ತಂದಿಟ್ಟು ತಮಾಷೆ ನೋಡೋರು ದುನಿಯಾ ವಿಜಿ ಹೇಳಿದ್ದನ್ನ ನೋಡಿ
Recommended Video

ದುನಿಯಾ ವಿಜಯ್ ಅಭಿನಯದ 'ಕುಸ್ತಿ' ಟೀಸರ್ ರಿಲೀಸ್ ಆದಾಗನಿಂದಲೂ ಕಿಚ್ಚನ ಫ್ಯಾನ್ಸ್ ಗರಂ ಆಗಿದ್ದರು. 'ಕುಸ್ತಿ' ಟೀಸರ್ ನಲ್ಲಿ ಸುದೀಪ್ ಗೆ ಟಾಂಗ್ ಕೊಡಲಾಗಿದೆ. ಕಿಚ್ಚನ 'ಪೈಲ್ವಾನ್' ಚಿತ್ರವನ್ನ ಅಣುಕಿಸಲಾಗಿದೆ ಸುದೀಪ್ ಅಭಿಮಾನಿಗಳು ಎಂದೆಲ್ಲ ಬೇಸರ, ಆಕ್ರೋಶ ಹೊರಹಾಕಿದ್ದರು.
ಈ ವಿವಾದಕ್ಕೆ ಸ್ವತಃ ಸುದೀಪ್ ಅವರೇ ಮಧ್ಯ ಪ್ರವೇಶಿಸಿ 'ಇದನ್ನ ಇಲ್ಲಿಗೆ ನಿಲ್ಲಿಸಿ, ಇದೆಲ್ಲವೂ ಸರಿಯಿಲ್ಲ' ಎಂದಿದ್ದರು. ಮತ್ತೊಂದೆಡೆ ದುನಿಯಾ ವಿಜಯ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಈ ವಿವಾದಕ್ಕೆ ಅಂತ್ಯವಾಡಿದ್ದಾರೆ.
ನಿಜ ಹೇಳ್ಬೇಕಂದ್ರೆ ಸುದೀಪ್ ಮತ್ತು ದುನಿಯಾ ವಿಜಯ್ ಚೆನ್ನಾಗಿದ್ದಾರೆ. 'ಕುಸ್ತಿ' ಟೀಸರ್ ಬಗ್ಗೆ ಸುದೀಪ್, 'ಪೈಲ್ವಾನ್' ಚಿತ್ರದ ಬಗ್ಗೆ ವಿಜಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಹೀಗಿದ್ದರೂ, ಕೆಲವರು ಸುಮ್ ಸುಮ್ಮನೇ ಟಾಂಗ್, ಫೈಟ್, ಸ್ಟಾರ್ ವಾರ್ ಅಂತೆಲ್ಲಾ ತಂದಿಟ್ಟು ತಮಾಷೆ ನೋಡ್ತಾರೆ. ಅಷ್ಟಕ್ಕೂ, ಈ ವಿವಾದದ ಬಗ್ಗೆ ವಿಜಿ ಏನಂದ್ರು.? ಮುಂದೆ ಓದಿ....

ಸುದೀಪ್ ಬಗ್ಗೆ ಗೌರವವಿದೆ
''ಸುದೀಪ್ ಮೇಲೆ ನನಗೆ ಗೌರವವಿದೆ ಯಾರನ್ನೂ ನೋಯಿಸುವ ಉದ್ದೇಶವಿಲ್ಲ. 'ಕುಸ್ತಿ' ಟೀಸರ್ನಲ್ಲಿ ಬರುವ ಸಂಭಾಷಣೆ ಸಂದರ್ಭ, ಯಾರನ್ನೂ ಉಲ್ಲೇಖಿಸುತ್ತಿಲ್ಲ. ಸಾಮ್ರಾಟ್ ಒಂದು ಪಾತ್ರ ವಹಿಸುತ್ತಿದ್ದ. ದಯವಿಟ್ಟು ಗುರಿಯಾಗಿಸುವುದನ್ನು ನಿಲ್ಲಿಸಿ. ಯಾವುದೇ ಅರ್ಥದಲ್ಲಿ ತೆಗೆದುಕೊಳ್ಳಬೇಡಿ ಎಂದು ನಾನು ಅಭಿಮಾನಿಗಳಿಗೆ ವಿನಂತಿಸುತ್ತೇನೆ ಪೈಲ್ವಾನ್ಗೆ ಶುಭವಾಗಲಿ'' ಎಂದು ವಿಜಿ ಟ್ವೀಟ್ ಮಾಡಿದ್ದಾರೆ.

