For Quick Alerts
  ALLOW NOTIFICATIONS  
  For Daily Alerts

  ರಾಜಕೀಯ ಲಾಭಕ್ಕೆ ಜನರ ಜೀವನದೊಟ್ಟಿಗೆ ಆಟವಾಡಬೇಡಿ: ದುನಿಯಾ ವಿಜಯ್ ಬೇಸರ

  |

  ನಿನ್ನೆಯಷ್ಟೆ ರಾಜ್ಯಸರ್ಕಾರವು ರಾಜ್ಯದಾದ್ಯಂತ ವೀಕೆಂಡ್ ಲಾಕ್‌ಡೌನ್ ಹಾಗೂ ನೈಟ್ ಕರ್ಫ್ಯೂ ಹೇರಿದೆ. ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರರಂಗದ ಹಲವರು ವೀಕೆಂಡ್ ಲಾಕ್‌ಡೌನ್ ಹಾಗೂ ನೈಟ್ ಕರ್ಫ್ಯೂ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  Recommended Video

  ಪ್ಯಾನ್ ಇಂಡಿಯಾ ಸ್ಟಾರ್ ಆಗುವತ್ತ ಗಮನ ಹರಿಸಿದ ದುನಿಯಾ ವಿಜಯ್.

  ಈ ಬಗ್ಗೆ ಮಾತನಾಡಿರುವ ನಟ ದುನಿಯಾ ವಿಜಯ್, ಲಾಕ್‌ಡೌನ್ ಉದ್ದೇಶ ಪ್ರಾಮಾಣಿಕವಾಗಿದ್ದರೆ ಆಗಲಿ, ರಾಜಕೀಯ ದುರುದ್ದೇಶದಿಂದ ಲಾಕ್‌ಡೌನ್ ಮಾಡುವುದಾದರೆ ಖಂಡಿತ ಬೇಡ'' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ''ಲಾಕ್‌ಡೌನ್‌ನಿಂದ ಸಾಮಾನ್ಯ ಜನರಿಗೆ ಬಹಳ ತೊಂದರೆಯಾಗುತ್ತದೆ. ಸಾಮಾನ್ಯರ ಮೇಲೆ ದೊಡ್ಡ ಹೊಡೆತವನ್ನು ಕೊರೊನಾ ಹೊಡೆದಿದೆ. ಸುಮಾರು ಜನಕ್ಕೆ ಸರ್ಕಾರದಿಂದ ಸಲ್ಲಬೇಕಾಗಿದ್ದಾದಂತಹಾ ಹಣವಾಗಲಿ, ಕನಿಷ್ಟ ಅಕ್ಕಿಯಾಗಲಿ ತಲುಪಿಲ್ಲ. ಕೊರೊನಾದಿಂದ, ಲಾಕ್‌ಡೌನ್‌ನಿಂದ ಹೊಡೆತ ತಿಂದಿರುವ ದೊಡ್ಡ ಸಂಖ್ಯೆಯ ಜನ ಇನ್ನೂ ಸುಧಾರಿಸಿಕೊಳ್ಳುತ್ತಿದ್ದಾರೆ. ತುಂಬ ಜನ ಬಡಬಗ್ಗರಿಗೆ ಒದ್ದಾಟವಾಗಿದೆ ಈ ಸಮಯದಲ್ಲಿ ಮತ್ತೆ ಲಾಕ್‌ಡೌನ್ ಅವಶ್ಯಕವಾ? ಎಂಬುದು ಗಮನಿಸಬೇಕಾಗುತ್ತದೆ'' ಎಂದಿದ್ದಾರೆ ದುನಿಯಾ ವಿಜಯ್.

