ಮಾರುತಿ ಗೌಡ ಆರೋಗ್ಯ ವಿಚಾರಿಸಿದ ವಿಜಿ ಪತ್ನಿ ನಾಗರತ್ನ
Recommended Video

ನಟ ದುನಿಯಾ ವಿಜಯ್ ನಿಂದ ಹಲ್ಲೆಗೆ ಓಳಗಾಗಿದ್ದ ಮಾರುತಿ ಗೌಡ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಈಗ ಅವರ ಆರೋಗ್ಯವನ್ನು ದುನಿಯಾ ವಿಜಯ್ ಪತ್ನಿ ನಾಗರತ್ನ ವಿಚಾರಿಸಿದ್ದಾರೆ.
ಇಂದು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ಆಗಿಮಿಸಿದ್ದ ನಾಗರತ್ನ ಮಾರುತಿ ಗೌಡ ಅವರನ್ನು ನೋಡಿಕೊಂಡು ಹೋಗಿದ್ದಾರೆ. ಈ ವೇಳೆ ನಾಗರತ್ನ ಅವರ ಸಂಪತ್ ಕೂಡ ಜೊತೆಗೆ ಬಂದಿದ್ದರು. ತಮ್ಮ ಪತಿಯಿಂದ ಹಲ್ಲೆಗೆ ಒಳಗಾದ ಮಾರುತಿ ಗೌಡ ಅವರ ಆರೋಗ್ಯದ ಬಗ್ಗೆ ನಾಗರತ್ನ ಕಾಳಜಿ ವಹಿಸಿದ್ದಾರೆ.
ಇನ್ನೊಂದು ಕಡೆ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಜಾಮೀನು ನಿರಾಕರಣೆ ಆದ ಕಾರಣ ಈಗ ದುನಿಯಾ ವಿಜಯ್ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಗುರುವಾರ ವಿಜಿ ಪರ ವಕೀಲ ಶಿವಕುಮಾರ್ ಅವರು ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ವಿಚಾರಣೆ ಮಾಡಿದ ಸೆಷನ್ಸ್ ಕೋರ್ಟ್ ಸೆಪ್ಟೆಂಬರ್ 29ಕ್ಕೆ ವಿಚಾರಣೆ ಮುಂದೂಡಿದೆ. ಅಲ್ಲಿಗೆ ಶನಿವಾರ ವಿಜಿ ಅವರ ಜಾಮೀನು ಅರ್ಜಿ ನ್ಯಾಯಧೀಶರ ಮುಂದೆ ಬರಲಿದ್ದು, ಬೇಲ್ ಕೊಡ್ಬೇಕಾ ಅಥವಾ ಬೇಡವಾ ಎಂದು ತೀರ್ಮಾನಿಸಲಿದ್ದಾರೆ.


Click it and Unblock the Notifications