ಅದನ್ನೇ ಸುದೀಪ್ ಕೂಡ ಹೇಳಿದ್ದು
ಇನ್ನು ಸುದೀಪ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ''ಪೈಲ್ವಾನ್ ಅನ್ನು ಪೈಲ್ವಾನ್ ಅಂತಾನೆ ಕರೆಯುತ್ತಾರೆ. ನಮ್ಮ ಸಿನಿಮಾಗೆ ಅದನ್ನು ಲಿಂಕ್ ಮಾಡುವುದು ಹೇಗೆ. ನಿಮ್ಮ ಅಭಿಪ್ರಾಯಗಳನ್ನು ನಾನು ಗೌರವಿಸುತ್ತೇನೆ. ನನ್ನ ಪ್ರಕಾರ ಇದು ಮುಂದುವರೆದರೆ ಚೆನ್ನಾಗಿರುವುದಿಲ್ಲ. ಜೊತೆಗೆ ದುನಿಯಾ ವಿಜಿ ಅವರ 'ಕುಸ್ತಿ' ಸಿನಿಮಾ ಟೀಸರ್ ಅನ್ನು ಗೌರವಿಸುತ್ತೇನೆ. ಹಾಗೇ ಚಿತ್ರಕ್ಕೆ ಒಳ್ಳೆದಾಗಲಿ ಎಂದು ತಿಳಿಸುತ್ತೇನೆ" ಎಂದು ಸುದೀಪ್ ಟ್ವೀಟ್ ಮಾಡಿದ್ದರು.

ಇಲ್ಲಸಲ್ಲದ ಕಲ್ಪನೆ ಯಾಕೆ.?
ಮಾಸ್ ಸಿನಿಮಾಗಳು ಅಂದ್ಮೇಲೆ ಪಂಚಿಂಗ್ ಡೈಲಾಗ್ ಗಳು ಬರೆಯವುದು ಸಾಮಾನ್ಯ. ಪ್ರೇಕ್ಷಕರನ್ನ ಸೆಳೆಯುವುದಕ್ಕಾಗಿ ಟೀಸರ್, ಟ್ರೈಲರ್ ನಲ್ಲಿ ಈ ರೀತಿ ಜಬರ್ ದಸ್ತ್ ಡೈಲಾಗ್ ಗಳನ್ನ ಬಳಸುತ್ತಾರೆ. ಆದ್ರೆ, ಇಂತಹ ಸಂಭಾಷಣೆಯನ್ನ ಒಬ್ಬರಲ್ಲ ಒಬ್ಬರು ನಟರಿಗೆ ಲಿಂಕ್ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ವಿವಾದ ಹುಟ್ಟಿಸುವುದು ಕೆಲವರ ಹವ್ಯಾಸವಾಗಿದೆ.

ಅಭಿಮಾನಿಗಳು ಯೋಚನೆ ಮಾಡಬೇಕಿದೆ
ಇಂತಹ ಘಟನೆಗಳು ಇದೇ ಮೊದಲಲ್ಲ. ಇದಕ್ಕೂ ಮುಂಚೆಯೇ ಕೂಡ ಹಲವು ನಟರ ಮಧ್ಯೆ ಡೈಲಾಗ್ ಕೌಂಟರ್, ಟಾಂಗ್ ಅಂತೆಲ್ಲ ಸುದ್ದಿಯಾಗಿದೆ. ಕೊನೆಗೆ ಸ್ವತಃ ಕಲಾವಿದರೇ 'ನಾವು ಚೆನ್ನಾಗಿದ್ದೀವಿ, ನೀವು ಸುಮ್ಮನೀರಿ' ಎಂದು ಹೇಳ್ತಾರೆ. ಇದು ಗೊತ್ತಿದ್ದರೂ ಯಾರೂ ಕೆಲವರು ಹುಟ್ಟುಹಾಕುವ ವಿವಾದವನ್ನ ಹಾಲೆರೆದು ದೊಡ್ಡದು ಮಾಡುವುದು ಆಯಾ ನಟರ ಕಲಾವಿದರು. ಹೀಗಾಗಿ, ಇಂತಹ ಸಣ್ಣ-ಪುಟ್ಟ ವಿಷ್ಯಗಳನ್ನ ಅಲ್ಲಿಗೆ ಬಿಟ್ಟು ಬಿಡುವುದು ಒಳ್ಳೆಯದು. ಸಿನಿಮಾ ಕೇವಲ ಸಿನಿಮಾ ಮಾತ್ರ.


Click it and Unblock the Notifications











