ಬರ್ತಡೇಗೂ ಮುಂಚೆ ಜೀವದ ಗೆಳೆಯರಿಗೆ ನಮನ ಸಲ್ಲಿಸಿದ ವಿಜಿ

By Bharath Kumar

ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ಗೆ ಇಂದು 44ನೇ ಹುಟ್ಟುಹಬ್ಬ. ಎಲ್ಲ ಚೆನ್ನಾಗಿ ಇದ್ದಿದ್ದರೇ ವಿಜಿ ಹುಟ್ಟುಹಬ್ಬದಲ್ಲಿ ಅವರ ಇಬ್ಬರು ಜೀವದ ಗೆಳೆಯರು ಕೂಡ ಭಾಗಿಯಾಗಿರುತ್ತಿದ್ದರು. ಆದ್ರೆ, ವಿಧಿ ಬಿಡಲಿಲ್ಲ. 2016ರ ನವೆಂಬರ್ ನಲ್ಲಿ ಅನಿಲ್ ಮತ್ತು ಉದಯ್ ಇಬ್ಬರು ತಿಪ್ಪಗೊಂಡನಹಳ್ಳಿಯ ಕೆರೆಯಲ್ಲಿ ದುರಂತ ಸಾವನ್ನಪ್ಪಿದ್ದರು.

ಕಣ್ಣ ಮುಂದೆ ತಮ್ಮ ಇಬ್ಬರು ಗೆಳೆಯರನ್ನ ಕಳೆದಕೊಂಡ ನಟ ವಿಜಿ, ಅವರಿಬ್ಬರಿಗೆ ಚಿರರುಣಿ. ಹೌದು, ವಿಜಿ ತನ್ನ 44ನೇ ಹುಟ್ಟುಹಬ್ಬಕ್ಕು ಮುಂಚಿನ ದಿನ, ಅನಿಲ್ ಮತ್ತು ಉದಯ್ ಇಬ್ಬರ ಸಮಾಧಿ ಬಳಿ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.

ಬನಶಂಕರಿಯಲ್ಲಿರುವ ಸ್ಮಶಾನಕ್ಕೆ ಭೇಟಿ ನೀಡಿದ್ದ ವಿಜಿ, ಅನಿಲ್ ಮತ್ತು ಉದಯ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.

Duniya Vijay Visit to Anil and Uday Buried

ಚಿತ್ರರಂಗದಲ್ಲಿ ಅನಿಲ್, ಉದಯ್ ಮತ್ತು ವಿಜಿ ಮೂವರು ಒಂದೇ ಗೆಳಯರ ಬಳಗ. ಮೂವರು ಇಂಡಸ್ಟ್ರಿಯಲ್ಲಿ ಒಟ್ಟಿಗೆ ಬೆಳೆದವರು. ಕಷ್ಟದ ಸಮಯವನ್ನ ಒಟ್ಟಿಗೆ ಕಳೆದವರು. ವಿಜಿ ನಾಯಕನಾದ್ರು, ಅನಿಲ್ ಮತ್ತು ಉದಯ್ ವಿಲನ್ ಗಳಾದ್ರು. ಆದ್ರೆ, ಇವರ ಸ್ನೇಹ ಮಾತ್ರ ಶಾಶ್ವತವಾಗಿ ಉಳಿದಿತ್ತು.

Duniya Vijay Visit to Anil and Uday Buried

ಕೊನೆಯದಾಗಿ ವಿಜಿ ಅಭಿನಯದ 'ಮಾಸ್ತಿಗುಡಿ' ಚಿತ್ರದಲ್ಲಿ ಮೂವರು ಒಟ್ಟಿಗೆ ಅಭಿನಯಿಸಿದ್ದರು. ಆದ್ರೆ, ಚಿತ್ರದ ಕ್ಲೈಮಾಕ್ಸ್ ದುರಂತದಲ್ಲಿ ಅನಿಲ್ ಮತ್ತು ಉದಯ್ ನೀರುಪಾಲಾಗಬೇಕಾಯಿತು.

More from Filmibeat

English summary
Kannada actor Duniya Vijay has visit to Anil and Uday Buried at banashankari. Anil and Uday died in the mastigudi climax tragedy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X