಿಯಾ ವಿನಯ್ 'ಭೀಮ' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಭೀಮ ಸಿನಿಮಾ ಬಗ್ಗೆ ದುನಿಯಾ ವಿಜಯ್ ಹೇಳಿದ್ದಿಷ್ಟು, "ಸಲಗ ಚಿತ್ರವನ್ನು ನೋಡಿದ ಅಭಿಮಾನಿಗಳಿಗೆ ಯಾವುದೆ ರೀತಿಯ ಬೇಸರ ಆಗದ ಎಂಟರ್ಟೈನ್‌ಮೆಂಟ್, ಭೀಮ ಒಂದು ಒಳ್ಳೆಯ ಸಂದೇಶ ಹೇಳುತ್ತದೆ. ಒಳ್ಳೆಯ ವಿಷ್ಯವನ್ನು ಮನೋರಂಜನೆ ಮೂಲಕ ಭೀಮ ಹೇಳಲಿದ್ದಾನೆ" ಎಂದಿದ್ದಾರೆ.

ಸಂದೇಶ ಹೊತ್ತು ಬರ್ತಿದ್ದಾನೆ 'ಭೀಮ'!

ಸಂದೇಶ ಹೊತ್ತು ಬರ್ತಿದ್ದಾನೆ 'ಭೀಮ'!

ಇನ್ನು ಭೀಮ ಚಿತ್ರದ ಕತೆಯ ಬಗ್ಗೆ ಹೇಳಿದ ದುನಿಯಾ ವಿಜಯ್ "ಒಂದಷ್ಟು ನೈಜ ಘಟನೆಗಳು ಮತ್ತು ವ್ಯಕ್ತಿಗಳ ಅನುಭವವ ಚಿತ್ರದಲ್ಲಿ ಇರುತ್ತದೆ. ಆದರೆ ನಿಜವಾದ ವ್ಯಕ್ತಿಗಳ ಪರಿಚಯ ಮಾಡಲು ಅವಕಾಶ ಇಲ್ಲ. ಆದರೆ ನಾನೇ ಅವರ ವ್ಯಥೆಗಳನ್ನು ಶೂಟ್ ಮಾಡಿದ್ದೇನೆ. ಇಂತಹ ಘಟನೆಗಳ ಆಧಾರದ ಮೇಲೆ ಭೀಮ ತಯಾರಾಗುತ್ತದೆ. ಶೂಟಿಂಗ್ ಈಗಲೇ ಶುರುವಾಗುತ್ತದೆ. ಆದರೆ ನನ್ನ ಪಾತ್ರದ ಚಿತ್ರೀಕರಣ ಇನ್ನು ತಡವಾಗಿ ಶುರುವಾಗಲಿದೆ." ಎಂದು ದುನಿಯಾ ವಿಜಯ್ ಸುದ್ದಿಗೋಷ್ಟಿಯಲ್ಲಿ ಹೇಳಿಕೊಂಡಿದ್ದಾರೆ.

'ಭೀಮ' ಚಿತ್ರಕ್ಕೆ ನೈಜ ಘಟನೆಗಳೇ ಆಧಾರ!

'ಭೀಮ' ಚಿತ್ರಕ್ಕೆ ನೈಜ ಘಟನೆಗಳೇ ಆಧಾರ!

'ಸಲಗ' ಚಿತ್ರದಲ್ಲಿ ರೌಡಿಸಂ ಹಿನ್ನೆಲೆಯಲ್ಲಿ ಕಥೆಯನ್ನು ಹೆಣೆಯಲಾಗಿತ್ತು. ಇದರೊಂದಿಗೆ ಒಂದು ಸಂದೇಶವನ್ನೂ ನೀಡುವ ಪ್ರಯತ್ನ ಮಾಡಿದ್ದರು. ಈಗ ಎರಡನೇ ಸಿನಿಮಾ ನಿರ್ದೇಶನಕ್ಕೆ ಅಣಿಯಾಗುತ್ತಿದ್ದಾರೆ. 'ಭೀಮ' ಕೂಡ ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಮೂಲಕ ಕಥೆಯ ಬಗ್ಗೆ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಟ್ಟಿದೆ. ಸದ್ಯ ದುನಿಯಾ ವಿಜಯ್ ಚಿತ್ರದ ಬಗ್ಗೆ ಆಡಿರುವ ಮಾತುಗಳು ಕೂಡ ಕುತೂಹಲ ಹುಟ್ಟು ಹಾಕಿವೆ.

ತೆಲುಗು ಚಿತ್ರದಲ್ಲಿ ದುನಿಯಾ ವಿಜಯ್ ಅಭಿನಯ!

ತೆಲುಗು ಚಿತ್ರದಲ್ಲಿ ದುನಿಯಾ ವಿಜಯ್ ಅಭಿನಯ!

ದುನಿಯಾ ವಿಜಯ್ ಟಾಲಿವುಡ್ ಲೆಜೆಂಜ್ ಬಾಲಕೃಷ್ಣ ನಟಿಸುತ್ತಿರುವ 107ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ದುನಿಯಾ ವಿಜಯ್ ತೆಲುಗು ಮುಗಿದ ಬಳಿಕವೇ 'ಭೀಮ' ಸಿನಿಮಾದಲ್ಲಿ ಅಭಿನಯದ ಶುರು ಮಾಡಲಿದ್ದಾರೆ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಬೇರೆ ಪಾತ್ರಗಳ ಚಿತ್ರೀಕರಣವನ್ನು ಚಿತ್ರತಂಡ ಆರಂಭಿಸಿದೆ.

More from Filmibeat

English summary
Duniya Vijay Starrer And Directional Bheema Movie Launched Officialy,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X