ಜೈಲಿನ ಬಳಿ ಬಂದಿದ್ದ ನಾಗರತ್ನಗೆ 'ನೋ ಎಂಟ್ರಿ' ಎಂದ ದುನಿಯಾ ವಿಜಯ್
Recommended Video

ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ಮತ್ತು ಕಿಡ್ನ್ಯಾಪ್ ಮಾಡಿರುವ ಪ್ರಕರಣದಲ್ಲಿ ಜೈಲು ಸೇರಿರುವ ನಟ ದುನಿಯಾ ವಿಜಯ್ ಜೈಲಿನಲ್ಲೂ ತಮ್ಮ ಪತ್ನಿ ಜೊತೆಗಿನ ದ್ವೇಷವನ್ನ ಪ್ರದರ್ಶಿಸಿದ್ದಾರೆ.
ಇಂದು ದುನಿಯಾ ವಿಜಯ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ಮಧ್ಯೆ ವಿಜಿ ಅವರ ಪತ್ನಿ ನಾಗರತ್ನ ಅವರು ತಮ್ಮ ಪತಿಯನ್ನ ನೋಡಲು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಗೃಹಕ್ಕೆ ಭೇಟಿ ನೀಡಿದ್ದರು. ಆದ್ರೆ, ನಾಗರತ್ನಗೆ ಪತಿಯ ದರ್ಶನ ಆಗಲಿಲ್ಲ.
ಆರಂಭದಲ್ಲಿ ನಾಗರತ್ನ ಅವರಿಗೆ ಜೈಲಿನ ಒಳಗೆ ಹೋದಲು ಅನುಮತಿ ಸಿಕ್ಕರಲಿಲ್ಲ. ಆದ್ರೂ, ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡು ಅನುಮತಿ ಪಡೆದುಕೊಂಡರು. ಹೀಗಿದ್ದರೂ, ವಿಜಿಯ ದರ್ಶನವಾಗಲಿಲ್ಲ. ಅಷ್ಟಕ್ಕೂ, ನಾಗರತ್ನ ಅವರನ್ನ ವಿಜಯ್ ಯಾಕೆ ಭೇಟಿ ಮಾಡಿಲ್ಲ.? ಮುಂದೆ ಓದಿ.....

ಅಧಿಕಾರಿ ಒಪ್ಪಿದ್ರೂ, ವಿಜಿ ಒಪ್ಪಲಿಲ್ಲ
ದುನಿಯಾ ವಿಜಯ್ ಅವರನ್ನ ನೋಡಲು ಬಂದಿದ್ದ ನಾಗರತ್ನ ಅವರಿಗೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟರೂ, ಸ್ವತಃ ವಿಜಿ ಅನುಮತಿ ನೀಡಲಿಲ್ಲ. ನಾಗರತ್ನ ಅವರನ್ನ ಭೇಟಿ ಮಾಡಲು ನನಗೆ ಇಷ್ಟವಿಲ್ಲ ಎಂದು ಹೇಳುವ ಮೂಲಕ ಅಧಿಕಾರಿಗಳ ಮೂಲಕ ವಿಷ್ಯ ತಿಳಿಸಿದ್ದಾರೆ.

ಚೀಟಿ ಕೊಟ್ಟು ಕಳುಹಿಸಿದ್ದ ವಿಜಿ
ಖುದ್ದು ವಿಜಿ ಅವರೇ ಚೀಟಿ ಮೂಲಕ ನಾಗರತ್ನ ಅವರನ್ನ ಭೇಟಿ ಮಾಡಲು ನನಗೆ ಆಸಕ್ತಿಯಿಲ್ಲ ಎಂದು ಬರೆದು ಕಳುಹಿಸಿದ್ದರು. ಅದನ್ನ ತಂದು ನಾಗರತ್ನ ಅವರ ಬಳಿ ಅಧಿಕಾರಿಗಳು ಕೊಟ್ಟರು. ಅದನ್ನ ನೋಡಿದ ನಾಗರತ್ನ ಬಹಳ ಬೇಸರದಿಂದ ವಾಪಸ್ ಆದರು.

ಕೀರ್ತಿ ಜೊತೆ ಎರಡು ಗಂಟೆ ಕಳೆದ ವಿಜಿ
ಇದಕ್ಕೂ ಮುಂಚೆ ನಿನ್ನೆ ದುನಿಯಾ ವಿಜಯ್ ಅವರನ್ನ ನೋಡಲು ಎರಡನೇ ಪತ್ನಿ ಕೀರ್ತಿ ಗೌಡ ಅವರ ಭೇಟಿ ನೀಡಿದ್ದರು. ಆಗ ಸುಮಾರು ಎರಡು ಗಂಟೆಗಳ ಸಮಯ ವಿಜಿ ಅವರ ಜೊತೆ ಮಾತನಾಡಲು ಅವಕಾಶ ಸಿಕ್ಕಿದೆ. ಇದು ಸಹಜವಾಗಿ ನಾಗರತ್ನ ಅವರಿಗೆ ಬೇಸರ ತಂದಿದೆ.

ಕೌಟುಂಬಿಕ ದ್ವೇಷವೇ ಕಾರಣ
ಇಷ್ಟು ದಿನ ದುನಿಯಾ ವಿಜಯ್ ಅವರ ಕೌಟುಂಬಿಕ ಕಲಹ ತಣ್ಣಗಾಗಿದೆ ಎನ್ನಲಾಗುತ್ತಿತ್ತು. ಆದ್ರೆ, ಇತ್ತೀಚಿಗಷ್ಟೆ ನಡೆದ ಕೆಲ ಬೆಳವಣಿಗೆಗಳ ಮೂಲಕ ಇದು ಮತ್ತೊಂದು ತಿರುವು ಪಡೆದುಕೊಂಡಿದೆ ಎಂಬುದು ಬಹಿರಂಗವಾಗಿದೆ. ವಿಜಯ್ ಅವರ ಇಬ್ಬರು ಪತ್ನಿಯರು ಆರೋಪ ಮತ್ತು ಪ್ರತ್ಯಾರೋಪಗಳ ಮೂಲಕ ಬಹಿರಂಗವಾಗಿ ಜಗಳ ಮಾಡಿಕೊಂಡಿದ್ದಾರೆ.


Click it and Unblock the Notifications