  '' ಸರ್ಕಾರಗಳು ತಮ್ಮ ಅನುಕೂಲಕ್ಕಾಗಿ ಜನರನ್ನು ಬಲಿಪಶು ಮಾಡುವುದು ಬೇಡ. ನಿಮಗೆ ಬೇಕಾದಾಗ ಲಾಕ್‌ಡೌನ್, ಬೇಡದಿದ್ದಾಗ ಅನ್‌ಲಾಕ್ ಮಾಡುವುದು ಬೇಡ. ನಿಮ್ಮನ್ನು ಸ್ಥಿತಿವಂತರು, ಶ್ರೀಮಂತರು ಬೇರೆಯವರು ಇರುವುದಿಲ್ಲ. ರಾಜಕೀಯ ಲಾಭಕ್ಕಾಗಿ ಜನರ ಮೇಲೆ ಕಷ್ಟಗಳನ್ನು ಹೇರಬೇಡಿ'' ಎಂದು ವಿಜಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

  '' ಕೂಲಿ ಮಾಡುವವರು, ಫ್ಯಾಕ್ಟರಿಗೆ ಹೋಗುವವರು ಸಾಕಷ್ಟಿದ್ದಾರೆ. 600 ಜನರಲ್ಲಿ ಮುನ್ನೂರು ಜನರನ್ನಷ್ಟೆ ಕೆಲಸಕ್ಕೆ ಕರೆಸಿಕೊಳ್ಳುತ್ತಾರೆ ಉಳಿದವರ ಕತೆ ಏನು, ಅವರನ್ನು ಸಾಕುವುದು ಯಾರು? ನಾವು ಅದು ಕೊಟ್ಟೆವು, ಇದು ಕೊಟ್ಟೆವು ಎಂದು ಸರ್ಕಾರಗಳು ಹೇಳುತ್ತಿವೆ, ಅದರಲ್ಲಿ 50% ಹೋಗಿದೆ, ಇನ್ನುಳಿದದ್ದು ತಲುಪಿಯೇ ಇಲ್ಲ. ಜನರಿಗೂ ಗೊತ್ತಿದೆ ಯಾರಿಗೆ ಎಷ್ಟು ಅನ್ಯಾಯ ಆಗಿದೆ ಎಂದು'' ಎಂದರು ದುನಿಯಾ ವಿಜಯ್.

  ''ನಾನು ಯಾವ ಸರ್ಕಾರದ ಪರವೂ ಅಲ್ಲ. ಯಾವ ಸರ್ಕಾರವನ್ನು ನಾನು ಟೀಕೆ ಮಾಡುತ್ತಿಲ್ಲ, ಯಾವ ಪಕ್ಷದ ಪರವಾಗಿಯೂ ನಾನು ಇಲ್ಲ. ನಾನು ಜನಸಾಮಾನ್ಯರ ಪರವಾಗಿ ಅಷ್ಟೆ ಮಾತನಾಡುತ್ತಿದ್ದೇನೆ. ಸರ್ಕಾರಕ್ಕೆ ನನ್ನ ಮನವಿ ಇಷ್ಟೆ. ದಯವಿಟ್ಟು ಜನರ ಜೀವನದೊಂದಿಗೆ ಆಟವಾಡಬೇಡಿ'' ಎಂದು ಕೈ ಮುಗಿದರು ದುನಿಯಾ ವಿಜಯ್.

  ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿರುವ ಕಾರಣ ರಾಜ್ಯ ಸರ್ಕಾರವು ನಿನ್ನೆಯಷ್ಟೆ ವಾರಾಂತ್ಯದ ಲಾಕ್‌ಡೌನ್ ಹಾಗೂ ನೈಟ್ ಕರ್ಫ್ಯೂ ವಿಧಿಸಿದೆ. ಜೊತೆಗೆ ಚಿತ್ರಮಂದಿರಗಳಲ್ಲಿ ಸಹ 50% ಆಕ್ಯುಪೆನ್ಸಿಗಷ್ಟೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ವಾರಾಂತ್ಯದ ಲಾಕ್‌ಡೌನ್, ನೈಟ್ ಕರ್ಫ್ಯೂ ಹಾಗೂ ಚಿತ್ರಮಂದಿರದ ಮೇಲೆ ನಿರ್ಬಂಧ ಈ ಮೂರು ಅಂಶಗಳು ಚಿತ್ರರಂಗಕ್ಕೆ ಮಾರಕವೇ ಆಗಿದ್ದು ಚಲನಚಿತ್ರ ವಾಣಿಜ್ಯ ಮಂಡಳಿಯು ಈಗಾಗಲೇ ಸರ್ಕಾರದ ನಿರ್ಣಯಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.

  English summary
  Actor Duniya Vijay express his unhappy with Karnataka government announcing partial lockdown. He said common people should not be suffer from governent's decission.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X