ಲಾಕ್‌ಡೌನ್‌ ಬಳಿಕ ಮಲೆನಾಡಿನಲ್ಲಿ ಶೂಟಿಂಗ್ ಆರಂಭಿಸಿದ 'ಸಲಗ'

ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ನಾಲ್ಕೈದು ತಿಂಗಳಿನಿಂದ ಚಿತ್ರೀಕರಣ ಸಂಪೂರ್ಣ ಸ್ಥಗಿತಗೊಂಡಿತ್ತು. ದೇಶಾದ್ಯಂತ ಅನ್‌ಲಾಕ್‌ ಪ್ರಕ್ರಿಯೆ ಶುರುವಾದ್ಮೇಲೆ ಸಿನಿಮಾ ಶೂಟಿಂಗ್ ಮಾಡುವುದಕ್ಕೂ ಅನುಮತಿ ಸಿಕ್ಕಿದೆ.

Recommended Video

Upendra as college student I love you behind the scenes | Filmibeat Kannada

ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾದ ಚಿತ್ರೀಕರಣಕ್ಕೆ ಮರು ಚಾಲನೆ ನೀಡಲಾಗಿದೆ.

ಕೊರೊನಾ ವೈರಸ್ ಹಿನ್ನೆಲೆ ಮುಂಜಾಗ್ರತೆ ತಗೆದುಕೊಂಡು, ಸರ್ಕಾರದ ಎಲ್ಲಾ ಸೂಚನೆಗಳನ್ನು ಪಾಲಿಸಿ ಮಲೆನಾಡಿನ ಮಳೆಯಲ್ಲಿ ಸಲಗ ಚಿತ್ರದ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ನಾಯಕ ನಾಯಕಿ ಸೇರಿ ಕೇವಲ 12 ಮಂದಿ ತಂತ್ರಜ್ಞರು ಮಾತ್ರ ಈ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Duniya Vijay starts shooting of Salaga In Malenadu

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಹಾಸನ, ಸಕಲೇಶಪುರ ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಸಲಗ ಶೂಟಿಂಗ್ ಮಾಡಲಾಗಿದೆ. ಛಾಯಾಗ್ರಾಹಕ ಶಿವಸೇನ ಸಲಗ ಸಿನಿಮಾದ ಸುಂದರ ಹಾಡನ್ನು ಸೆರೆಹಿಡಿದಿದ್ದಾರೆ.

ದುನಿಯಾ ವಿಜಯ್ ನಿರ್ದೇಶಿಸಿ ನಟಿಸುತ್ತಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ ಪ್ರಮುಖ‌ ಪಾತ್ರದಲ್ಲಿ‌ ಕಾಣಿಸಿಕೊಂಡಿದ್ದಾರೆ. ಸಂಜನಾ ಆನಂದ್ ನಾಯಕಿಯಾಗಿ‌ದ್ದಾರೆ. ಟಗರು ಖ್ಯಾತಿಯ ಕೆ.ಪಿ ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ.

ಫಸ್ಟ್ ಲುಕ್, ಟೀಸರ್, ಮೇಕಿಂಗ್ ಹಾಗೂ ಹಾಡುಗಳ ಮೂಲಕ ಭಾರಿ ಕುತೂಹಲ ಮೂಡಿಸಿರುವ ಸಲಗ ಸಿನಿಮಾ ಈ ವರ್ಷದ ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಸದ್ಯಕ್ಕೆ ಸಿನಿಮಾ ಚಿತ್ರಮಂದಿರ ತೆರಯವ ಬಗ್ಗೆ ಸರ್ಕಾರ ತೀರ್ಮಾನಿಸಿಲ್ಲ.

More from Filmibeat

English summary
After coronavirus lockdown, Kannada actor-director Duniya Vijay has starts shooting of Salaga In Malenadu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X