For Quick Alerts
  ALLOW NOTIFICATIONS  
  For Daily Alerts

  ದುನಿಯಾ ವಿಜಿ ಮೇಲೆ ಹೊಸ ಆರೋಪ ಮಾಡಿದ ನಾಗರತ್ನ

  |
  ದುನಿಯಾ ವಿಜಿ ಮೇಲೆ ಹೊಸ ಆರೋಪ ಮಾಡಿದ ನಾಗರತ್ನ | FILMIBEAT KANNADA

  ನಟ ದುನಿಯಾ ವಿಜಯ್ ಮತ್ತು ಮೊದಲ ಪತ್ನಿ ನಾಗರತ್ನ ನಡುವಿನ ಕೌಟುಂಬಿಕ ಕಲಹ ಮತ್ತೆ ಸುದ್ದಿಯಾಗಿದೆ. 'ನಾಗರತ್ನ ಅವರಿಂದ ವಿಚ್ಛೇದನ ಕೊಡಿಸಿ' ಎಂದು ವಿಜಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

  ಈ ಕಡೆ ನಾಗರತ್ನ ''ನಾನು ಯಾವುದೇ ಕಾರಣಕ್ಕೂ ವಿಜಿಗೆ ವಿಚ್ಛೇದನ ಕೊಡಲ್ಲ, ನನಗೆ ಜೀವನಾಂಶ ಕೊಡ್ತೀನಿ ಅಂತ ಹೇಳಿದ್ರು. ಕಳೆದ ಮೂರ್ನಾಲ್ಕು ತಿಂಗಳಿನಿಂದ ಕೊಟ್ಟಿಲ್ಲ'' ಅಂತ ಹೇಳಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

  ಇಷ್ಟು ದಿನ ಪತಿ ಮತ್ತು ಕೀರ್ತಿ ಗೌಡ ಮೇಲೆ ಆರೋಪ ಮಾಡ್ತಿದ್ದ ನಾಗರತ್ನ ಈಗ ಹೊಸ ಆರೋಪ ಮಾಡಿದ್ದಾರೆ. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ವಿಜಿಯವರ ಮತ್ತೊಂದು ಮನೆಯಿದ್ದು, ವಿಜಿ ಆಪ್ತ ನಿರ್ಮಾಪಕ ಸುಂದರ್​ ಗೌಡ ವಾಸಿಸುತ್ತಿದ್ದಾರೆ. ಆ ಮನೆಯನ್ನು ನಮಗೆ ಗೊತ್ತಿಲ್ಲದಂತೆ ವಿಜಯ್​, ಸುಂದರ್​ ಗೌಡರಿಗೆ ಮಾರಿದ್ದಾರೆ ಎಂದು ನಾಗರತ್ನಾ ದೂರಿದ್ದಾರೆ.

  ದುನಿಯಾ ವಿಜಯ್ ಮನೆಗೆ ನಾಗರತ್ನ ಹೋಗಬಾರದು: ಇದು ಕೋರ್ಟ್ ಆದೇಶ.!

  ಸುಂದರ್ ಪಿ ಗೌಡ ಉಳಿದುಕೊಂಡಿರುವ ಮನೆಯನ್ನ ಖಾಲಿ ಮಾಡಿಸಿ ನಮಗೆ ಕೊಡಿಸಿ ಎಂದು ಮಹಿಳಾ ಆಯೋಗದಲ್ಲಿ ನಾಗರತ್ನ ಮನವಿ ಮಾಡಿಕೊಂಡಿದ್ದಾರೆ.

  ನಾಗರತ್ನರಿಂದ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆಹೋದ ದುನಿಯಾ ವಿಜಯ್.!

  ನಾಗರತ್ನ ಅವರ ದೂರು ಸ್ವೀಕರಿಸಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ''ದುನಿಯಾ ವಿಜಯ್ ಅವರನ್ನ ಕರೆಸಿ ಈ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡ್ತೇವೆ'' ಎಂದು ತಿಳಿಸಿದ್ದಾರೆ.

  English summary
  Kannada actor duniya vijay wife nagarathna meets the chairperson of the women's commission and files complaint against duniya Vijay.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X