"ಇನ್ನು ಜಾಸ್ತಿ ನಿರೀಕ್ಷಿಸಿದ್ದೆ.. ಆದ್ರು ಸಿನ್ಮಾ ಹಿಟ್ ಆಗೋದು ಪಕ್ಕಾ"; 'ಭೀಮ' ಟ್ರೈಲರ್ ಟ್ವಿಟರ್ ವಿಮರ್ಶೆ

ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ 'ಭೀಮ' ಸಿನಿಮಾ ಟ್ರೈಲರ್ ಸದ್ದು ಮಾಡ್ತಿದೆ. ಆಗಸ್ಟ್ 9ಕ್ಕೆ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಾಗಲೇ ಸಾಂಗ್ಸ್ ಹಿಟ್ ಆಗಿ ಗಮನ ಸೆಳೆದಿದ್ದ 'ಭೀಮ' ಟ್ರೈಲರ್‌ನಿಂದ ಮತ್ತಷ್ಟು ಕುತೂಹಲ ಮೂಡಿಸಿದ್ದಾನೆ.

ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ 'ಭೀಮ' ಚಿತ್ರವನ್ನು ನಿರ್ಮಿಸಿದ್ದಾರೆ. ಬೆಂಗಳೂರಿನ ಈ ಜಮಾನದ ಭೂಗತಲೋಕದ ಕಥೆಯನ್ನು ವಿಜಿ ಚಿತ್ರದಲ್ಲಿ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಕತ್ತಿ ಹಿಡಿದು ದುಷ್ಟರ ವಿರುದ್ಧ ಅಬ್ಬರಿಸಿದ್ದಾರೆ. 'ಸಲಗ' ಚಿತ್ರದ ಫೀಲ್ ಅನ್ನೇ ಈ ಸಿನಿಮಾ ಕೂಡ ಕೊಡುವಂತಿದೆ.

Duniya Vijay starrer Bheema trailer Twitter review

ಚರಣ್ ರಾಜ್ ಸಂಗೀತ, ಶಿವ ಸೇನಾ ಛಾಯಾಗ್ರಹಣ ಹಾಗೂ ಮಾಸ್ತಿ ಸಂಭಾಷಣೆ 'ಭೀಮ' ಚಿತ್ರಕ್ಕಿದೆ. ಬೆಂಗಳೂರಿನಲ್ಲೇ ಬಹುತೇಕ ಸಿನಿಮಾ ಚಿತ್ರೀಕರಣ ನಡೆದಿದೆ. ನಗರದ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ವಿಜಯ್ ಅಂಡ್ ಟೀಂ ಸಿನಿಮಾ ಸೆರೆ ಹಿಡಿದಿರುವುದು ಗೊತ್ತಾಗುತ್ತದೆ.

ದುನಿಯಾ ವಿಜಯ್ ಜೊತೆಗೆ ಡ್ರ್ಯಾಗನ್ ಮಂಜು, ಅಚ್ಯುತ್‌ ಕುಮಾರ್, ರಮೇಶ್ ಇಂದಿರಾ, ಗೋಪಾಲಕೃಷ್ಣ ದೇಶಪಾಂಡೆ ಚಿತ್ರದ ತಾರಾಗಣದಲ್ಲಿದ್ದಾರೆ. ಹೊಸ ಪ್ರತಿಭೆ ಅಶ್ವಿನಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಟ್ರೈಲರ್ ನೋಡಿದವರು ಎಕ್ಸ್ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ವಿಜಿ ಪ್ರಯತ್ನಕ್ಕೆ ಚಪ್ಪಾಳೆ

"ಡ್ರಗ್ಸ್, ಪಾರ್ಟಿ, ಡ್ರಿಂಕ್ಸ್, ಸ್ಮೋಕ್, ಸೆಕ್ಸ್, ಇತ್ಯಾದಿ" ಎನ್ನುವ ಇಂದಿನ ಯುವಕರ ದೌರ್ಬಲ್ಯಗಳ ಲಾಭವನ್ನು ಭೂಗತ ಜಗತ್ತಿನವರು ಹೇಗೆ ಪಡೆದುಕೊಳ್ಳುತ್ತಿದ್ದಾರೆ. ಇದನ್ನೇ ವ್ಯಾಪಾರ ಮಾಡಿಕೊಂಡು ಅವರನ್ನು ಹಾಳು ಮಾಡುತ್ತಿದ್ದಾರೆ. ಪೊಲೀಸರು ಹಾಗೂ ಇಂತಹ ಗ್ಯಾಂಗ್‌ ನಡುವಿನ ಹೋರಾಟದ ನಡುವೆ ವಿಜಯ್ ಪಾತ್ರ ಏನು? ಎನ್ನುವುದೇ ಸಿನಿಮಾ ಎನಿಸುತ್ತಿದೆ. ನಿರ್ದೇಶಕರಾಗಿ ಇಂತಹ ಕಥೆ ಆಯ್ಕೆ ಮಾಡಿಕೊಂಡಿದ್ದಕ್ಕೆ ದುನಿಯಾ ವಿಜಯ್ ನಿಮಗೆ ಚಪ್ಪಾಳೆ ಎಂದು ನೂತನ್ ಎಂಬುವವರು ಬರೆದುಕೊಂಡಿದ್ದಾರೆ.

