'ಸಲಗ' ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ: ವಿಡಿಯೋ ಕಾಲ್‌ನಲ್ಲಿ ಭಾವುಕರಾದ ವಿಜಯ್
ದುನಿಯಾ ವಿಜಯ್ ಅಭಿಮಾನಿಗಳ ನಟ. ಅಭಿಮಾನಿಗಳ ಕಷ್ಟಗಳಿಗೆ, ಅಭಿಮಾನಕ್ಕೆ ಸ್ಪಂದಿಸುವ ಕಲಾವಿದ. ಅಭಿಮಾನಿಯೊಬ್ಬ ಸಾವಿಗೀಡಾದಾಗ ಖುದ್ದು ತಾವೇ ಹೆಗಲು ಕೊಟ್ಟಿದ್ದರು. ದಂಡ ಕಟ್ಟಲಾಗದೇ ಜೈಲಿನಲ್ಲಿದ್ದ ಕೆಲವು ಕೈದಿಗಳನ್ನು ಬಿಡುಗಡೆಗೊಳಿಸಲು ಸಹಾಯ ಮಾಡಿದ್ದರು. ಹೀಗೆ, ಜನರ ಪರವಾಗಿ ಅನೇಕ ಕೆಲಸಗಳಲ್ಲಿ ತೊಡಗಿಕೊಂಡಿರುವ ದುನಿಯಾ ವಿಜಯ್ ಅಂದ್ರೆ ಅವರ ಅಭಿಮಾನಿಗಳಿಗೂ ಪ್ರಾಣ.
Recommended Video
ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಸಲಗ ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸಿ ಅಭಿಮಾನಿಯೊಬ್ಬ ತನ್ನ ಕೈ ಮೇಲೆ 'ಸಲಗ' ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾನೆ.
ಈ ವಿಷಯ ತಿಳಿದ ದುನಿಯಾ ವಿಜಯ್ ಆ ಅಭಿಮಾನಿ ಹನುಮಂತನಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದರು. ನೆಚ್ಚಿನ ನಟ ವಿಡಿಯೋ ಕಾಲ್ ಮಾಡಿದ್ದನ್ನು ಕಂಡು ಹನುಮಂತು ಆನಂದದ ಕಣ್ಣೀರು ಸುರಿಸಿದ್ದಾನೆ. ಈ ಅಭಿಮಾನಿ ಜೊತೆ ಮಾತನಾಡಿದ ವಿಜಿ ಸಹ ಭಾವುಕರಾದರು.

''ತಮ್ಮ ಅಭಿಮಾನಕ್ಕೆ ಮೂಕನಾಗಿದ್ದೇನೆ ಅಂತ ಕೃತಜ್ಞತೆ ಸಲ್ಲಿದ್ದಾರೆ. ಜೊತೆಗೆ ತಂದೆ ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಿ, ನಿಮಗೆ ಒಳ್ಳೆಯದಾಗುತ್ತೆ'' ಅಂತ ಹನುಮಂತನಿಗೆ ವಿಜಿ ಶುಭ ಹಾರೈಸಿದ್ದಾರೆ.
ಅಂದ್ಹಾಗೆ, ಉತ್ತರ ಕರ್ನಾಟಕ ಮೂಲದ ಹನುಮಂತ ಸದ್ಯ ಗೋವಾದ ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡ್ತಿದ್ದು, ವಿಜಯ ಅವರ ಅಪ್ಪಟ ಅಭಿಮಾನಿಯಾಗಿದ್ದಾನೆ. ವಿಜಯ್ ರಂತೆ ತಂದೆ ತಾಯಿಯನ್ನ ಆರಾಧಿಸುವ ಧ್ಯೇಯವನ್ನ ಹೊಂದಿರುವ ಈ ಅಭಿಮಾನಿ ನೆಚ್ಚಿನ ನಟನ ಸಿನಿಮಾ ಯಶಸ್ವಿಯಾಗಲೆಂದು ಸಲಗ ಟೈಟಲ್ ನ ತನ್ನ ಕೈ ಮೇಲೆ ಟ್ಯಾಟೋ ಹಾಕಿಸಿಕೊಂಡಿರುವುದಾಗಿ ಹೇಳಿದ್ದಾನೆ.

ಇದಕ್ಕೂ ಮುಂಚೆ ವೀರಾಚಾರಿ ಎಂಬ ದುನಿಯಾ ವಿಜಯ್ ಅವರ ಅಭಿಮಾನಿ ಸಲಗ ಚಿತ್ರದ ಶಿಲಾ ಶಾಸನ ರಚಿಸಿದ್ದರು. ಸಲಗ ಸಿನಿಮಾ ಶತದಿನ ಆಚರಿಸಲಿದೆ ಎಂದು ಭವಿಷ್ಯ ನುಡಿದು ಶಾಸನ ರಚಿಸಿ ಉಡುಗೊರೆಯಾಗಿ ನೀಡಿದ್ದರು.
ಇನ್ನು ಸಲಗ ಸಿನಿಮಾ ಕೆಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರದಲ್ಲಿ ದುನಿಯಾ ವಿಜಯ್, ಧನಂಜಯ್, ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಏಪ್ರಿಲ್ 15 ರಂದು ಸಲಗ ಸಿನಿಮಾ ರಿಲೀಸ್ ಆಗುತ್ತಿದೆ.


Click it and Unblock the Notifications











