twitter
    For Quick Alerts
    ALLOW NOTIFICATIONS  
    For Daily Alerts

    ಅಭಿಮಾನಿಗಳು ಬೀದಿಗೆ ಇಳಿದರೆ ಕತೆ ಬೇರೆಯಾಗುತ್ತೆ: ದುನಿಯಾ ವಿಜಯ್ ಎಚ್ಚರಿಕೆ

    |

    ಚಿತ್ರಮಂದಿರಗಳ ಮೇಲೆ ಹಠಾತ್ ನಿರ್ಭಂದ ಹೇರಿರುವ ಸರ್ಕಾರದ ನಿರ್ಧಾರದ ಬಗ್ಗೆ ಭಾರಿ ಆಕ್ರೋಶ ಚಿತ್ರರಂಗದಿಂದ ವ್ಯಕ್ತವಾಗುತ್ತಿದೆ.

    ಪುನೀತ್ ರಾಜ್‌ಕುಮಾರ್, ರಕ್ಷಿತ್ ಶೆಟ್ಟಿ ಇನ್ನೂ ಹಲವು ನಿರ್ದೇಶಕ ನಿರ್ಮಾಪಕರು ಈಗಾಗಲೇ ಸರ್ಕಾರದ ನಿರ್ಧಾರದ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇದೀಗ ನಟ ದುನಿಯಾ ವಿಜಯ್ ಅವರು ಸಹ ಸರ್ಕಾರದ ಆದೇಶವನ್ನು ಕಠುವಾಗಿ ಟೀಕಿಸಿದ್ದಾರೆ.

    ದಾವಣಗೆರೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದುನಿಯಾ ವಿಜಯ್, 'ರಾಜಕೀಯ ಸಭೆಗಳಿಗೆ, ಚುನಾವಣೆ ಪ್ರಚಾರಗಳಿಗೆ ಇಲ್ಲದ ನಿರ್ಬಂಧ ಚಿತ್ರಮಂದಿರಗಳಿಗೆ ಏಕೆ? ಕುಟುಂಬವೆಲ್ಲಾ ಕೂತು ನೋಡಬಹುದಾದ ಸಿನಿಮಾ ಮಾಡಿದ್ದಾರೆ ಪುನೀತ್ ರಾಜ್‌ಕುಮಾರ್. ಅವರ ಸಿನಿಮಾಕ್ಕೆ ತೊಂದರೆ ಆಗಿದೆ. ಎರಡು ದಿನ ಮುಂಚೆ ಸರ್ಕಾರ ಈ ವಿಷಯ ಹೇಳಿದ್ದರೆ ಸಿನಿಮಾವನ್ನು ಬಿಡುಗಡೆಯೇ ಮಾಡುತ್ತಿರಲಿಲ್ಲ ಅವರು' ಎಂದಿದ್ದಾರೆ ದುನಿಯಾ ವಿಜಯ್.

    ಪುನೀತ್ ರಾಜ್‌ಕುಮಾರ್ ಸರ್ಕಾರದ ಪರ ನಿಂತಿದ್ದರು: ದುನಿಯಾ ವಿಜಯ್

    ಪುನೀತ್ ರಾಜ್‌ಕುಮಾರ್ ಸರ್ಕಾರದ ಪರ ನಿಂತಿದ್ದರು: ದುನಿಯಾ ವಿಜಯ್

    ''ಕೊರೊನಾ ಸಂಕಷ್ಟದ ಸಮಯದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಸರ್ಕಾರಕ್ಕೆ 50 ಲಕ್ಷ ಹಣವನ್ನು ದೇಣಿಗೆ ನೀಡಿ ಸಂಕಷ್ಟದ ಸಮಯದಲ್ಲಿ ಸರ್ಕಾರದ ಜೊತೆಗೆ ನಿಂತಿದ್ದರು. ಅವರ ಸಿನಿಮಾಕ್ಕೆ ಅನ್ಯಾಯವಾಗಿದೆ. ದಯವಿಟ್ಟು ಪಕ್ಷಪಾತ ಮಾಡದೆ ಚಿತ್ರಮಂದಿರಗಳಿಗೆ ಪೂರ್ಣ ಅವಕಾಶ ನೀಡಿ. ನಾವು ಎಲ್ಲ ನಿಯಮಗಳನ್ನೂ ಪಾಲಿಸುತ್ತೇವೆ' ಎಂದಿದ್ದಾರೆ ದುನಿಯಾ ವಿಜಯ್.