100% ಸಿನಿಮಾ ಹಿಟ್ ಕನ್ಫರ್ಮ್

'ಭೀಮಾ' 100% ರಷ್ಟು ಬೆರಗುಗೊಳಿಸುತ್ತದೆ. ಕ್ರಿಂಜ್ ಅಥವಾ ಮತ್ತೇನೋ ಆಗಿದ್ದರೂ... ಇದು ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆತರುತ್ತದೆ. 100% ಪಕ್ಕಾ ಹಿಟ್ ಆಗೋದು ಕನ್ಫರ್ಮ್" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ವಿಜಿ ನಿರ್ದೇಶನದ ಮೇಲೆ ಭರವಸೆ

ಟ್ರೈಲರ್ ಕಟ್ ಇಷ್ಟವಾಗಿಲ್ಲ ಎಂದು ನನಗೆ ಗೊತ್ತು. ಆದರೆ ನನಗೆ ಚರಣ್ ರಾಜ್ ಸಂಗೀತ ಮತ್ತು ದುನಿಯಾ ವಿಜಯ್ ನಿರ್ದೇಶನದ ಮೇಲೆ ಭರವಸೆ ಇದೆ. ಭೀಮಾ ಆಗಸ್ಟ್ 9 ರಂದು ಗ್ರ್ಯಾಂಡ್ ರಿಲೀಸ್ ಆಗುತ್ತಿದೆ" ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಇನ್ನು ಹೆಚ್ಚು ನಿರೀಕ್ಷಿಸಿದ್ದೆ

ಮೀಟ್ ರು ಕಿಲೋಮೀಟರ್ ಗಟ್ಲೆ ಐಯ್ತೆ, ಹೇಳೋ ಲೋ ಜುಟ್ಟು... ಮಾಸ್ ಡೈಲಾಗ್, ಮಾಸ್ ಮ್ಯೂಸಿಕ್.. ಸೈಕ್ ಸೈಕ್" ಎಂದು ಲೋಕೇಶ್ ಎಂಬುವವರು ಟ್ವೀಟ್ ಮಾಡಿದ್ದಾರೆ. ದುನಿಯಾ ವಿಜಯ್ 'ಜುಟ್ಟು' ಡೈಲಾಗ್ ಇಲ್ಲದೆ ಸಿನಿಮಾ ಮಾಡಬೇಡಿ. ಟ್ರೈಲರ್ ಮಾಸ್ ಆಗಿದೆ. ಆದರೆ ಇನ್ನು ಹೆಚ್ಚು ನಿರೀಕ್ಷಿಸಿದ್ದೆ ಎಂದು ವರುಣ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.

100% ಪಕ್ಕಾ ಸಿನ್ಮಾ ನೋಡ್ತೀನಿ

'ಭೀಮ' ಟ್ರೈಲರ್ ರಾ & ರಗಡ್ ಆಗಿದೆ. ಫೈಟ್ಸ್‌ ಬೆಂಕಿ. ಅಚ್ಯುತ್‌ ಕುಮಾರ್, ಗೋಪಾಲ ದೇಶಪಾಂಡೆ ಹಾಗೂ ರಮೇಶ್ ಇಂದಿರಾ ಅವರನ್ನ ವಿಜಿ ಹೇಗೆ ಬಳಸಿಕೊಂಡಿದ್ದಾರೆ ನೋಡಬೇಕು. 100% ಪಕ್ಕಾ ಸಿನಿಮಾ ನೋಡ್ತೀನಿ ಎಂದು ಪ್ರಜ್ವಲ್ ಎಂಬುವವರು ತಿಳಿಸಿದ್ದಾರೆ.

More from Filmibeat

English summary
Bheema Trailer talk: Netizens Hail Duniya Vijay Action-Thriller
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X