    'ಅಭಿಮಾನಿಗಳು ಹೋರಾಟಕ್ಕೆ ನಿಂತರೆ ಕತೆ ಬೇರೆಯಾಗುತ್ತದೆ'

    'ಅಭಿಮಾನಿಗಳು ಹೋರಾಟಕ್ಕೆ ನಿಂತರೆ ಕತೆ ಬೇರೆಯಾಗುತ್ತದೆ'

    ''ಸರ್ಕಾರದ ಈ ದಿಢೀರ್ ಆದೇಶ ಚಿತ್ರರಂಗಕ್ಕೆ ಮಾಡಿದ ಅನ್ಯಾಯ. ಬೇರೆಡೆ ಇಲ್ಲದ ನಿಯಮಗಳು ಚಿತ್ರಮಂದಿರಗಳಲ್ಲಿ ಮಾತ್ರ ಏಕೆ? ಎಲ್ಲ ನಟರ ಅಭಿಮಾನಿಗಳು ಹೋರಾಟಕ್ಕೆ ನಿಂತರೆ ಕತೆ ಬೇರೆಯಾಗಿಬಿಡುತ್ತದೆ' ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ ದುನಿಯಾ ವಿಜಯ್.

    ಎಲ್ಲ ನಿಯಮ ಪಾಲಿಸುತ್ತೇವೆ ಅವಕಾಶ ಕೊಡಿ: ದುನಿಯಾ ವಿಜಯ್ ಮನವಿ

    ಎಲ್ಲ ನಿಯಮ ಪಾಲಿಸುತ್ತೇವೆ ಅವಕಾಶ ಕೊಡಿ: ದುನಿಯಾ ವಿಜಯ್ ಮನವಿ

    ಯಾರೂ ಸಹ ಇಲ್ಲಿ ಅಜಾಗರೂಕರಲ್ಲ. ಎಲ್ಲರೂ ಜಾಗರೂಕತೆ ವಹಿಸಿಯೇ ಕೆಲಸ ಮಾಡುತ್ತಿದ್ದೇವೆ. ಚಿತ್ರಮಂದಿರಗಳು ಸ್ಯಾನಿಟೈಸ್ ಮಾಡಿಯೇ ಪ್ರೇಕ್ಷಕರನ್ನು ಒಳಗೆ ಬಿಡುತ್ತಿವೆ. ಸಿನಿಮಾ ತಂಡವರೇ ಬೇಕಾದರೆ ಪ್ರೇಕ್ಷಕರಿಗೆ ಮಾಸ್ಕ್ ವಿತರಿಸುತ್ತೇವೆ ಎಲ್ಲ ನಿಯಮಗಳನ್ನೂ ಪಾಲಿಸುತ್ತೇವೆ ದಯವಿಟ್ಟು ಚಿತ್ರಮಂದಿರಗಳಿಗೆ ಪೂರ್ಣ ಅವಕಾಶ ಕೊಡಿ ಎಂದರು ದುನಿಯಾ ವಿಜಯ್.

    Recommended Video

    ಪುನೀತ್ ರಾಜ್ ಕುಮಾರ್ ಮನವಿಗೆ ಸಚಿವ ಸುಧಾಕರ್ ಖಡಕ್ ಪ್ರತಿಕ್ರಿಯೆ | Filmibeat Kannada
    ಹಲವು ಸಿನಿಮಾಗಳು ಬಿಡುಗಡೆಗೆ ಕಾದಿವೆ

    ಹಲವು ಸಿನಿಮಾಗಳು ಬಿಡುಗಡೆಗೆ ಕಾದಿವೆ

    ಸರ್ಕಾರದ ಹೊಸ ಆದೇಶದಿಂದ ಗುರುವಾರ ಬಿಡುಗಡೆ ಆಗಿದ್ದ 'ಯುವರತ್ನ' ಸಿನಿಮಾ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಸಲಗ' ಸಿನಿಮಾ ಏಪ್ರಿಲ್ 15 ಕ್ಕೆ ಬಿಡುಗಡೆ ಆಗಲಿದೆ. ಆ ನಂತರ ಇದೇ ತಿಂಗಳ ಅಂತ್ಯಕ್ಕೆ ಸುದೀಪ್ ನಟನೆಯ 'ಕೋಟಿಗೊಬ್ಬ 3' ಬಿಡುಗಡೆ ಆಗಲಿದೆ. ಮುಂದಿನ ತಿಂಗಳ ಆರಂಭದಲ್ಲಿ ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಬಿಡುಗಡೆ ಆಗಲಿದೆ. ಹೊಸ ಆದೇಶದಿಂದಾಗಿ ಸಿನಿಮಾಗಳ ಬಿಡುಗಡೆ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

    English summary
    Actor Duniya Vijay express his unhappiness over government for restricting theaters from 100% occupancy.
    Saturday, April 3, 2021, 19:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X